ಪಿಯು ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ ಕಾನ್‍ಸ್ಟೇಬಲ್ ಮೇಲೆ ಅಣ್ಣನಿಂದ ಹಲ್ಲೆ
ಕಲಬುರಗಿ,ಮಾ.22-ತನ್ನ ತಂಗಿಗೆ ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಪೆÇಲೀಸ್ ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಅಫಜಲಪುರ ತಾಲ್ಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ಮಾ.20 ರಂದು ನಡೆದ ಪಿಯು ಪರೀಕ್ಷೆಯಲ್ಲಿ ತನ್ನ ತಂಗಿಗೆ ನಕಲು ಮಾಡಲು ಬಿಡಲಿಲ್ಲವೆಂಬ ಕಾರಣಕ್ಕೆ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‍ಟೇಬಲ್ ಪಂಡಿತ್ ಪಾಂಡ್ರೆ ಮೇಲೆ ವಿದ್ಯಾರ್ಥಿನಿಯ ಅಣ್ಣ ಕೈಲಾಸ್ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸ್ನೇಹಿತ ಸಮೀರ್ ಕೂಡ ಸಾಥ್ ನೀಡಿದ್ದಾನೆ. ಸ್ಥಳೀಯರು ಘಟನೆಯ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಅಫಜಲಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈಲಾಸ್ ಮತ್ತು ಸಮೀರ್‍ನನ್ನು ಪೆÇಲೀಸರು ಬಂಧಿಸಿದ್ದಾರೆ.