ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20ಕ್ಕೂ ಹೆಚ್ಚು ಬಾಕ್ಸ್ ಮದ್ಯ ವಶ : ಓರ್ವನ ಬಂಧನ
ಅಥಣಿ :ಮಾ.22: ತಾಲೂಕಿನ ನಂದಗಾಂವ ಹೊರವಲಯದ ಕೊಡಗಾನೂರ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 20ಕ್ಕೂ ಹೆಚ್ಚು ಬಾಕ್ಸ್ ಮಧ್ಯವನ್ನು ವಶಕ್ಕೆ ಪಡೆದು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಥಣಿ ಪೆÇಲೀಸ್ ಠಾಣೆಯ ಪಿಎಸ್ ಐ ಶಿವಾನಂದ ಕಾರಜೋಳ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಸುಮಾರು 76800 ರೂಗಳ ಮೌಲ್ಯದ ಓಟಿ ಕಂಪನಿಯ 20ಕ್ಕೂ ಹೆಚ್ಚು ಬಾಕ್ಸ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ನಂದಗಾಂವ ಗ್ರಾಮದ ರವಿ ಶಾಬು ಗಸ್ತಿ(33) ಎಂಬ ಆರೋಪಿಯನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ.
ಅಥಣಿ ಪೆÇಲೀಸ್ ಠಾಣೆಯ ಡಿವೈಎಸ್ ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಯೋಡಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ ಐ ಶಿವಾನಂದ ಕಾರಜೋಳ ಸಿಬ್ಬಂದಿಗಳಾದ ರಮೇಶ ಹಾದಿಮನಿ, ಶ್ರೀಧರ ಬಾಂಗಿ, ಸಿದ್ರಾಮ ಗಾಣಿಗೇರ ಪ್ರಕಾಶ ಕುರಿ, ಪರಮಾನಂದ ಕಂಟಿಗೊಂಡ. ಪಾಲ್ಗೊಂಡಿದ್ದರು.