ಹೋಳಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ
ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.23: 2024 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ಆಯೋಗವು  ನೀತಿ ಸಂಹಿತೆ  ಮಾರ್ಗಸೂಚಿಯನ್ನು ಮಾಡಲಾಗಿದೆ ಇದನ್ನು  ಮನಗೊಂಡು ರಂಜಾನ್  ಮತ್ತು ಹೋಳಿ ಹಬ್ಬವನ್ನು ಸಾರ್ವಜನಿಕರು  ಶಾಂತಿಯಿಂದ ಹಾಗೂ ಉತ್ತಮ ಬಾಂದವ್ಯದಿಂದ ಆಚರಣೆ ಮಾಡಬೇಕು ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶುಕ್ರವಾರ ಶಾಂತಿ ಸಭೆಯ ಉದ್ದೇಶಿಸಿ  ಮಾತನಾಡಿದರು.
ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಕಾನೂನು ಬಾಹಿರ ಚಟುವಟಿಕೆಗಳು  ನಡೆಸದಂತೆ ಕಾನೂನು ಚೌಕಟ್ಟಿನಲ್ಲಿ ಹಬ್ಬವನ್ನು ಆಚರಣೆ ಮಾಡಬೇಕು ಇಲ್ಲವಾದರೆ  ನಿರ್ದಕ್ಷಣ್ಯಾವಾಗಿ  ಕಾನೂನು ಕ್ರಮ ವಹಿಸಲಾಗುವುದು ಎಂದರು.
ನಂತರ ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ ಮಾತನಾಡಿ
ಹೋಳಿ ಹಬ್ಬದಲ್ಲಿ ಆರೋಗ್ಯಕ್ಕೆ  ಅಪಾಯಕಾರಿಯಾದ ಆಯಿಲ್ ಪೇಂಟ್, ಹಾಕುವುದು ಮೊಟ್ಟೆಗಳನ್ನು ಹೊಡೆಯುವುದು  ನಿಲ್ಲಿಸಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ವಾಲ್ಮೀಕಿ ಮುಖಂಡ ಶ್ರೀನಿವಾಸ್, ಕಂದಗಲ್ ಪರಶುರಾಮ್, ಮುಸ್ಲಿಂ ಮುಖಂಡರಾದ  ಆಯುಬ್ ಸಾಬ್, ರಹಮತುಲ್ಲಾ ಸಾಬ್, ಭಾಷಸಾಬ್, ಮಾಬೂಸಾಬ್, ನೂರ್ ಮೊಹಮ್ಮದ್, ಇರ್ಫಾನ್ ಮುಂತಾದವರು ಇದ್ದರು