ಬೋರವೆಲ್, ಶೌಚಾಲಯ ತಡೆಗೋಡೆ ನಿರ್ಮಾಣ: ಹೋರಾಟಕ್ಕೆ ಸಿಕ್ಕ ಜಯ: ಉಮೇಶ ಮುದ್ನಾಳ ಹರ್ಷ
ಯಾದಗಿರಿ:ಮಾ.22: ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೆಳಗೇರಾ ಪ್ರಾತಮಿಕ ಮತ್ತು ಪ್ರೌಢಶಾಲೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದು, ವಿದ್ಯಾರ್ಥಿಗಳ ಸಂಕಷ್ಟ ಹೇಳತೀರದು. ಶಾಲೆಯಲ್ಲಿ ಕುಡಿವ ನೀರಿನ ಸೌಲತ್ತು ಹಾಗೂ ಶೌಚಾಲಯ ಸೌಲತ್ತು ಒದಿಗಸಲು ವಿದ್ಯಾರ್ಥಿಗಳೊಂದಿಗೆ ಹೋರಾಟದ ಎಚ್ಚರಿಕೆ ನೀಡಿದ್ದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕೊಳವೆ ಬಾವಿ ಕೊರೆಸಲು ಮುಂದಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಬೆಳಗೇರಾ ಗ್ರಾಮದ ಶಾಲೆಗೆ ಇಂಟರವೆಲ್ ಬಿಟ್ಟರೆ ಸಾಕು ಮಕ್ಕಳು ಕುಡಿವ ನೀರಿಗಾಗಿ ಸಮೀಪದ ಮನೆಗಳಿಗೆ ಇಲ್ಲವೇ ಹೊಲಗಳಲ್ಲಿರುವ ಬೊರವೆಲ್ ಗಳ ರೈತರ ಬಳಿ ಹೋಗಿ ನೀರಿಗಾಗಿ ಅಂಗಲಾಚುವ ಪರಿಸ್ಥಿತಿ ಇರುವುದನ್ನು ಮಾಧ್ಯಮಗಳ ಮೂಲಕ ಬೆಳಕಿಗೆ ತಂದ ನಂತರ ಇಂದು ಬೋರವೆಲ್ ಕೊರೆಸುವ ಕಾರ್ಯ ನಡೆಯಿತು.
ಶೌಚಾಲಯ ಇಲ್ಲದ ಕಾರಣ ಗಿಡಗಂಟಿಗಳ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೌಢಶಾಲೆಗೆ ಬಂದ ಬಾಲಕಿಯರು ಇದರಿಂದ ತೀವ್ರ ಮುಜುಗರಕ್ಕೆ ಈಡಗುತ್ತಿದ್ದುದಕ್ಕೆಯೂ ಸ್ಪಂದನೆ ಲಭಿಸಿದ್ದು ಶೌಚಾಲಯ ನಿರ್ಮಾಣವಾಗಿದೆ. ಶಾಲೆಗೆ ಆವರಣ ಗೋಡೆ ನಿರ್ಮಿಸಿ ಗೇಟ್ ಅಳವಡಿಸಲಾಗಿದೆ.
ಶಾಲೆಯ ಆವರಣದಲ್ಲಿ ಬೃಹತ್ ಆಕಾರದ ತಗ್ಗುಗುಂಡಿ ಇದ್ದು ಮಳೆಗಾಲದಲ್ಲಿ ನೀರು ನಿಂತು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಮಕ್ಕಳು ಆಡುತ್ತ ಹೋಗಿ ನೀರಲ್ಲಿ ಬಿದ್ದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇದೇ ನೀರಲ್ಲಿ ಹಂದಿ ನಾಯಿ, ಕುರಿ, ಎಮ್ಮೆಗಳು ಉರುಳಾಡಿ ನೀರು ಮಲೀನಗೊಂಡಿದೆ. ವಿಷಜಂತುಗಳ ತಾಣವೂ ಆಗಿದೆ ಆದರೆ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಶೀಘ್ರ ಇದಕ್ಕೆ ಮಕ್ಕಳು ಪೊಷಕರ ಜೊತೆಗೆ ಹೋರಾಟ ರೂಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬೊರವೆಲ್ ಕೊರೆಸುತ್ತಿರುವ ಘಟನೆ ಮತ್ತು ಶೌಚಾಲಯ ಮತ್ತು ಶಾಲೆಯ ತಡೆಗೋಡೆ ನಿರ್ಮಾಣವಾಗಿದ್ದು, ಕಂಡು ಗ್ರಾಮಸ್ಥರು, ಶಾಲಾ ಮಕ್ಕಳು ಹರ್ಷ ವ್ಯಕ್ತಪಡಿಸಿ ಕುಣಿದಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಾಲಾ ಮಕ್ಕಳು ಇದ್ದರು.