ಲಿಫ್ಟ್‍ನಲ್ಲಿ ಮೃತಪಟ್ಟ ಕಾರ್ಮಿಕನಿಗೆ ಪರಿಹಾರಕ್ಕೆ ಆಗ್ರಹ
ಜೇವರಗಿ,ಮಾ 23: ಬೆಂಗಳೂರಿನ ಕೆಂಗೇರಿ ಬಡಾವಣೆಯಲ್ಲಿ ಲಿಫ್ಟಿನಲ್ಲಿ ಮೃತಪಟ್ಟ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬನದೊಡ್ಡಿ ಗ್ರಾಮದ ಕಾರ್ಮಿಕ ಹಣಮಂತನಿಗೆ ಕಟ್ಟಡ ಮಾಲಕ ಹಾಗೂ ಗಾರೆ ಮೇಸ್ತ್ರಿ ಪರಿಹಾರ ಕೊಡಬೇಕೆಂದು ನಮ್ಮ ಕರ್ನಾಟಕ ಸೇನೆ ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರಕಾಂತ ಆಗ್ರಹಿಸಿದ್ದಾರೆ
ಪರಿಹಾರ ವಿತರಿಸದಿದ್ದರೆ ನಮ್ಮ ಕರ್ನಾಟಕ ಸೇನೆ ಕೆಂಗೇರಿ ಘಟಕದ ಅಧ್ಯಕ್ಷರಾದ ಬಸವರಾಜ್ ಅವರ ನೇತೃತ್ವದಲ್ಲಿ ಪರಿಹಾರಕ್ಕಾಗಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಮೃತ ವ್ಯಕ್ತಿಗೆ ಮೂರು ಮಕ್ಕಳಿದ್ದಾರೆ ಬಡ ಕುಟುಂಬದ ಜೀವನ ಬೀದಿಪಾಲಾಗಿದೆ. ಕುಟುಂಬಕ್ಕೆ ಆದರ ಸ್ತಂಭವಾಗಿದ್ದ ಹನುಮಂತನನ್ನು ಕಳಕೊಂಡು ಕುಟುಂಬ ಅನಾಥವಾಗಿದೆ. ಕೂಡಲೇ ಸರ್ಕಾರ ಕಾರ್ಮಿಕ ಇಲಾಖೆ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ತಪ್ಪಿತಸ್ತರನ್ನು ಬಂಧಿಸಬೇಕು. ಅವರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ಪರಿಹಾರ ಕೊಡಬೇಕೆಂದು ಹೇಳಿದರು.
