47ವರ್ಷದ ಬಳಿಕ ಒಕ್ಕಲಿಗ ಸಮುದಾಯಕ್ಕೆ ಅವಕಾಶ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.23:- 1977ರಲ್ಲಿ ತುಳಸಿ ದಾಸಪ್ಪ ಅವರ ನಂತರ 47 ವರ್ಷದ ಬಳಿಕ ಅವಕಾಶ ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯಕ್ಕೆ ಕ್ಷೇತ್ರದಲ್ಲಿ ಅವಕಾಶ ಕೊಟ್ಟಿದ್ದು, ಇದನ್ನು ಉಳಿಸಿಕೊಳ್ಳುವುದು ಬಿಡುವುದು ಆ ಸಮುದಾಯಕ್ಕೆ ಸೇರಿದ್ದಾಗಿದೆ. ನಾಲ್ಕು ಬಾರಿ ಚುನಾವಣೆಯಲ್ಲಿ ಸೋತು ಸಾಕಾಗಿದೆ. ಕೊನೆಯ ಬಾರಿಯ ಅವಕಾಶ ಮಾಡಿಕೊಡಿ ಎಂದು ಕೇಳುತ್ತೇನೆ. ಈ ಬಾರಿ ಮತದಾರರು ಕೈ ಹಿಡಿಯಲಿಲ್ಲ ಎಂದರೆ ನಾನು ಸತ್ತಂತೆ ಆಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಭಾವುಕರಾದರು.
ಟಿಕೇಟ್ ಘೋಷಣೆ ಬಳಿಕ ಪ್ರಥಮಬಾರಿಗೆ ಮೈಸೂರಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪತ್ರಕರ್ತರ ಭವನದ ಕಾರ್ಯಕ್ರಮದಲ್ಲಿ ನಿಮಗೆ ಬಂದ ಕರೆ ಯಾವುದು? ಅಲ್ಲಿ ಮಾತನಾಡಿದ ಬಳಿಕ ನಿಮ್ಮ ಪರವಾಗಿ ನಡೆಯುತ್ತಿದ್ದ ಪ್ರತಿಭಟನೆ ಧಿಢೀರ್ ನಿಲ್ಲಲ್ಲು ಕಾರಣ ತಿಳಿಸಿ. ಬಿಜೆಪಿ ಪಕ್ಷ ರಾಜ್ಯದಲ್ಲಿ 1 ಕ್ಷೇತ್ರವನ್ನಷ್ಟೇ ಒಕ್ಕಲಿಗ ಸಮುದಾಯಕ್ಕೆ ನೀಡಿದ್ದು, ಕಾಂಗ್ರೆಸ್‍ಗೆ 8ಕ್ಷೇತ್ರವನ್ನು ನೀಡಿದೆ. ಸದಾನಂದಗೌಡ, ಸಿ.ಟಿ.ರವಿ ಹಾಗೂ ಸಂಸದ ಪ್ರತಾಪಸಿಂಹ ಅವರಿಗೆ ಯಾಕೆ ಟಿಕೇಟ್ ತಪ್ಪಿದೆ ಎಂಬುದು ಒಕ್ಕಲಿಗರ ಪ್ರಶ್ನೆಯಾಗಿದ್ದು, ಇದಕ್ಕೆ ಬಿಜೆಪಿ ಉತ್ತರಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಹೇಳಲಿ: ಒಂದು ವರ್ಷದಿಂದ ಪ್ರತಾಪಸಿಂಹ ಅವರ ಸುಳ್ಳು ಹೇಳಿಕೆಗಳನ್ನು ಜನಸಾಮಾನ್ಯರಿಗೆ ತಿಳಿಸುತ್ತಾ ಬಂದಿದ್ದು, ಇದೇ ಕಾರಣಕ್ಕಾಗಿ ಅವರ ವಿರುದ್ಧ ರಾಜಕೀಯವಾಗಿ ಸೆಣಸಾಡಲು ಪಕ್ಷದಲ್ಲಿ ಹೋರಾಡಲು ಟಿಕೇಟ್ ಪಡೆದು ಬಂದಿದ್ದೇನೆ. ಆದರೆ, ಅವರನ್ನು ಬದಲಾವಣೆ ಮಾಡಿರುವುದಕ್ಕೆ ಬಿಜೆಪಿ ಕಾರಣ ಕೊಡಬೇಕಿದೆ. ಭ್ರಷ್ಟಾಚಾರದ ಆರೋಪವೇ, ಆಡಿಯೋ- ವಿಡಿಯೋ ಎನಾದರೂ ಇದಿಯೇ?, ಸಂಸತ್‍ನಲ್ಲಿ ಅವರು ಕೊಟ್ಟ ಪಾಸ್‍ನಿಂದ ದಾಳಿ ನಡೆದ ಪ್ರಕರಣವೇ ಎನೂ ಕಾರಣ ಎಂದು ಹೇಳಿದರು.
ರಾಜವಂಶಸ್ಥರು ವಸ್ರ್ಸ್ ಸಾಮಾನ್ಯ ಪ್ರಜೆ: ಬಿಜೆಪಿ ಅಭ್ಯರ್ಥಿ ರಾಜವಂಶಸ್ಥರ ದತ್ತುಪುತ್ರ ವರ್ಸಸ್ ನಾನು ಸಾಮಾನ್ಯ ಪ್ರಜೆ ನಮ್ಮಿಬ್ಬರ ನಡುವೆ ಫೈಟ್ ಆಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೇಲೆ ಅಪಾರ ಗೌರವವಿದೆ. ಮೀಸಲಾತಿ ತಂದ ಕೀರ್ತಿ ರಾಜಮನೆತನಕ್ಕೆ ಇರುವುದು. ಆದರೆ ಮೀಸಲಾತಿ, ದಲಿತ, ಸಂವಿಧಾನ ವಿರೋಧಿ ಪಕ್ಷದಲ್ಲಿ ಅವರಿರುವುದು ಬೇಸರ ತರಿಸಿದೆ. ಕಾಂಗ್ರೆಸ್‍ನ ಸಾಮಾಜಿಕ ನ್ಯಾಯ ಉಳಿಯಬೇಕಿದೆ. 30 ವರ್ಷದಿಂದ ಜನಸಾಮಾನ್ಯರ ಜತೆ ಹೋರಾಟ ಮಾಡಿದ್ದೇನೆ. 2018ರಲ್ಲಿ ಪದವೀಧರರ ಕ್ಷೇತ್ರದಿಂದ 185 ಮತಗಳಿಂದ ಸೋತಿದ್ದೇನೆ. ರಾಜವಂಶಸ್ಥರನ್ನು ಬಲವಂತವಾಗಿ ಕರೆತಂದಿರುವುದು ಪ್ರತಾಪಸಿಂಹ ಅವರಿಗೆ ಗೊತ್ತಿದೆ. ನಾನು 24ತಾಸೂ ಜನರ ಮನೆ ಕಾಯುವನಿದ್ದೇನೆ. ಅವರ ಮನೆ ಕಾಯುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.
ಗೆಲುವಿನ ಲೆಕ್ಕ ಕೊಟ್ಟ ಲಕ್ಷ?ಮಣ್: ಕಳೆದ ವಿಧಾನ ಸಭಾ ಚುನಾವಣೆಯನ್ನು ಗಮನಿಸಿದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.49ರಷ್ಟು, ಜೆಡಿಎಸ್‍ಗೆ ಶೇ.29, ಬಿಜೆಪಿ ಶೇ.17ರಷ್ಟು ಮತ ಬಂದಿದ್ದು ಇದನ್ನು ಆಧಾರಿಸಿದರೂ ನನಗೆ ಗೆಲ್ಲುವುದು ಖಚಿತವಾಗಿದೆ. ನಾನು ಸುಳ್ಳು ಹೇಳಲ್ಲ, ಸುಳ್ಳಿನ ರೈಲು ಸಹ ಬಿಡಲ್ಲ. ಯಾರದೋ ಯೋಜನೆಯನ್ನು ನನ್ನ ಯೋಜನೆ ಎನೆಲ್ಲಾ? ಪ್ರತಾಪಸಿಂಹ ಅವರ ಬಗ್ಗೆ ವೈಯುಕ್ತಿಕವಾಗಿ ಯಾವುದೇ ವೈರತ್ವ ಸಹ ಇಲ್ಲ. ರಾಜಕೀಯವಾಗಿ ಸುಳ್ಳು ಹೇಳಿದ್ದರಿಂದ ಅದನ್ನು ದಾಖಲೆ ಸಮೇತ ಹೇಳುತ್ತಿದ್ದೆಯಷ್ಟೆ, ನನ್ನ ಮುಂದಿರುವುದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 3800 ಕೋಟಿ ರೂ. ಅನ್ನು ಮೈಸೂರು ನಗರದ ಅಭಿವೃದ್ಧಿಗೆ ನೀಡಿದ್ದಾರೆ. 1500ಕೋಟಿ ರೂ.ಗಳನ್ನು ಈಗಿನ 8 ತಿಂಗಳಿಗೆ ಕೊಟ್ಟಿದ್ದಾರೆ. ಇದನ್ನು ಜನರಿಗೆ ತಿಳಿಸುತ್ತೇನೆ. ಹೀಗೆ ಕೆಲಸ ಮಾಡುತ್ತಿದ್ದು, ಕೂಲಿ ಕೇಳುತ್ತಿದ್ದೇವೆಂದರು.
ವಿರೋಧಿಗಳನ್ನು ಜೈಲಿಗಟ್ಟುವ ಹುನ್ನಾರ: ಕ್ರೇಜಿವಾಲ್ ಅವರನ್ನು ವಿನಾಕಾರಣ ಜೈಲಿಗೆ ಕಳುಹಿಸಲಾಗಿದೆ. ಅಂತೆಯೇ ದೇಶದಲ್ಲಿ ಬಿಜೆಪಿ ವಿರೋಧಿಗಳೆಲ್ಲರನ್ನೂ ಜೈಲಿಗೆ ಕಳುಹಿಸುವ ಕೆಲಸ ಆಗುತ್ತಿದೆ. ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಅವರು ಒಂದು ಸಣ್ಣ ಕಾನೂನು ಬಾಹಿರ ಚಟುವಿಟಿಕೆ ಇಲ್ಲದರಿಂದ ಅವರನ್ನು ಮುಟ್ಟಲು ಆಗುತ್ತಿಲ್ಲ. ರಾಜ್ಯದಲ್ಲಿಯೂ ಈಗ ಜೆಡಿಎಸ್ ಅನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ನೂರಕ್ಕೆ ನೂರರಷ್ಟು 22 ರಿಂದ 25ರಷ್ಟು ಗೆಲ್ಲಿಸಿಕೊಳ್ಳುತ್ತೇವೆ. ಮೈಸೂರಲ್ಲಿ ಬಿಜೆಪಿ ಒಂದು ಪಕ್ಷ ಆರು ಬಾಗಿಲಾಗಿದ್ದು, ಜೆಡಿಎಸ್‍ಗೆ ಅಸ್ತಿತ್ವವೇ ಇಲ್ಲದಂತೆ ಮಾಡಿದ್ದಾರೆಂದು ಹೇಳಿದರು.