ಮಿರಿಯಾಣ ಚೆಕ್‍ಪೋಸ್ಟ್ ಗೆ ತಹಸೀಲ್ದಾರ್ ಭೇಟಿ
ಚಿಂಚೋಳಿ,ಮಾ.22: ತಾಲೂಕಿನ ಮಿರಿಯಾಣ ಚೆಕ್‍ಪೋಸ್ಟ್ ಗೆ ತಹಸೀಲ್ದಾರ್ ಮಲ್ಲಿಕಾರ್ಜುನ ಅರಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರ ಜೊತೆಗೆ ಮಾತನಾಡಿ ಲೋಕಸಭೆ ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮತ್ತು ಅಂತಾರಾಜ್ಯ ಗಡಿಯಲ್ಲಿ ಚೆಕ್‍ಪೋಸ್ಟ್ ತೆರೆದು ಗಡಿಭಾಗದಲ್ಲಿ ಕಟ್ಟೆಚರ ವಹಿಸಲಾಗಿದೆ. ಗಡಿಭಾಗದಲ್ಲಿರುವ ಚೆಕ್ ಪೋಸ್ಟ್ ಮೂಲಕ ಸಾಗುವ ಪ್ರತಿ ವಾಹನವನ್ನು ತಡೆದು ತಪಾಸಣೆ ಮಾಡಲೇಬೇಕು ಸಂಚರಿಸುವ ವಾಹನಗಳ ಮೇಲೆ ನಿರಂತರ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರವಿ ಚಿಟ್ಟ, ಬಿಕ್ಕು ಸಿಂಗ್ ರಾಠೋಡ್, ದಶರಥ ಪಾತ್ರೆ,ಪೆÇಲೀಸ್ ಹಾಗೂ ಗೃಹರಕ್ಷಣ ಸಿಬ್ಬಂದಿಗಳು ಇದ್ದರು