ಎಂಎಸ್ಸಿಯಲ್ಲಿ ಪ್ರತೀಕ್ಷಗೆ ಚಿನ್ನದ ಪದಕ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.23:- ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೌಕರರಾದ ಮಹೇಂದ್ರ ಕುಮಾರ್ ಮತ್ತು ಮಹಾದೇವಮ್ಮ ಅವರ ಪುತ್ರಿ ಎಂ. ಪ್ರತೀಕ್ಷ ಎಂಎಸ್ಸಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಮೈಸೂರಿನ ಜೆಎಸ್‍ಎಸ್ ಸೈನ್ಸ್ ಅಂಡ್ ಟೆಕ್ನಾಲಜಿ ಯುನಿವರ್ಸಿಟಿಯಲ್ಲಿ ಗಣಿತದಲ್ಲಿ ಮಾಸ್ಟರ್ ಡಿಗ್ರಿ ಪಡೆದು ಪ್ರಥಮ ರ್ಯಾಂಕ್‍ನಲ್ಲಿ ಉತ್ತೀರ್ಣರಾಗಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ಚಾಮರಾಜನಗgದÀ ಸಂತ ಜೋಸೆಫ್ ಶಾಲೆ, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಜೆಎಸ್‍ಎಸ್ ವಿದ್ಯಾಸಂಸ್ಥೆಯಲ್ಲಿ ಪಡೆದು, ಮೈಸೂರಿನಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ. ಪ್ರತೀಕ್ಷ ಅವರ ಸಾಧನೆಯನ್ನು ಮಹಾಮನೆ ಬಳಗ ಅಭಿನಂದಿಸಿದೆ.