ಏಪ್ರೀಲ್ 2,3 ಗ್ರಾಮದೇವತೆ ಊರಮ್ಮದೇವಿಯ ಜಾತ್ರಾಮಹೋತ್ಸವ26 ರಿಂದಲೇ ಧಾರ್ಮಿಕ ಆಚರಣೆಗಳ ಆರಂಭ
ಸಂಜೆವಾಣಿ ವಾರ್ತೆ
ಹೊಸಪೇಟೆ:ಮಾ,23-  ಅನೇಕ ದಶಕಗಳ ಇತಿಹಾಸವುಳ್ಳ ಹೊಸಪೇಟೆಯ ಗ್ರಾಮ ದೇವತೆ ಊರಮ್ಮದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 2 ಮತ್ತು 3 ರಂದು ನಡೆಯಲಿದೆ ಎಂದು ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಬಂಡೆ ಶ್ರೀನಿವಾಸ  ತಿಳಿಸಿದರು.
ಹೊಸಪೇಟೆಯ ಗ್ರಾಮ ದೇವತಾ ಊರಮ್ಮ ದೇವಿಯ ದೇವಸ್ಥಾನದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪ್ರತಿ ಐದು ವರ್ಷಗಳಿಗೆ ಒಮ್ಮೆ ನಡೆಯುವ ಈ ಜಾತ್ರೆ ಕಳೆದ ಬಾರಿ ಕರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ನಡೆದಿರಲಿಲ್ಲಾ ಈ ವರ್ಷ ಅದ್ಧೂರಿಯಾಗಿ ನಡೆಸಲು ಇಲಾಖೆ ಮತ್ತು ಜೀಣೋದ್ಧಾರ ಸಮಿತಿ ತಿರ್ಮಾನಿಸಿದೆ.
 ಜಾತ್ರೆಯ ಪ್ರಯುಕ್ತ ಶ್ರೀ ಚಂಡಿ ಯಾಗ, ದುರ್ಗಾ ದೀಪಾರಾಧನೆ, ಕನ್ನಿಕಾಪೂಜೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ಮಾರ್ಚ 26 ರಿಂದ ಏಪ್ರಿಲ್ 3ರ ವರೆಗೂ ನಡೆಯಲಿವೆ  ಧಾರ್ಮಿಕ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗುವಂತೆ ಮಾಡಲು ಕೋರಿದರು.
ನಗರದಾದ್ಯಂತ ದೀಪಾಲಂಕಾರ, ನಗರದ ಒಂಬತ್ತು ಪ್ರಮುಖ ವೃತಗಳಲ್ಲಿ ಬೃಹತ್ ದೀಪಾಲಂಕಾರ ಮೂರ್ತಿ ಸ್ಥಾಪನೆ ಮಾಡುತ್ತೇವೆ ಎಂದರು.
ಚಿಕ್ಕ ಮಂಗಳೂರಿನ ಶ್ರೀಲಕ್ಷ್ಮೀನಾರಾಯಣ ಭಟ್ಟರ ನೇತೃತ್ವದಲ್ಲಿ ಎಲ್ಲಾ ಹೋಮ ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶೋಭಾಯಾತ್ರೆ: ಐದು ವರ್ಷಗಳ ಈ ವಿಶೇಷ ಜಾತ್ರಾ ಮಹೋತ್ಸವದ ಪ್ರಯುಕ್ತ ಏಪ್ರಿಲ್ 2 ರಂದು ಗಂಗಾಪೂಜೆ, ‍ನಗರದ ಪ್ರಮುಖ ಬೀದಿಗಳಲ್ಲಿ ನಾಡಿನ ವಿವಿಧ ಕಲಾತಂಡಗಳಿಂದ ಶೋಭಾಯಾತ್ರೆ ಏಪ್ರಿಲ್2. ರಂದು ಮಧ್ಯಾಹ್ನ 3ಗಂಟೆಯಿಂದ ನಡೆಯಲಿದೆ. ನಗರದ ಜಂಬೂನಾಥ ದೇವಸ್ಥಾನ ರಸ್ತೆಯಿಂದ ‍ಮೇನ್ ಬಜಾರ, ಡ್ಯಾಂ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ನಡೆಯಲಿದೆ, ಮೇನ ಬಜಾರದ ವಡಕರಾಯ ತೇರಿನ ಮುಂದೆ ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್.ಗಾಳೆಪ್ಪ, ಮರಡಿ ರಮೇಶ(ರಾಮಣ್ಣ), ಬಂದಿ ಜಂಬಣ್ಣ, ತಾರಿಹಳ್ಳಿ ವಾಸಪ್ಪ,ಬಗಡಿ ಮಂಜುನಾಥ, ಹೆಚ್ ಹನುಮಂತಪ್ಪ, ರಾಘವೇಂದ್ರ ಗೌಡ,  ಕಾರ್ಯದರ್ಶಿ ವಿ.ಶಂಕರಾಚಾರಿ, ಇಮಾಮ್ ನಿಯಾಜಿ, ಸಂತೋಷ, ಕೆ.ದಿವಾಕರ, ಕಿಚಡಿ ಶ್ರೀನಿವಾಸ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ದೇವಸ್ಥಾನ ಭಕ್ತರು ಪಾಲ್ಗೊಂಡಿದ್ದರು.
One attachment • Scanned by Gmail