ಕಾನೂನು ಬಾಹಿರ ರಸ್ತೆ ಅಗೆತ: ಆಕ್ರೋಶ
ನಾಗರಾಜ ಕುಂಬಾರ
ಕೊಲ್ಹಾರ:ಮಾ.23:ಡಾಬರೀಕರಣಗೊಂಡ ಹೊಸ ರಸ್ತೆಗಳನ್ನು ಕಾನೂನು ಭಾಹಿರವಾಗಿ ಅಗೆಯುತ್ತಿರುವ ಜಿಯೋ ಟೆಲಿಕಾಂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡರು.
ಎರಡು ತಿಂಗಳ ಹಿಂದೆಯೇ ಡಾಂಬರಿಕರಣಗೊಂಡ ಪಟ್ಟಣದ ಶಿವಾಜಿ ವೃತ್ತದಿಂದ ಸಂಗಮೇಶ್ವರ ಕಾಲೇಜು ಹಿಂದುಗಡೆಯ ಬೈಪಾಸ್ ರಸ್ತೆಯ ಸಂಪರ್ಕ ಕಲ್ಪಿಸುವ ಅಂದಾಜು 800 ಮಿ. ಮುಖ್ಯ ರಸ್ತೆಯ ಡಾಂಬರೀಕರಣದ ಭಾಗವನ್ನು ಆಪ್ಟಿಕ್ ಫೈಬರ್ ಕೇಬಲ್‍ಗಳನ್ನು (ಒಎಫ್‍ಸಿ) ಹಾಕುವ ಮೂಲಕ ಜಿಯೋ ಟೆಲಿಕಾಂ ಕಂಪನಿ ಏಜೆನ್ಸಿ ಹಾನಿಗೊಳಿಸಿದ್ದಾರೆ.
ಕಳೆದ 2023ರ ಜೂನ್ ತಿಂಗಳಲ್ಲಿ ರಸ್ತೆ ಡಾಂಬರೀಕರಣ ಗೊಳ್ಳುವ ಮುಂಚೆ ಟೆಲಿಕಾಂ ಕಂಪನಿಯವರು ಪಟ್ಟಣ ಪಂಚಾಯಿತಿಯಿಂದ ಪರವಾನಿಗಿಯನ್ನು ಪಡೆದುಕೊಂಡಿದ್ದರು ಟೆಲಿಕಾಂ ಕಂಪನಿಯವರು ನಿಯಮಗಳನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ರಸ್ತೆ ಆಗೆಯುತ್ತಿರುವುದನ್ನು ಕಂಡು ಹಿಂದಿನ ಮುಖ್ಯಾಧಿಕಾರಿ ಟೆಲಿಕಾಂ ಕಂಪನಿ ಅವರಿಗೆ ನೋಟಿಸ್ ನೀಡುವ ಮೂಲಕ ಕಾಮಗಾರಿಯನ್ನು ನಿಲ್ಲಿಸಿದ್ದರು.
ರಸ್ತೆಯನ್ನು ಪುನರ್ವಸತಿ ಇಲಾಖೆಯಿಂದ ಡಿಸೆಂಬರ್ ತಿಂಗಳಲ್ಲಿ ರಸ್ತೆ ದುರಸ್ತಿ ಮಾಡಿ ಡಾಂಬರೀಕರಣ ಗೊಳಿಸಿದ ರಸ್ತೆಯನ್ನು ಪುನಃ ಟೆಲಿಕಾಂ ಕಂಪನಿಯವರು ಪಟ್ಟಣ ಪಂಚಾಯಿತಿಯಿಂದ ಯಾವುದೇ ಪರವಾನಿಗೆ ತೆಗೆದುಕೊಳ್ಳದೆ ರಾತ್ರೋರಾತ್ರಿ ಹತ್ತರಿಂದ ಹದಿನೈದು ಕಡೆ ಡಾಂಬರ್ ರಸ್ತೆಯನ್ನು ಅಗೆಯುತ್ತಿದ್ದುನ್ನು ಕಂಡು ಸಾರ್ವಜನಿಕರು ಪ್ರಶ್ನಿಸಿದ್ದಕ್ಕೆ ವಾರ್ಡ್ ಸದಸ್ಯ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಹೇಳಿದ್ದೇವೆ ಎಂದು ಸಾರ್ವಜನಿಕರ ಮೇಲೆ ಅವಾಜ್ ಹಾಕುತ್ತಿದ್ದಾರೆ.
ಪಟ್ಟಣ ಪಂಚಾಯಿತಿಯ ಈಗಿನ ಮುಖ್ಯಾಧಿಕಾರಿಗಾಳಿಗೆ ವಿಷಯ ತಿಳಿಸಿದರು ಕೂಡ ಟೆಲಿಕಾಂ ಕಂಪನಿಗಳ ವಿರುದ್ಧ ಯಾವುದೇ ನೋಟಿಸ್ ನೀಡುವುದಾಗಲಿ ಹಾಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಸಂಶಯಕ್ಕೆಎಡೆಮಾಡಿ ಕೊಡುವಂತಿದೆ.ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಟೆಲಿಕಾಂ ಕಂಪನಿಯವರು ಏನ್ ಓಸಿ ತೆಗೆದುಕೊಳ್ಳುವುದಕ್ಕೆ ನಮ್ಮ ಹತ್ತಿರ ಬರುತ್ತಾರೆ ಅವರಿಗೆ ನೋಟಿಸ್ ನೀಡಿ ಫೈನ್ ಹಾಕುವೆ.
ಉಮೇಶ್ ಚಲವಾದಿ
ಕಳೆದ ವರ್ಷ ಜಿಯೋ ಕಂಪನಿಯವರಿಗೆ ಕೇಬಲ್ ಹಾಕಲು ಕಟ್ಟಿಸಿಕೊಂಡು ನಿಯಮಗಳನ್ನು ಹಾಕಿ ಪರವಾನಿಗೆ ನೀಡಿದ್ದೆ ಆದರೆ ಅವರು ಸರಿಯಾದ ನಿಯಮಗಳನ್ನು ಪಾಲನೆ ಮಾಡದೆ ಸಾರ್ವಜನಿಕರಿಗೆ ತೊಂದರೆ ಮಾಡಿ ಕೆಲಸ ಮಾಡುತ್ತಿದ್ದುದರಿಂದ ನೋಟಿಸ್ ನೀಡಿ ಕಾಮಗಾರಿ ನಿಲ್ಲಿಸಲಾಗಿತ್ತು.
ವೀರೇಶ್ ಹಟ್ಟಿ
ಹಿಂದಿನ ಮುಖ್ಯಾಧಿಕಾರಿ.
ಡಾಂಬರೀಕರಣದ ರಸ್ತೆ ಅಗೆಯುವುದು ಅಭ್ಯಾಸವಾಗಿ ಹೋಗಿದ್ದು, ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಕ್ಕೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.
ಮಹೇಶ್ ತುಂಬರಮಟ್ಟಿ
ಯುವ ಮುಖಂಡ ಕೊಲ್ಹಾರ