58 ಸಾವಿರ ಮೌಲ್ಯದ ಅಕ್ರಮಮದ್ಯ ವಶ
ಚಿಂಚೋಳಿ,ಮಾ.22: ತಾಲೂಕಿನ ಶಾದಿಪೂರ ಗ್ರಾಮದಿಂದ ಕೊಂಚವರಂ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ದ್ವಿ ಚಕ್ರ ವಾಹನದ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 17.280 ಲೀಟರ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಪ್ತುಮಾಡಿದ ಸ್ವತ್ತಿನ ಮೌಲ್ಯ 58640 ರೂ ಆಗಿದ್ದು,ಈ ಸಂಬಂಧ ಆರೋಪಿ ಗೋಪಾಲ ನಾಗಣ್ಣ ಬೋಯಿನ್ ಮೋಗದಂಪೂರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿಂಚೋಳಿ ವಲಯ ಅಬಕಾರಿ ನಿರೀಕ್ಷಕ ರಾಹುಲ ಎಸ್ ನಾಯಕ,ಅಬಕಾರಿ ಉಪ ನಿರೀಕ್ಷಕ ಮೊಹ್ಮದ ಹುಸೇನ ಮತ್ತು ಸಿಬ್ಬಂದಿಗಳಾದ ಸಿದ್ದಾರೂಡ ಮತ್ತು ಕಲ್ಲಯ್ಯ ಕಾರ್ಯಾಚರಣೆ ನಡೆಸಿದ್ದಾರೆ.