ವಿಶ್ವದ ಸರ್ವ ಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದರು
ವಿಜಯಪುರ :ಮಾ.22: ಭಾರತ ದೇಶದ ಪರಂಪರೆ ಸಂಸ್ಕøತಿ ಆಚಾರ ವಿಚಾರವನ್ನು ತಮ್ಮ ಅಮೋಘವಾದ ಚಿಂತನೆಗಳಿಂದ ಜಗತ್ತಿಗೆ ಪರಿಚಯಿಸಿದ ಮೋಹನ್ ಜ್ಞಾನದ ಸೂರ್ಯ ಸ್ವಾಮಿ ವಿವೇಕಾನಂದ ಕೇವಲ 39 ವರ್ಷ ಬದುಕಿದ ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನಾತ್ಮಕ ವ್ಯಕ್ತಿತ್ವದಿಂದ ಸೂರ್ಯ ಚಂದ್ರ ಇರುವರಿಗೂ ಅಜರಾಮರಾಗಿದ್ದಾರೆ ವಿಶ್ವದ ಸರ್ವ ಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದರು ಎಂದು ಸಾಹಿತಿ ಜಾನಪದ ವಿದ್ವಾಂಸ ಪ್ರೊ. ಎ.ಎಚ್. ಕೊಳಮಲಿ ವಿಶೇಷ ಉಪನ್ಯಾಸವನ್ನು ನೀಡಿ ಹೇಳಿದರು.
ಅವರು ಇಂದು ನಗರದ ಭಾರತ ಯುವ ವೇದಿಕೆ ಚಾರಿಟೇಬಲ್ ಪೌಂಡೇಶನ್ ವತಿಯಿಂದ ನಗರದ ಕುಮಾರಿ ಮೋನಿಕಾ ಬಸವರಾಜ ಕಣ್ಣಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಮನ-ಮನಕ್ಕು ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತ ಪುಸ್ತಕ ವಿತರಣಾ ವಿಶೇಷ ಕಾರ್ಯಕ್ರಮದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸವನ್ನು ನೀಡಿ ವಿವೇಕಾನಂದ ವ್ಯಕ್ತಿತ್ವ ಹಾಗೂ ಭಾರತ ದೇಶದ ಸಂಸ್ಕøತಿಯನ್ನು ಕೊಂಡಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತದ ದೇಶದ ಅದ್ಭುತವಾದ ಶಕ್ತಿ. ಚಿಕ್ಯಾಗೊ ಸರ್ವಧರ್ಮ ಸಮ್ಮೆಳನದಲ್ಲಿ ಭಾಷಣ ಮಾಡಿದ ಅವರು ತಮ್ಮ ವಾಕ ಚಾತುರತೆಯಿಂದ ವಿಶ್ವದ ಮಹಾಮೇಧಾವಿ ಏನಿಸಿದರು. ಸಾಧಕರಿಗೆ ಯುವಕರಿಗೆ ಸ್ವಾಮಿ ವಿವೇಕಾನಂದರು ಪ್ರೇರಣೆ ಸಿಡಿಲಿನ ಸಿಂಹಘರ್ಜನೆಯನ್ನು ಒಳಗೊಂಡಿರುವ ಸ್ವಾಮಿ ವಿವೇಕಾನಂದ ವ್ಯಕ್ತಿತ್ವವನ್ನು ಇಂದಿನ ಯುವಕರು ಹೊಂದಬೇಕು ಎಂದರು.
ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನದ ಅಧ್ಯಕ್ಷರಾದ ಸುನೀಲ ಜೈನಾಪೂರ ಮಾತನಾಡಿ ಸದಾ ಸಮಾಜಪರ ಕೆಲಸ ಮಾಡುವ ನಗರದ ಏಕೈಕ ಸಂಘಟನೆ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ ಸದಾ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಯುವಕರಲ್ಲಿ ರಾಷ್ಟ್ರಜಾಗೃತಿ ಮತ್ತು ದೇಶಾಭಿಮಾನವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕುಮಾರಿ ಮೋನಿಕಾ ಕಣ್ಣಿ ಕಾಲೇಜಿನ ಅಧ್ಯಕ್ಷರಾದ ಬಸವರಾಜ ಕಣ್ಣಿ ಅವರು ಮಾತನಾಡಿ ಇಂದಿನ ಯುವಕರಿಗೆ ರಾಷ್ಟ್ರದ ಮಹಾನಾಯಕರ ಸಂದೇಶವನ್ನು ತಿಳಿಸುವ ಕಾರ್ಯ ಬಹಳ ಮುಖ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ರಾಮಚಂದ್ರ ಮೋರೆ ಮಾತನಾಡಿ ಇಂದಿನ ಯುವಕರು ಮಾನವೀಯ ಮೌಲ್ಯಗಳನ್ನು ಹೊಂದಬೇಕು ಎಂದರು.
ಸುರೇಶ ಜತ್ತಿ, ಸಂತೋಷ ಹೆಗಡೆ, ಜಗದೀಶ ಮನಗೂಳಿ, ಅನಿಲ ಮುಳಸಾವಳಗಿ, ಕಾಲೇಜಿನ ಸಿಬ್ಬಂದಿ ವರ್ಗ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸಂತೋಷ ಹೆಗಡೆ ನಿರೂಪಿಸಿದರು. ಶೋಭಾ ಬಡಿಗೇರ ಪ್ರಾರ್ಥಿಸಿದರು. ರಾಹುಲ ಕಳಸದವರ ವಂದಿಸಿದರು.