ಆಹಾರ ಇಲಾಖೆ ಅಧಿಕಾರಿ ಮೇಲೆ ಹಲ್ಲೆ : ಗಾಯಗೊಂಡ ಅಧಿಕಾರಿ ಜಿಲ್ಲಾಸ್ಪತ್ರೆಗೆ ದಾಖಲು
ವಿಜಯಪುರ,ಮಾ.22:ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಮೇಲೆ ಕೆಲವರು ಹಲ್ಲೆ ಮಾಡಿದ ಘಟನೆ ನಡೆದಿದೆ.
ವಿಜಯಪುರ ನಗರ ಆಹಾರ ನಿರೀಕ್ಷಕ ನಯೀಮ್ ಅತ್ತಾರ ಮೇಲೆ ಹಲ್ಲೆ ಮಾಡಲಾಗಿದೆ.
ವಿಜಯಪುರ ನಗರ ರಹೀಂ ನಗರದ ನಿವಾಸಕ್ಕೆ ತೆರಳಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಅಕ್ರಮವಾಗಿ ಅಡುಗೆ ಅನಿಲ ಅಟೋಗಳಿಗೆ ಭರಿಸುವ ವೇಳೆ ಈ ಅಧಿಕಾರಿ ದಾಳಿ ಮಾಡಿದ್ದರು. ಅಧಿಕಾರಿ ನಯೀಮ್‍ಗುರುವಾರ ಮಧ್ಯಾಹ್ನ ನಗರದ ಸೆಟ ಲ್ಯಾಟ್ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಅಟೋಗಳಗೆ ಎಲ್ಪಿಜಿ ಗ್ಯಾಸ್ ಭರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ್ದರು.
ಶಬ್ಬೀರ್ ಜಮಖಂಡಿ ಎಂಬಾತ ಅಕ್ರಮವಾಗಿ ಎಲ್ಪಿಜಿ ಗ್ಯಾಸ್ ಅಟೋಗಳಿಗೆ ಭರಿಸುತ್ತಿದ್ದ.
ಇದನ್ನು ತಡೆದು ಅಕ್ರಮ ಸಿಲಿಂಡರ್ ವಶಪಡಿಸಿಕೊಂಡು ಆಹಾರ ನಿರೀಕ್ಷಕ ನಯೀಮ್ ಸೀಜ್ ಮಾಡಿದ್ದರು.
ಈ ಸಿಟ್ಟಿನಿಂದ ಶಬ್ಬೀರ್ ಜಮಖಂಡಿ ಹಾಗೂ ಸೋನು ನದಾಫ್ ಮತ್ತು ಇತರರು ಸೇರಿ
ಆಹಾರ ನಿರೀಕ್ಷಕ ಮನೆಯಲ್ಲಿದ್ದಾಗ ಮನೆಗೆ ನುಗ್ಗಿ ದಾಂದಲೆ ಮಾಡಿ ಹಲ್ಲೆ ಮಾಡಿದ್ದಾರೆ.
ಮಾರಣಾಂತಿಕ ಹಲ್ಲೆಗೊಳಗಾದ ಆಹಾರ ನಿರೀಕ್ಷಕ ನಯೀಮ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಶಬ್ಬೀರ್ ಜಮಖಂಡಿ, ಸೋನು ನದಾಫ್ ಸೇರಿ ಇತರರ ಮೇಲೆ
ಗಾಂಧಿಚೌಕ್ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.