ಕಾಂಗ್ರೆಸ್ಗೆ ಒಳ್ಳೆಯ ವಾತಾವರಣ: ರಾಜು ಆಲಗೂರ್ ಗೆಲ್ಲುವ ವಿಶ್ವಾಸ
ವಿಜಯಪುರ:ಮಾ.22: ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣವಿದೆ. ಎಲ್ಲ ಸಮುದಾಯಗಳು ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಲೋಕ ಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಹೇಳಿದರು. ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ವಿಜಯಪುರ ಮತಕ್ಷೇತ್ರದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಗೆಲುವಿನ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ವಾತಾವರಣವಿದ್ದರೂ ಸವಾಲು ಅನೇಕ ಇವೆ. ಹೋರಾಟ ದೊಡ್ಡದಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುಂದುವರಿಯಬೇಕಿದೆ. ನಾವು ಯಾವ ಧರ್ಮದ ವಿರೋಧಿಗಳಲ್ಲ. ನಾವು ಕೂಡ ಹಿಂದೂ ಧರ್ಮವನ್ನು ಗೌರವಿಸುತ್ತಿದ್ದೇವೆ. ಬಿಜೆಪಿ ಜನರಲ್ಲಿ ಕಾಂಗ್ರೆಸ್ ಬಗ್ಗೆ ತಪ್ಪು ಅಭಿಪ್ರಾಯ ಬಿಂಬಿಸುತ್ತಿದೆ. ಇದನ್ನು ತೊಡೆದು ಹಾಕಬೇಕಿದೆ ಎಂದರು. ಸದ್ಯದ ಸಂಸದರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರು ಎಂದೂ ಕ್ಷೇತ್ರದಲ್ಲಿ ತಿರುಗಿಲ್ಲ ಮತ್ತು ಲೋಕಸಭೆಯಲ್ಲೂ ಮಾತಾಡಿಲ್ಲ. ಇವರದ್ದು ಶೂನ್ಯ ಸಾಧನೆ ಎಂದರು.
ಸಭೆಯಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷೀ, ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಆರತಿ ಶಹಾಪುರ, ಜಿಲ್ಲಾ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಗಂಗಾಧರ ಸಂಬಣ್ಣಿ, ಡಿ.ಎಚ್.ಕಲಾಲ್, ಆಜಾದ್ ಪಟೇಲ, ಚಾಂದ್ ಸಾಬ ಗಡಗಲಾವ್, ಮಹ್ನದರಫೀಕ್ ಟಪಾಲ್, ಮಹಾದೇವ ಗೋಕಾಕ್, ಸುಭಾಷ ಕಾಲೇಬಾಗ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಖಜಾಂಚಿ ವಿಜಯಕುಮಾರ್ ಘಾಟಗೆ, ಪ್ರಧಾನ ಕಾರ್ಯದರ್ಶಿಗಳಾದ ಶಬ್ಬೀರ್ ಜಹಾಗೀರದಾರ್, ವಸಂತ ಹೊನಮಾಡೆ, ಸಾಹೇಬಗೌಡ ಬಿರಾದಾರ, ಸಮದ ಸುತಾರ, ಪಯಾಜ ಕಲಾದಗಿ, ಶರಣಪ್ಪ ಯಕ್ಕುಂಡಿ, ಅಶ್ಫಾಕ್ ಮನಗೂಳಿ, ಅಫ್ತಾಪ್ ಖಾದ್ರಿ ಇನಾಮದಾರ್, ಅಬ್ದುಲ್ ಪೀರಾ ಜಮಖಂಡಿ, ದೀಪಾ ಕುಂಬಾರ, ಭಾರತಿ ನಾವಿ, ಕಾಶಿಬಾಯಿ ಹಡಪದ, ಭಾರತಿ ಹೊಸಮನಿ, ಕೆಪಿಸಿಸಿ ಪದಾಧಿಕಾರಿಗಳು, ರಾಜ್ಯ ವಿವಿಧ ಅಂಗ ಘಟಕದ ಪದಾಧಿಕಾರಿಗಳು, ಪಕ್ಷದ ಮುಖಂಡರು, ಸಮಿತಿ ಪದಾಧಿಕಾರಿಗಳು , ಅಧ್ಯಕ್ಷರುಗಳು, ಮಹಾನಗರ ಪಾಲಿಕೆ ಸದಸ್ಯರು, ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.