ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಮನವಿ
ಕಲಬುರಗಿ,ಮಾ.22:ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಪ್ರಯುಕ್ತ 2024 ರ ಮಾರ್ಚ್ 24 ರಂದು ರವಿವಾರದಂದು ಕಾಮದಹನ ಮತ್ತು ಮಾರ್ಚ್ 25 ರಂದು ಸೋಮವಾರದಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಆಚರಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಶುಕ್ರವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೋಳಿ ಹಬ್ಬ ಆಚರಣೆಯ ಅಂಗವಾಗಿ ಕರೆಯಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಬುರಗಿ ಹಾಗೂ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲು ತಿಳಿಸಿದರು.
ಚುನಾವಣೆ ನೀತಿ ಸಂಹಿತೆ, ಎಸ್.ಎಸ್.ಎಲ್.ಸಿ. ಪರೀಕ್ಷೆ ಹಾಗೂ ರಂಜಾನ ಹಬ್ಬ ಒಂದೇ ಸಮಯದಲ್ಲಿ ಬಂದಿರುವುದರಿಂದ ಪರಸ್ಪರ ಕೋಮು ಸೌಹಾದರ್Àತೆ ಕಾಪಾಡಿಕೊಳ್ಳಬೇಕೆಂದು ಶಾಂತಿ ಸಮಿತಿ ಸದಸ್ಯರು ಸಭೆಯಲ್ಲಿ ಹೇಳಿದರು.
ಹೋಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮಾರ್ಚ್ 25 ರಂದು ಮಧ್ಯಾಹ್ನ 12 ಗಂಟೆಯವರೆಗೆ ಬಣ್ಣದ ಆಟವನ್ನು ಆಡಬೇಕೆಂದರು.
ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕು ಹಾಗೂ ಅದೇ ರೀತಿಯಾಗಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕಾಮದಹನ ಆದ ನಂತರ ಅಗ್ನಿ ಶಾಮಕ ದಳದವರಿಗೆ ಹೇಳಲಾಗಿದೆ. ಜೆಸ್ಕಾಂದವರು ಮಾರ್ಚ 24 ಮತ್ತು 25 ರಂದು ವಿದ್ಯುತ ತೆಗೆಯಕೂಡದು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯವರು ಹಬ್ಬದ ಎರಡು ದಿನ ನೀರು ಸರಬರಾಜು ಮಾಡಬೇಕು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಬ್ಬದ ದಿನಗಳಂದು ಸಾರ್ವಜನಿಕರು ಚರ್ಮಕ್ಕೆ ಹನಿಕಾರಕವಲ್ಲದ ನೈಸರ್ಗಿಕವಾದ ಬಣ್ಣ ಮಾತ್ರ ಉಪಯೋಗಿಸಬೇಕು. ಹಬ್ಬ ಆಚರಣೆ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬಣ್ಣವನ್ನು ಹಚ್ಚದಂತೆ ಎಚ್ಚರಿಕೆ ವಹಿಸಿಬೇಕು ವಿದ್ಯಾರ್ಥಿಗಳಿಗೆ ಹಾಗೂ ಅಲ್ಲಿ ನಡೆಯುವ ಪರೀಕ್ಷಾ ಸುತ್ತಮುತ್ತ ಯಾವುದೇ ಗಲಾಟೆಗಳು ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು. ಹೆಣ್ಣುಮಕ್ಕಳ ಮೇಲೆ ಬಣ್ಗ ಹಾಕಕೂಡದು ಯಾರಿಗೂ ಒತ್ತಾಯವಾಗಿ ಬಣ್ಣ ಹಚ್ಚದಂತೆ ಎಚ್ಚರಿಕೆ ವಹಿಸಬೇಕು. ಹಬ್ಬವನ್ನು ಸಂತೋಷದಿಂದ ಆಚರಿಸಬೇಕೇ ವಿನ: ಯಾರಿಗೂ ತೊಂದರೆಯಾಗಬಾರದು
ನಗರ ಪೋಲಿಸ್ ಆಯುಕ್ತರಾದ ಚೇತನ ಆರ್ ಅವರು ಮಾತನಾಡಿ, ಜಿಲ್ಲೆಯಲ್ಲಿ 15 ಚೆಕ್ ಪೋಸ್ಟ್‍ಗಳು ತೆರೆಯಲಾಗಿದೆ ಬೈಕ್ ತ್ರಿಬಲ್ ರೈಡಿಂಗ್ ಮತ್ತು ಸೈಲೆನ್ಸರ್ ತೆಗೆದು ಓಡಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಹಬ್ಬದ ಸಂದರ್ಭದಲ್ಲಿ ಶಾಂತಿಭಂಗವನ್ನುಂಟು ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗುವುದು.
ನಿಮ್ಮ ನಿಮ್ಮ ಬಡಾವಣೆಯಲ್ಲಿ ಯಾವುದಾದರು ಘಟನೆ ನಡೆದರೆ ಪೊಲೀಸ್ ಸಹಾಯ ವಾಣಿ ಸಂಖ್ಯೆಗೆ: 112ಕ್ಕೆ ಕರೆ ಮಾಡಲು ಸೂಚಿಸಿದರು. ಎಲೆಲ್ಲಿ ಕಾಮದಹನ/ಹೋಳಿ ಹಬ್ಬ ಆಚರಣೆ ಮಾಡಲಾಗಿದೆ ಅಲಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ಬಂಡಿ ಓಡಿಸುವುದರಲ್ಲಿ ಎಲ್ಲ ಮಾಹಿತಿ ಪಡೆದುಕೊಂಡು ನಿನ್ನೆ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಮಾಹಿತಿಯನ್ನು ಕೊಡಲಾಗಿದೆ ಇನ್ನೋಮ್ಮೆ ಪರೀಕ್ಷಿಸಿಕೊಳ್ಳಿ ಮತ್ತು ನಮ್ಮ ಗಮನಕ್ಕೂ ತೆಗೆದುಕೊಂಡು ಬನ್ನಿ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ ಅವರು ಮಾತನಾಡಿ, ಆಚಾರ ಸಂಹಿತೆ ಮತ್ತು ಹತ್ತನೇ ತರಗತಿ ಮಕ್ಕಳ ಪರೀಕ್ಷೆ ಇರುವುದರಿಂದ ಎಲೆಲ್ಲಿ ಪರೀಕ್ಷೆ ಕೇಂದ್ರಗಳಿವೆ. ಅಲ್ಲಿ ಆ ಶಾಲೆಯ ಸುತ್ತ ಮುತ್ತ ಕೊಡ ಸೆಳೆಯಬಾರದು ಹಬ್ಬ ಆಚರಣೆ ಮಾಡುವರು ಮಕ್ಕಳಿಗೂ ಹಾಗೂ ಅವರ ಪಾಲಕರಿಗೂ ಯಾವುದೇ ತೊಂದರೆ ಉಂಟುಮಾಡಬಾರದು ಮಕ್ಕಳು ತುಂಬಾ ಮುಗ್ಧ ಮನಸ್ಸಿನವರು ಇರುತ್ತಾರೆ ವರ್ಷವಿಡಿ ಓದಿ ಕೊನೆಯದಾಗಿ ಪರೀಕ್ಷೆ ಬರೆಯುತ್ತಾರೆ ಎಂದು ಹೇಳಿದರು.
ವೇದಿಕೆ ಮೇಲೆ ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಸೇರಿದಂತೆ ಪೋಲಿಸ್ ಇನ್ಸಪೆಕ್ಟರ್‍ಗಳು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಶಾಂತಿ ಸಮಿತಿ ಸದಸ್ಯರು ನಾಗರಿಕರು, ಸಮಾಜದ ಮುಖಂಡರು ಹಿರಿಯ ನಾಗರಿಕರು ಹಲವಾರು ಸೂಕ್ತ ಸಲಹೆಗಳನ್ನು ನೀಡಿದರು