ದಾಂಪತ್ಯ ಜೀವನ ಹಾಲು ಜೇನಿನಂತಿರಬೇಕು:ಮಸೂತಿಶ್ರೀ
ತಾಳಿಕೋಟೆ:ಮಾ.23: ಮಾನವನ ಜೀವನದಲ್ಲಿ ಬರುವ ಆಶ್ರಮಗಳಲ್ಲಿ ಗ್ರಹಸ್ಥ ಆಶ್ರಮವೆಂಬುದು ಅತೀ ಮುಖ್ಯವಾಗಿ ಜೀವನವನ್ನು ಸುಃಖಮಯವಾಗಿ ಸಾಗಿಸಿಕೊಂಡು ಹೋಗುವಂತಹ ಈ ಆಶ್ರಮದಲ್ಲಿ ಸತಿಪತಿಗಳು ಒಂದಾಗಿ ಹಾಲು ಜೇನಿನಂತೆ ಬೆರೆತು ಜೀವನ ಸಾಗಿಸಿದರೆ ಅದು ಆದರ್ಶ ದಾಂಪತ್ಯ ಜೀವನವಾಗಿ ಮಾರ್ಪಡುವದರಲ್ಲಿ ಯಾವ ಸಂಶಯವಿಲ್ಲಾವೆಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಶುಕ್ರವಾರರಂದು 12ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು 18ನೇ ಶತಮಾನದಲ್ಲಿ ನಿರುಪಾದೀಶ್ವರ ವಿವಾಹವಾದ ತಕ್ಷಣ ತಂದೆ ಗುರುಲಿಂಗಯ್ಯ ತಾಯಿ ರಾಚಮ್ಮನವರು ನಿರುಪಾದೀಶ್ವರನ ಪತ್ನಿ ಚನ್ನಮಲ್ಲಮ್ಮ ಎಂಬ ಸೋಸೆಯನ್ನು ಕರೆದುಕೊಂಡು ಬರಲು ಮಲ್ಲಮ್ಮಳ ತವರು ಮನೆಯಾದ ರಾಯಚೂರ ಜಿಲ್ಲೆಯ ಬಳಗಾನೂರ ಗ್ರಾಮಕ್ಕೆ ಎತ್ತಿನ ಬಂಡೆಯನ್ನು ಕಟ್ಟಿಕೊಂಡು ಹೋಗುತ್ತಾರೆ ಮಾವನವರ ಆಗಮನ ಕಂಡ ಸೋಸೆ ಚೆನ್ನಮಲ್ಲಮ್ಮ ಆಕೆಯೂ ಕೂಡಾ ವಿದಿ ವಿಧಾನದಂತೆ ಕೆಲವು ಮನೆಗಳಿಗೆ ಹೋಗಿ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದು ಗಂಡನ ಮನೆಗೆ ಹೋಗುವ ತಯಾರಿ ನಡೆಸುತ್ತಾಳೆ ಆ ಸಮಯದಲ್ಲಿ ಚೆನ್ನಮಲ್ಲಮ್ಮಳ ತಂದೆ ಶಿವಯ್ಯ ತಾಯಿ ಶಿವಬಸಮ್ಮ ಇವರ ಪಾದಕ್ಕೆ ನಮಸ್ಕರಿಸಿ ಗಂಡನ ಮನೆಗೆ ತೆರಳು ತಯಾರಿಯಾದಾಗ ನಿರುಪಾದೀಶ್ವರ ಪತ್ನಿ ಕೊರಳಲ್ಲಿ ಹಾಕಿಕೊಂಡ ಚಿನ್ನದ ಸರ ಚಿನ್ನದ ಎಲ್ಲ ಒಡವೆಗಳನ್ನು ನಿನ್ನ ತವರು ಮನೆಯಲ್ಲಿಯೇ ಇಟ್ಟು ಕೇವಲ ಮಾಂಗಲ್ಯದೊಂದಿಗೆ ಬರಬೇಕೆಂದು ಹೇಳಿದ ತಕ್ಷಣ ಪತಿಯ ಮಾತನ್ನು ಲಕ್ಷೀಸಿದ ಚೆನ್ನಮಲ್ಲಮ್ಮ ಚಿನ್ನದ ಒಡವೆಗಳನ್ನು ತೆಗೆದು ಗಂಡನ ಮನೆಗೆ ಆಗಮಿಸುತ್ತಾಳೆಂದು ಶ್ರೀಗಳು ಹೇಳಿದರು.
ಪದ್ದತಿಯಂತೆ ಸತಿ ಪತಿಯರಿಬ್ಬರು ವಿವಾಹವಾದ ನಂತರ ದೇವರಿಗೆ ಹೋಗಬೇಕೆಂಬ ಇಚ್ಚೆಯಂತೆ ಹಂಪಿ ವೀರುಪಾಕ್ಷ ದೇವಾಲಯಕ್ಕೆ ತೆರಳುತ್ತಾರೆ ಆ ದೇವಾಲಯದಲ್ಲಿ ವೀರುಪಾಕ್ಷ ದೇವನಿಗೆ ಭಕ್ತಿಯಿಂದ ನಮಿಸಿ ತಮ್ಮ ಬೇಕು ಬೇಡಿಕೆಗಳನ್ನು ಇಡೇರಿಸಿಕೊಳ್ಳಲು ಒಬ್ಬ ಒಳ್ಳೆಯ ಮಗನನ್ನು ದಯಪಾಲಿಸು ಎಂಬ ಇಚ್ಚೆ ವ್ಯಕ್ತಪಡಿಸಿದ ಈ ಸತಿ ಪತಿ ಇಬ್ಬರು ಸ್ವ ಗ್ರಾಮಕ್ಕೆ ಆಗಮಿಸಿದಾಗ ಗಂಡನ ಮನೆಗೆ ಆಗಮಿಸಿದ ಚೆನ್ನಮಲ್ಲಮನ್ನು ಹಂಪಿ ವೀರುಪಾಕ್ಷ ದೇವರಿಗೆ ಹೋಗಿದ್ದೀರಿ ಅಲ್ಲಿ ಏನೇನು ನೋಡಿ ಬಂದೀರಿ ಎಂದು ಜನತೆ ವಿಚಾರಿಸಿದಾಗ ಆಕೆ ಉತ್ತರಿಸಿದ್ದು ಏನೆಂದರೆ ಅಲ್ಲಿ ನನಗೆ ಯಾವುದು ಕಂಡಿಲ್ಲಾ ಎಲ್ಲಿ ನೋಡಿದಲ್ಲಿಯೂ ಶ್ರೀ ವೀರುಪಾಕ್ಷ ದೇವನ ಪಾದಗಳೇ ಕಂಡವೆಂದು ಚೆನ್ನಮ್ಮಳು ತಿಳಿಸುತ್ತಾಳೆ ಸೋದರ ಮಾವನ ಮಗಳೆಂದು ನೀರುಪಾದೀಶ್ವರರು ಒಳ್ಳೆಯ ಆದ್ಯಾತ್ಮೀಕ ಜೀವಿ ದೊರೆತಿದ್ದಾಳೆಂಬ ಅಭಿಮಾನವನ್ನು ವ್ಯಕ್ತಪಡಿಸಿ ತನ್ನ ದಿನದ ಕಾಯಕವನ್ನು ಬರು ಹೋಗುವ ಕೇಳುಗರ ಮನದಲ್ಲಿಯ ವಿಚಾರದಂತೆ ತನಗೆ ದೇವನು ನೀಡಿದ ಬೆತ್ತದಿಂದ ತನ್ನ ಕಾಯಕವನ್ನು ಮಾಡುತ್ತಾ ಸಾಗುತ್ತಾನೆ ಇತನ ಮನೆ ಈ ಒಂದು ಒಳ್ಳೆಯ ಕಾಯಕದಿಂದ ಏರುತ್ತಾ ಸಾಗುತ್ತದೆ ತನ್ನ ಮಗಳ ಮನೆ ಎಂಬುದನ್ನು ಅರೀಯದೇ ಚೆನ್ನಮಲ್ಲಮ್ಮಳ ತಂದೆ ಶಿವಯ್ಯ ದುಷ್ಟ ಭಾವನೆಯೊಂದನ್ನು ತಂದು ಹೇಗಾದರೂ ಮಾಡಿ ಈ ನಿರುಪಾದೀಶ್ವರನ ಬೆತ್ತವನ್ನು ಸುಟ್ಟು ಹಾಕಿದರೆ ಎಲ್ಲವೂ ಇವನ ಕಾಯಕ ಬಂದ್ ಆಗುತ್ತದೆ ಎಂದು ಅರೀತು ಆ ದುಷ್ಟ ಬುದ್ದಿಯ ಕಾರ್ಯಕ್ಕೆ ನಿರುಪಾದೀಶ್ವರನ ಸೋದರ ಮಾವ ಶಿವಯ್ಯ ಮುಂದಾಗುತ್ತಾನೆಂದು ಶ್ರೀಗಳು ಹೇಳಿದರು.
ರಾಮಾಯಣದಲ್ಲಿಯ ಇತಿಹಾಸವನ್ನು ಬಿಚ್ಚಿ ಶ್ರೀಗಳು ಲಕ್ಷ್ಮಣನು ತನ್ನ ಹೆಂಡತಿಯನ್ನು ಬಿಟ್ಟು ಅಣ್ಣ ರಾಮನ ಹೆಂಡತಿಯನ್ನು ರಕ್ಷಣೆ ಮಾಡಲು ಮುಂದಾಗುತ್ತಾನೆ ರಾವಣನು ಸೀತಾದೇವಿಯನ್ನು ಅಪಹರಿಸಿ ತನ್ನ ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದನ್ನು ಲಕ್ಷೀಸದೇ ರಾಮ ಲಕ್ಷ್ಮಣ ಸಹೋದರ ಇಬ್ಬರು ಸೀತಾದೇವಿಯನ್ನು ಹುಡುಕಲು ಪ್ರಾರಂಬಿಸಿದಾಗ ಆಕೆಯ ತಲೆಯಲ್ಲಿ ಇಟ್ಟುಕೊಳ್ಳುವಂತಹ ಚಿನ್ನದ ಹೂವು ರಸ್ತೆಯಲ್ಲಿ ದೊರೆತಾಗ ರಾಮನು ಲಕ್ಷ್ಮಣನಿಗೆ ಕೇಳಿ ತಮ್ಮಾ ಇದು ಸೀತೆ ತಲೆಯಲ್ಲಿ ಇಟ್ಟುಕೊಳ್ಳುವ ಹೂವು ಅಲ್ಲವೇ ಎಂದು ಪ್ರಶ್ನೀಸಿದಾಗ ಅದು ಅಲ್ಲಾ ಎಂಬ ಉತ್ತರ ನೀಡಿದ ಲಕ್ಷ್ಮಣ ಹಾಗೆ ಮುಂದೆ ಹುಡುಕುತ್ತಾ ಸಾಗಿದಾಗ ಸೀತಾದೇವಿಯ ಎರಡು ಪಾದರಕ್ಷೆಗಳು ದೊರೆಯುತ್ತವೆ ಅದನ್ನು ನೋಡಿದ ಲಕ್ಷ್ಮಣನು ಹರ್ಷ ವ್ಯಕ್ತಪಡಿಸಿ ಅಣ್ಣಾ ಈ ಪಾದರಕ್ಷೆಗಳು ಸೀತಾದೇವಿಯದ್ದು ಇದುದ್ದು ಖಚಿತವೆಂದಾಗ ಇವು ಖಚಿತವೆಂದು ನಿನಗೆ ಹೇಗೆ ಗೊತ್ತು ಎಂದು ರಾಮನು ಲಕ್ಷ್ಮಣನಿಗೆ ಪ್ರಶ್ನೀಸಿದಾಗ ಲಕ್ಷ್ಮಣ ಉತ್ತರಿಸಿದ ಅಣ್ಣಾ ಇಷ್ಟು ದಿವಸವಾದರೂ ದಿನನಿತ್ಯ ಸೀತಾದೇವಿಯನ್ನು ನಾನು ನಮಸ್ಕರಿಸಿ ಬರುತ್ತಿದ್ದೆ ಹೋರುತು ಆ ಸಮಯದಲ್ಲಿ ಆಕೆಯ ಪಾದಗಳು ಹಾಗೂ ಪಾದರಕ್ಷೆಗಳನ್ನು ನೋಡುತ್ತಿದ್ದೆ ಆದರೆ ಆಕೆಯ ಮುಖವನ್ನು ಇನ್ನೂ ನಾನು ನೋಡಿಲ್ಲಾವೆಂದು ಹೇಳಿದನಂತೆ ಹಿಂದಿನ ಕಾಲದಲ್ಲಿ ಯಾವ ರೀತಿ ಸಂಸ್ಕಾರ ಇತ್ತು ಎಂಬುದನ್ನು ರಾಮಾಯಣದ ಘಟನೆಯನ್ನು ಉದಾರಿಸಿದ ಪುರಾಣಿಕರು ಹೆಣ್ಣಿನ ಸ್ಥಾನಮಾನ ಹಾಗೂ ಗಂಡಿನ ಸ್ಥಾನಮಾನ ಹೇಗಿತ್ತು ಹೇಗಿರಬೇಕೆಂಬುದನ್ನು ಬಹು ಮಾರ್ಮಿಕವಾಗಿ ವಿವಿಧ ಕತೆಗಳನ್ನು ಹೇಳುವದರೊಂದಿಗೆ ಉಪಸ್ಥಿತ ಎಲ್ಲ ಭಕ್ತ ಸಮೂಹಕ್ಕೆ ಮನವರಿಕೆ ಮಾಡಿ ಪುರಾಣವನ್ನು ಮುಂದುವರೆಸಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.