ಆಕಸ್ಮಿಕ ಬೆಂಕಿ: ಜೋಳದ ಕಡ್ಡಿ ಮೆದೆ ಸಂಪೂರ್ಣ ಭಸ್ಮ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.23- ಆಕಸ್ಮಿಕ ಬೆಂಕಿ ಅನಾಹುತಕ್ಕೆ ಜಮೀನಿನಲ್ಲಿದ್ದ ಜೋಳದ ಕಡ್ಡಿ ಮೆದೆ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದ ಪಾರ್ವತಮ್ಮ, ಹೆಚ್. ಮಹೇಶ್ ಮತ್ತು ಮಲ್ಲಿಕಾರವರಿಗೆ ಸೇರಿದ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕೆನ್ನಾಲಿಗೆಗೆ ಜಮೀನಿನಲ್ಲಿ ಶೇಖರಿಸಿದ್ದ ಜೋಳದ ಕಡ್ಡಿ ಮೆದೆ ಭಸ್ಮವಾಗಿ ಸುಮಾರು 25 ಸಾವಿರ ರೂ ನಷ್ಟು ನಷ್ಟವಾಗಿದೆ. ಜೋಳದ ಕಡ್ಡಿ ಮೆದೆ ಜೊತೆಗೆ ಜಮೀನಿನಲ್ಲಿ ಅಳವಡಿಸಲು ಸಂಗ್ರಹಿಸಿದ್ದ ಹನಿ ನೀರಾವರಿ ಪೈಪ್‍ಗಳು ಸಹ ಸುಟ್ಟು ಕರಕಲಾಗಿದೆ.
ಬೆಂಕಿ ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದರು.