ಸತತ ಅಧ್ಯಯನವೇ ಯಶಸ್ಸಿನ ಮೂಲ
ಬಾದಾಮಿ,ಮಾ23: ಮಕ್ಕಳು ಸತತ ಅಧ್ಯಯನಶೀಲರಾಗಬೇಕು ಅಂದಿನ ಕೆಲಸವನ್ನು ಅಂದೆ ಮಾಡಿದರೆ ಅಂತಹ ಮಕ್ಕಳು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಶಿಕ್ಷಕ ಉಜ್ವಲ ಬಸರಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ತಾಲೂಕಿನ ಕರಡಿಗುಡ್ಡ ಎಸ್.ಎನ್.ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಸುಭ ಕೋರುವ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಮುಂದುವರಿದ ಜಗತ್ತಿನಲ್ಲಿ ಬದುಕುತ್ತಿರುವ ನಾವು ಪ್ರಯತ್ನಶೀಲರಾಗಿರಬೇಕು ಎಂದರು.
ವೇದಿಕೆಯ ಮೇಲೆ ಗ್ರಾ.ಪಂ.ಸದಸ್ಯರಾದ ಫಕೀರಪ್ಪ ನರಿ, ಮಾರುತಿ ಪೂಜಾರ, ಪಕೀರಪ್ಪ ಕ್ಯಾತನವರ, ಭೀಮಶಿ ಶೆಟ್ಟಪ್ಪನವರ, ತುಕಾರಾಂ ಹಿರಿಯನ್ನವರ, ಹನುಮಂತ ಕಮಲದಿನ್ನಿ, ಬಸವರಾಜ ತಳವಾರ, ಮಲ್ಲಪ್ಪ ನರಿ, ಜಲಗೇರಿ ಭಾಗವಹಿಸಿದ್ದರು. ಎಸ್.ಎಸ್.ಬಿರಾದಾರ್ ವಾರ್ಷಿಕ ವರದಿ ವಾಚನ ಮಾಡಿದರು. ಆರ್.ಸಿ.ಮರಿಗೌಡರ ಸ್ವಾಗತಿಸಿದರು. ಎಂ.ಜಿ.ಚೌದರಿ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಇರ್ಫಾನ್ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಸಿ.ವಿ.ಸೂಡಿ ವಂದಿಸಿದರು.