ಮಕ್ಕಳಿಗೆ ಶಿಕ್ಷಣ ನೀಡುವ ಜೊತೆ ಉತ್ತಮ ಸಂಸ್ಕಾರ ನೀಡುವುದು ಬಹಳ ಮುಖ್ಯ: ವಿಜಯಕುಮಾರ ಸೋನಾರೆ
ಬೀದರ್: ಮಾ 22: ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಉತ್ತಮವಾದ ಸಂಸ್ಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಹೇಳಿದರು.
ಅವರು ಇತ್ತಿಚೆಗೆ ಬೀದರ ತಾಲೂಕಿನ ಸಿರ್ಸಿ (ಎ) ಗ್ರಾಮದಲ್ಲಿ ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆ ಸಂಚಾಲಿತ ವಿದ್ಯಾ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ 15ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗಾಮೀಣ ಭಾಗದ ಪಾಲಕರು ತಮ್ಮ ಮಕ್ಕಳಿಗೆ ಇಂಗ್ಲೀಷ ಭಾಷೆ ಕಲಿಸಬೇಕೆಂಬ ವ್ಯಾಮೋಹ ಹೆಚ್ಚಾಗಿ ಸಾವಿರಾರು ರೂಪಾಯಿ ಖರ್ಚುಮಾಡಿ ಇಂಗ್ಲಿಷ ಕಲಿಸಲು ನಗರ ಹಾಗೂ ಪಟ್ಟಣಗಳಲ್ಲಿರುವ ಶಾಲೆಗಳಿಗೆ ಕಳಿಸುವುದಕ್ಕಿಂತ ತಮ್ಮ ಗ್ರಾಮದಲ್ಲಿ ಇರುವ ಕನ್ನಡ ಮಾದ್ಯಮದ ಶಾಲೆಯಲ್ಲಿಯೇ ಓದಿಸಬೇಕು, ಇದರಿಂದ ನಮ್ಮ ಮಾತೃ ಭಾಷೆಯೂ ಉಳಿಯುತ್ತದೆ. ಇದರ ಜೊತೆಗೆ ಮಕ್ಕಳಲ್ಲಿ ಸಂಸ್ಕಾರದ ಭಾವನೆ ಕೂಡ ಹುಟ್ಟುತ್ತದೆ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ನೂತನ ಸದಸ್ಯರಾದ ಸಂಜೀವಕುಮಾರ ಅತಿವಾಳೆ ಮಾತನಾಡಿ, ಕರ್ನಾಟಕದ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳ ರಕ್ಷಣೆ ಮಾಡುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಜೀವನದಲ್ಲಿ ಉನ್ನತವಾದ ಗುರಿಯನ್ನು ಹೊಂದಬೇಕು, ಸತತ ಪ್ರಯತ್ನದಿಂದ ತಾವೂ ಹೊಂದಿರುವ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಿ ಸಾಹಿತ್ಯ ಮತ್ತು ಸಾಂಸ್ಕøತಿಕ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದರು.
ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಮಾಸ್ಟರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಮಾರುತಿ ಮಾಸ್ಟರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಜಿಲ್ಲಾದ್ಯಕ್ಷರಾದ ಸುನೀಲ ಭಾವಿಕಟ್ಟಿ, ವೈಜಿನಾಥ ಸಿದ್ದಾ, ಕಾಶಿನಾಥ ಅಲ್ದಿ, ಬಾಬುರಾವ್ ಹೈಬತ್ತಿ, ಸಂಬಣ್ಣಾ ವಿಜ್ಜಿ, ಶ್ರೀಧರ ವಿಜ್ಜಿ, ಸುಧಾಕರ್ ಮುಸ್ಸಂಗ್, ವಿಜಯಕುಮಾರ ಚೌಡಾ, ಅರ್ಜುನ್ ಕರೆಪ್ಪನೋರ್, ಸೂರ್ಯಕಾಂತ ಪೋತಾ, ಬಕ್ಕಪ್ಪಾ ಹೈಬತ್ತಿ, ಸೂರ್ಯಕಾಂತ ಚಿಟನಳ್ಳಿ, ಶಿವಕುಮಾರ ಸುಲೆಗಾಂವ್, ರಾಜಕುಮಾರ ಈರಕರ್, ನರಸಪ್ಪಾ ಹೊನ್ನಡ್ಡಿ, ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮದಲ್ಲಿ ಸಿರ್ಸಿ(ಎ) ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಕೊನೆಯಲ್ಲಿ ಶಾಲಾ ಮಕ್ಕಳಿಂದ ಅದ್ದೂರಿಯಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾಸಾಗರ ಧಡ್ಡೆ ನೀರೂಪಿಸಿದರು, ಶ್ರೀಮತಿ ಕಾವೇರಿ ಸ್ವಾಗತಿಸಿದರೇ ಶ್ರೀಮತಿ ರೂಪಾ ವಂದಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.