ಉಳಿತಾಯ ಬಜೆಟ್‌ಗೆ ಅನುಮೋದನೆ
ಮಾಲೂರು ಮಾ೨೩: ಪಟ್ಟಣದ ಪುರಸಭೆಯ ೨೦೨೪-೨೫ ಸಾಲಿನ ೧,೩೮,೦೯,೧೨೪ ರೂಗಳ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಮಂಡಿಸಿದ ಉಳಿತಾಯ ಬಜೆಟ್‌ಗೆ ಆಡಳಿತ ಅಧಿಕಾರಿ ತಹಶಿಲ್ದಾರ್ ಕೆ.ರಮೇಶ್ ಅನುಮೋದಿಸಿದರು.
ಪಟ್ಟಣದ ಪುರಸಭೆಯಲ್ಲಿ ಪ್ರತಿ ವರ್ಷ ಮುಂಬರುವ ವರ್ಷಕ್ಕೆ ಅಂದಾಜು ಆಯವ್ಯಯ ಘೋಷಣೆ ನಡೆಯುತ್ತದೆ.ಪ್ರಸತ್ತ ವರ್ಷ ಪುರಸಭೆಯಲ್ಲಿ ಅಧ್ಯಕ್ಷರು ಇಲ್ಲದ ಕಾರಣ ಆಡಳಿತ ಅಧಿಕಾರಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಆಯವ್ಯಯ ಸಭೆ ನಡೆದಿದ್ದು, ಪುರಸಭಾ ಮುಖ್ಯಾಧಿಕಾರಿ ಬಜೆಟ್ ಮಂಡನೆ ಮಾಡಿ ೨೦೨೪-೨೫ ನೇ ಸಾಲಿಗೆ ೧,೩೮,೦೯,೧೨೪ಗಳ ಉಳಿತಾಯ ಬಜೆಟ್ ಪ್ರಕಟಿಸಿದ್ದು, ನಗದು ಮತ್ತು ಬ್ಯಾಂಕ್ ಶಿಲ್ಕುಗಳು ೩೦,೮೭,೧೯,೧೨೪ ಸ್ವೀಕೃತಿಗಳು, ೫೭,೩೫,೭೭,೦೦೦ ಪಾವತಿಗಳು, ೮೬,೮೪,೮೭,೦೦೦ ರಾಜಸ್ವ ಖಾತೆಯಲ್ಲಿ ಹೆಚ್ಚುವರಿ ೨೯,೪೯,೧೦,೦೦೦ ಅಂತಿಮ ಶಿಲ್ಕು, ನಗದು ಮತ್ತು ಬ್ಯಾಂಕ್ ಶಿಲ್ಕುಗಳು ಸೇರಿದಂತೆ ಒಟ್ಟಾರೆ ಉಳಿತಾಯ ೧,೩೮,೦೯,೧೨೪ ರೂಗಳ ಬಜೆಟ್ ಪ್ರಕಟಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಲೆಕ್ಕ ಶಾಖೆಯ ಲೆಕ್ಕಾಧಿಕಾರಿ ಜಯರಾಮ್, ಕಂದಾಯ ಅಧಿಕಾರಿ ರೇಣುಕಾ, ಅಭಿಯಂತರ ಶಾಲಿನಿ, ನಾಗರಾಜ್, ಇನ್ನಿತರರು ಹಾಜರಿದ್ದರು.