ಮನುಷ್ಯತ್ವದ ಬರಗಾದಲ್ಲಿ ಬದುಕುತ್ತಿದ್ದೇವೆ : ಹುಡಗಿ
ಕಲಬುರಗಿ,ಮಾ.22-ಮನುಷ್ಯತ್ವದ ಬರಗಾಲದಲ್ಲಿ ಬದುಕುತ್ತಿದ್ದೆವೆ. ನಮ್ಮದು ಕೃಷಿ ಪ್ರಧಾನ ದೇಶ. ಆದರೂ ರೈತರು ಅನ್ನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಜಗತ್ತಿನಲ್ಲಿಯೇ ಶ್ರೇಷ್ಠ ದೇಶ ಎಂದು ಸಂತ-ಶರಣರ ನಾಡೆಂದೂ ಕರೆಯುವ ಭಾರತದಲ್ಲಿ ಮಾನವೀಯತೆ ಮಾಯವಾಗುತ್ತಿದೆ. ಇದಕ್ಕೆಲ್ಲ ಆಳುವರ್ಗವೇ ಕಾರಣವಾಗಿದೆ. ರೈತರ ಸಾವಿಗೆ ನಾವ್ಯಾರು ಒಂದು ನಿಮಿಷ ಮೌನ ಆಚರಣೆ ಮಾಡಿರುವ ಉಧಾಹರಣೆ ಇಲ್ಲ. ಮಣಿಪುರದ ಹೆಣ್ಣುಮಕ್ಕಳ ಸಾವಿಗೆ ನಾವ್ಯಾರೂ ದುಃಖಿಸಲಿಲ್ಲ. ಮಣಿಪುರ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆಯಾದರೂ ನಾವ್ಯರು ಮನುಷ್ಯತ್ವ ಪ್ರದರ್ಶನ ಮಾಡಲಿಲ್ಲ. ಸಾಹಿತ್ಯ ಮತ್ತು ಸಾಹಿತ್ಯದ ಸೃಜನಶೀಲ ಮನಸ್ಸಿನ ವಿದ್ಯಾರ್ಥಿಗಳು ಇಂತಹದರ ಕುರಿತು ಮಿಡಿಯಬೇಕು ಎಂದು ಪೆÇ್ರ. ಆರ್.ಕೆ. ಹುಡಗಿಯವರು ಅಭಿಪ್ರಾಯಪಟ್ಟರು. ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜರುಗಿದ ಎಂ.ಎ. ಕನ್ನಡ ಹಾಗೂ ಕನ್ನಡ ಮತ್ತು ಜಾನಪದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸದರಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಮುಂದುವರೆದು ಮಾತನಾಡುತ್ತ ಮಹಿಳೆಯರನ್ನು ಸಬಲೀಕರಣ ಮಾಡಬೇಕಾಗಿಲ್ಲ. ಮೂಲತಹ ಅವರು ಸಬಲರಾಗಿದ್ದಾರೆ. ಆದರೆ ಅವರ ಸಬಲತೆಯನ್ನು ಗುರುತಿಸುವ ದೃಷ್ಟಿಕೋನ ಬದಲಾಗಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪೆÇ್ರ. ಪೆÇೀತೆ ಮಾತನಾಡಿ ಅವಕಾಶ ಸಿಕ್ಕರೆ ಎಲ್ಲರೂ ಸಾಧನೆ ಮಾಡಬಹÅದು. ಅವಕಾಶವೇ ಸಿಗದೇ ಇದ್ದರೆ ಸಾಧನೆ ಮಾಡಲು ಸಾಧ್ಯವಿಲ್ಲ ಲಾಲ್‍ಬಾಹಾದ್ದೂರ ಶಾಸ್ತ್ರೀಯವರು ಪ್ರಧಾನಿಯಾಗಿದ್ದಾಗ UPS ಪರೀಕ್ಷೆ ಫಲಿತಾಂಶ ಬಂದಿತ್ತು. ಕೂತೂಹಲಕ್ಕೆ ಪರಿಶಿಷ್ಟಜಾತಿ/ಪಂಗಡದವರು ಎಷ್ಟುಜನ ಪಾಸು ಮಾಡಿದ್ದಾರೆ ಎಂದು ಕೇಳಿದರು. ಯಾರೂ ಇಲ್ಲವೆಂದು ಹೇಳಿದಾಗ ಹಾಗಿದ್ದರೆ ಎಷ್ಟು ಅಂಕಪಡೆದಿದ್ದಾರೆ ಎಂದಾಗ 27-28 ತೆಗೆದುಕೊಂಡಿದ್ದಾರೆ. ಹಾಗಿದ್ದರೆ ಅವರು ಪಡೆದ ಅಂಕಳನ್ನೆ ಪಾಸೆಂದು ಪರಿಗಣಿಸಿ ಎಂದು ಆದೇಶ ಮಾಡಿದರು. ಅದರಿಂದ ಅನೇಕರು ಅಧಿಕಾರಿಗಳಾದರು ಇದು ಅವಕಾಶ ಆದ್ದರಿಂದ ಅವಕಾಶ ಬಹಳ ಮುಖ್ಯವಾದುದು ಎಂದು ಪೆÇ್ರ. ಎಚ್.ಟಿ. ಪೆÇೀತೆಯವರು ಅಭಿಪ್ರಾಯಪಟ್ಟರು.