ಸಾಹಿತಿ ಸಂಜೀವಕುಮಾರ ಅತಿವಾಳೆಗೆ ಸನ್ಮಾನ
ಬೀದರ್: ಮಾ 22: ತಮಗೆ ದೊರೆತಿರುವ ಸ್ಥಾನದ ಮೂಲಕ ಕನ್ನಡದ ನೆಲ, ಜಲ, ಭಾಷೆ ಸಂರಕ್ಷಿಸುವುದರೊಂದಿಗೆ ಸಮಸ್ಥ ಕನ್ನಡಿಗರ ಬದುಕು ಕಟ್ಟಿಕೊಡುವ ಮಹತ್ತರ ಕಾರ್ಯ ಮತ್ತು ಎಲ್ಲೇಲ್ಲು ಕನ್ನಡದ ವಾತಾವರಣ ಕನ್ನಡ ಶಾಲೆಗಳಿಗೆ ಪ್ರಾತಿನಿದ್ಯ ದೊರಕುವಂತೆ ಶ್ರಮಿಸಬೇಕೆಂದು ಕಲ್ಯಾಣ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಹೇಳಿದರು.
ಅವರು ನಗರದಲ್ಲಿ ಏರ್ಪಡಿಸಿದ ಸರಳ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ರಾಜ್ಯ ಸದಸ್ಯರಾಗಿ ನೇಮಕಗೊಂಡಿರುವ ಸಾಹಿತಿ ಸಂಜೀವಕುಮಾರ ಅತಿವಾಳೆ ಅವರಿಗೆ ಸನ್ಮಾನಿಸಿ ಮಾತನಾಡುತ್ತಿದ್ದರು. ಮುಂದುವರೆದು ಸರ್ಕಾರ ಬೀದರಿಗೆ ಏರಡು ಸ್ಥಾನ ನಿಡಿದ್ದು ಸ್ವಾಗತಾರ್ಹವಾಗಿದ್ದು, ಕನ್ನಡಕ್ಕಾಗಿ ಹೊಸ ಕಾರ್ಯಕ್ರಮಗಳ ಮೂಲಕ ಯೋಜನೆ ರೂಪಿಸಿ ರಾಜ್ಯದಾದ್ಯಂತ ಉತ್ತಮವಾದ ಕಾರ್ಯ ಮಾಡಲೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ತಾಲೂಕಾಧ್ಯಕ್ಷ ಎಂ.ಎಸ್.ಮನೋಹರ್, ಪತ್ರಕರ್ತ ಶಿವಕುಮಾರ ವಣಗೇರಿ, ಸುನೀಲ ಭಾವಿಕಟ್ಟಿ, ನಾಗಶೆಟ್ಟಿ ಧರಮಪೂರ್, ಸುನೀಲಕುಮಾರ ಕುಲಕರ್ಣಿ, ಧನರಾಜ ಜಿರ್ಗೆ ಇತರರು ಇದ್ದರು.