ಮಿತಿಮೀರಿದ ಅದಿರು ಲಾರಿಗಳ ಸಂಚಾರದಿಂದ ಮುಕ್ತಿಗೆ ಬೈಪಾಸ್ ನಿರ್ಮಿಸಲು ಆಗ್ರಹ
ಸಂಜೆವಾಣಿ ವಾರ್ತೆ
ಸಂಡೂರು: ಮಾ:23 :ತಾಲೂಕಿನಲ್ಲಿ ಬನ್ನಿಹಟ್ಟಿ ಗ್ರಾಮದಲ್ಲಿ ವಿಪರೀತ ಅದಿರು ಲಾರಿಗಳ ಸಂಚಾರದಿಂದ ರೈತರು, ವಿದ್ಯಾರ್ಥಿಗಳು, ಮಕ್ಕಳು ಓಡಾಡುವುದು ದುಸ್ತರವಾಗಿದೆ ಅದ್ದರಿಂದ ಸಾರ್ವಜನಿಕರ ಹಿತವನ್ನು ಗಮನಿಸಿ ಸರ್ಕಾರ ತಕ್ಷಣ ಅದಿರು ಲಾರಿಗಳ ಸಂಚಾರಕ್ಕೆ ಬೈಪಾಸ್ ರಸ್ತೆಯನ್ನು ಮಾಡುವ ಮೂಲಕ ಬನ್ನಿ ಹಟ್ಟಿ ಗ್ರಾಮದ ಜನತೆಯನ್ನು ರಕ್ಷಿಸಬೇಕು ಎಂದು ಮುಖಂಡರಾದ ಬಿ.ಕೆ.ಅನಂತಕುಮಾರ್ ಒತ್ತಾಯಿಸಿದರು.
ಅವರು ತಾಲೂಕಿನ ಬನ್ನಿಹಟ್ಟಿ ಗ್ರಾಮಸ್ಥರ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ತಾಲೂಕಿನ ಪ್ರಮುಖ ಉದ್ಯೋಗ ಕೇಂದ್ರವಾದ ತಾರಾನಗರ, ಬನ್ನಿಹಟ್ಟಿ, ತೋರಣಗಲ್ಲು, ಈ ಗ್ರಾಮಗಳಲ್ಲಿ ನಿತ್ಯ 5 ರಿಂದ 6 ಸಾವಿರ ಅದಿರು ಲಾರಿಗಳ ಸಂಚಾರ ಹಗಲು ರಾತ್ರಿ ನಡೆಯುತ್ತದೆ, ಅಲ್ಲದೆ ನೇರ ಸಂಡೂರು ಬಳ್ಳಾರಿ ರಸ್ತೆಯ ಜೊತೆಗೆ, ಒಳಭಾಗದ ರಸ್ತೆಯಿಂದಲೂ ಸಹ ಅದಿರು ಲಾರಿಗಳ ಸಂಚಾರ ವಿಪರೀತವಾಗಿವೆ ಇದರಿಂದ ಸಾರ್ವಜನಿಕರಿಗೆ ನಿತ್ಯ ಧೂಳಿನ ಸಿಂಚನವಾಗುತ್ತಿದೆ ಇದರಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗುತ್ತಿದ್ದು ಬೈಪಾಸ್ ರಸ್ತೆ ನಿರ್ಮಾಣದಿಂದ ಶಬ್ದಮಾಲಿನ್ಯ, ಧೂಳು, ಹಾಗೂ ಸಂಚಾರಕ್ಕೆ ಅನುಕೂಲವಾಗುತ್ತದೆ ಅದ್ದರಿಂದ ಸರ್ಕಾರ ತಕ್ಷಣ ಗಮನಹರಿಸುವ ಮೂಲಕ ಬನ್ನಿಹಟ್ಟಿ ಗ್ರಾಮಕ್ಕೆ ಬೈಪಾಸ್ ರಸ್ತೆಯನ್ನು ಮಾಡಬೇಕು ಎಂದು ಗ್ರಾಮಸ್ತರು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿ ತಹಶೀಲ್ದಾರ್ ಅನಿಲ್ ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮಪ್ಪ, ರಾಮನಗೌಡ, ತಿಪ್ಪೇಸ್ವಾಮಿ, ನಾಗರಾಜ, ರಾಮಯ್ಯ, ಶಂಕರ್, ಪರಶುರಾಮ, ಮಲ್ಲೆಶ್, ಗಾದಿಲಿಂಗಪ್ಪ, ಕರಿಯಪ್ಪ, ಇತರರು ಉಪಸ್ಥಿತರಿದ್ದು ಮನವಿ ಪತ್ರ ಸಲ್ಲಿಸಿದರು.