ಜೀವಿತಕಾಲ ಚಿಕ್ಕದು, ಅದು ಚೊಕ್ಕಾಗಿರಬೇಕು:ಕೊಡೇಕಲ್ಲಶ್ರೀ
ತಾಳಿಕೋಟೆ:ಮಾ.22: ಮಾನವನಾಗಿ ಜನ್ಮ ತಾಳಿದ ಮೇಲೆ ಬಧುಕಿರುವವರೆಗೆ ಮಾತ್ರ ಯಾರಿಗೂ ಮೋಸ ವಂಚನೆ ದ್ರೋಹ ಅನ್ಯಾಯ ಅಕ್ರಮ ಇವು ಯಾವುಗಳನ್ನು ಮಾಡದೇ ಯಾರನ್ನು ನೋಯಿಸದೇ ಮೋಹ ಅಸುಹೆಗಳಿಗೆ ಒಳಗಾಗದೇ ಪವಿತ್ರತೆಯನ್ನು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳದೇ ಧರ್ಮಬದ್ದವಾಗಿ ಪವಿತ್ರವಾಗಿ ತೃಪ್ತಿ, ಶಾಂತಿ ಆನಂದದಿಂದ ಸದ್ಗುಣ ಸಂಪನ್ನನಾಗಿ ಜೀವಿತವನ್ನು ಸಾಗಿಸಿ ಬಿಟ್ಟರೆ ಆತ ಸತ್ತ ನಂತರವೂ ಶಾಸ್ವತವಾಗಿ ಎಂದೆಂದಿಗೂ ಸದಾ ಆನಂದದಿಂದ ಇರಬಹುದೆಂದು ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ಗುರುವಾರರಂದು ಸ್ಥಳೀಯ ಶ್ರೀ ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ನಿರುಪಾನಂದೀಶ್ವರರ ಪುರಾಣ ಪ್ರವಚನದ 11ನೇ ದಿನದಂದು ಆಗಮಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಸಕಲ ಜೀವಿಗಳಲ್ಲಿಯೂ ಜೀವಾತ್ಮನು ವಾಸಿಸುತ್ತಿದ್ದಾನೆಂಬ ಸತ್ಯಾಂಶ ಯಾವ ಮನುಜನಲ್ಲಿ ದೃಡವಾಗಿ ಬೇರು ಊರಿರುತ್ತದೆಯೋ ಅಂತಹ ಮನುಜ ಸಾಮಾನ್ಯವಾಗಿ ಯಾರಿಗೂ ಮೋಸ ವಂಚನೆ ದ್ರೋಹ ಅನ್ಯಾಯ ಅಕ್ರಮ ಮಾಡುವದಿಲ್ಲಾ ಆತ ಸಕಲ ಜೀವಿಗಳ ಸುಃಖ ಶಾಂತಿಗಳನ್ನೇ ಬಯಸುತ್ತಿರುತ್ತಾನೆಂದರು. ನಿರುಪಾದೀಶ್ವರರ ಪುರಾಣ ಸನ್ನಿವೇಶದಲ್ಲಿ ಆಗಮಿಸಿದ ವಿವಾಹ ಶುಭ ಮೋಹರ್ತದಲ್ಲಿ ಪಾಲ್ಗೊಂಡ ಎಲ್ಲ ಭಕ್ತ ಸಮೂಹಕ್ಕೆ ಆಶಿರ್ವದಿಸಿ ಮುಂದುವರೆದು ಮಾತನಾಡಿದ ಶ್ರೀಗಳು ಗ್ರಹಸ್ಥ ಆಶ್ರಮವೆನ್ನುವದು ಪವಿತ್ರವಾಗಿದೆ ಅದರಲ್ಲಿ ತಂದೆ ತಾಯಿ ಅಣ್ಣ ತಮ್ಮಂದಿರರಲ್ಲಿ ಜಗಳವಾಡಿ ಕೆಟ್ಟಸ್ತನವನ್ನು ಕಟ್ಟಿಕೊಂಡರೆ ನಡೆಯುತ್ತದೆ ಆದರೆ ಬಧುಕಿನಲ್ಲಿ ಹೊಂದಾಣಿಕೆಯಿಂದ ಸಂಸಾರಿಕ ಜೀವನದಲ್ಲಿ ವ್ಯವಸ್ಥಿತವಾಗಿ ಜೀವನ ಸಾಗಿಸಬೇಕಾದರೆ ಹೆಂಡತಿಯೊಂದಿಗೆ ಕೆಡಕು ಮಾಡಿಕೊಳ್ಳುವದು ಸೂಕ್ತವಲ್ಲಾವೆಂದು ಹೇಳಿದ ಶ್ರೀಗಳು ಅಲೇಕಝಾಂಡರ್, ಅರೀಸ್ಟಾಟಲ್ ಅವರ ಕುರಿತು ತಿಳಿಹೇಳಿದರಲ್ಲದೇ ಜೇಡರ ದಾಸಿಮಯ್ಯನವರು ಆದರ್ಶಮಯವಾಗಿ ಜೀವನ ನಡೆಸಿದ್ದರ ಕುರಿತು ನೆರೆದ ಭಕ್ತ ಸಮೂಹಕ್ಕೆ ವಿವರಿಸಿದ ಶ್ರೀಗಳು ಬಧುಕಿನ ಕಲೆ ಕಲಿಸುವ ಪಾಠಶಾಲೆ ತಾಳಿಕೋಟೆಯಲ್ಲಿಯ ಶ್ರೀ ಶರಣಮುತ್ಯಾರ ಮಠದಲ್ಲಿ ಹಾಗೂ ಶ್ರೀ ಖಾಸ್ಗತೇಶ್ವರ ಮಠದಲ್ಲಿಯ ಶ್ರೀಗಳಿಂದ ಕಲಿಯಬಹುದಾಗಿದೆÉ ಎಂದು ಹೇಳಿದ ಶ್ರೀಗಳು ಜೀವನದಲ್ಲಿ ಏನೆ ಅಡೆತಡೆಗಳು ಬಂದರೂ ಅವುಗಳನ್ನು ಅರ್ಜಿಸಿಕೊಂಡು ನಡೆಯಬೇಕು ಅಂದರೆ ದೇವರು ತಾನಾಗಿಯೇ ಬರುತ್ತಾನೆ ನಂತರ ನಿಮ್ಮ ಬಧುಕು ಆದರ್ಶಮಯವಾಗುತ್ತದೆ ಎಂದರು.
ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ಅವರು 11ನೇ ದಿನದ ಪುರಾಣ ಮುಂದುವರೆಸಿ ಮಾತನಾಡುತ್ತಾ ನಿರುಪಾದೀಶ್ವರರ ತಂದೆ ತಾಯಿಯರು ಆತನ ಸೋದರ ಮಾವನ ಮಗಳಾದ ಚನ್ನಮಲ್ಲಳೊಂದಿಗೆ ವಿವಾಹವನ್ನು ನಿಗಧಿ ಪಡಿಸಿ ಮಾನ್ವಿ ತಾಲೂಕಿನ ತಪ್ಪಲದಿಡ್ಡಿ ಗ್ರಾಮದಲ್ಲಿ ವಿಜೃಂಬಣೆಯಿಂದ ವಿವಾಹ ಮೋಹರ್ತವನ್ನು ಏರ್ಪಡಿಸುತ್ತಾರೆ ಈ ವಿವಾಹ ಮಹೋತ್ಸವದಲ್ಲಿ ಹರಗುರು ಚರ ಮೂರ್ತಿಗಳು ಮಹಾತ್ಮರು ತಂದೆ ಗುರುಲಿಂಗಯ್ಯನವರ ತಾಯಿ ರಾಚಮ್ಮನವರ ಸಂಕಲ್ಪದಂತೆ ವಿವಿದ ರೀತಿಯ ಮನೆಗೆ ಸುಣ್ಣ ಬಣ್ಣವನ್ನು ಹಚ್ಚಿ ವಿವಾಹದಲ್ಲಿ ವಧು-ವರರಿಗೆ ಅರಿಸಿಣ ಹಚ್ಚುವದು ಸಹ ಮೊದಲು ಮಾಡಿ ಬಾಸಿಂಗ ಹಾಗೂ ದಂಡಿ ಕಟ್ಟುವ ಕಾರ್ಯ ನಡೆದು ಕೊನೆಗೆ ಅಕ್ಷತಾರೋಪಣವೂ ಕೂಡಾ ಜರುಗುತ್ತದೆ ಎಂಬುದರ ಕುರಿತು ತಿಳಿ ಹೇಳಿದ ಶ್ರೀಗಳು ಪತ್ನಿ ಗಂಡನೇ ದೇವರೆಂದು ತಿಳಿದುಕೊಳ್ಳುವ ಮಧುವೆ ಮಹತ್ವ ಕುರಿತು ಶ್ರೀಗಳು ತಿಳಿ ಹೇಳಿದರು.
ಈ ಸಮಯದಲ್ಲಿ ಪಾಲ್ಗೊಂಡ ಭಕ್ತ ಸಮೂಹ ಅಕ್ಷತಾರೋಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವಿಕರಿಸಿ ಪುನಿತರಾದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಶರಣೆ ಕಾಶಿಬಾಯಿ ಅಮ್ಮನವರು, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ಮೊದಲಾದವರು ಉಪಸ್ಥಿತರಿದ್ದರು.