ಕಬ್ಬಡಿ ಪ್ರೀಮಿಯರ್ ಲೀಗ್ : ಭೂಮಿಪೂಜೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೩; ಜನಪ್ರಿಯ ಕ್ರೀಡಾ ಸಮಿತಿ ಹಾಗೂ ಜಿಲ್ಲಾ ಕ್ರೀಡಾಪಟುಗಳ ಹಾಗೂ ಸಾಂಸ್ಕೃತಿಕ ಸಂಸ್ಥೆ ಇವರ ಆಶ್ರಯದಲ್ಲಿ ಮಾ. 28 ರಿಂದ 31 ರವರೆಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಬ್ಬಡಿ ಪ್ರೀಮಿಯರ್ ಲೀಗ್ (JKPL) -24 ಏರ್ಪಡಿಸಲಾಗಿದೆಅದರ ಪ್ರಯುಕ್ತ  ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತ್ಯೇಕ ಗ್ಯಾಲರಿ ನಿರ್ಮಿಸಲು ಭೂಮಿ ಪೂಜೆ ಮಾಡಲಾಯಿತು. ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ, ಶಾಂತಕುಮಾರ್, ಎಂ ನಾಗರಾಜ್, ರಾಕೇಶ್ ನಾಗರಾಜ್, ಸುಬ್ಬಣ್ಣ, ಜಯಪ್ರಕಾಶ್ ಗೌಡ ಇನ್ನು ಮುಂತಾದವರಿದ್ದರು