ಮಹಿಳೆಯರಿಗೆ ಆತ್ಮರಕ್ಷಣೆಗೆ ಕಾನೂನಿನ ಅರಿವು ಅಗತ್ಯ :ನ್ಯಾ. ಎಸ್.ಕೆ.ಕನಕಟ್ಟೆ
ಬೀದರ:ಮಾ.22: ಮಹಿಳೆ ಇಂದು ಎಲ್ಲಾ ರಂಗಗಳಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದ್ದಾಳೆ. ತಾನು ಕರ್ತವ್ಯ ನಿರ್ವಹಿಸುವ ಕ್ಷೇತ್ರದಲ್ಲಿ ದೌರ್ಜನ್ಯ, ಕಿರುಕುಳದಂತಹ ಘಟನೆಗಳು ನಡೆಯುತ್ತಿದ್ದರೆ ಅಂತಹ ಸಂದರ್ಭದಲ್ಲಿ ಮಹಿಳೆಯರಿಗೆ ತನ್ನ ಆತ್ಮರಕ್ಷಣೆಗಾಗಿ ಕಾನೂನಿನ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಎಸ್.ಕೆ.ಕನಕಟ್ಟೆ ತಿಳಿಸಿದರು.
ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಮಾಜಶಾಸ್ತ್ರ ವಿಭಾಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನ ಕುರಿತು ಮಹಿಳೆ ಮತ್ತು ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕರಣ ಮತ್ತು ಯಾಂತ್ರಿಕರಣ ಯುಗದಲ್ಲಿ ದಂಪತಿಗಳು ಕ್ಷುಲ್ಲಕ ಕಾರಣಕ್ಕಾಗಿ ವಿವಾಹ ವಿಚ್ಛೇದನದಂತಹ ಕೆಟ್ಟ ಸಂಸ್ಕøತಿಗೆ ನಾಂದಿ ಹಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡಲು ಸಾಧ್ಯವಿಲ್ಲ. ವಿಚ್ಛೇದನದಂತಹ ದೂರುಗಳು ನಮ್ಮಲ್ಲಿ ಬಂದಾಗ ಹಲವಾರು ದಂಪತಿಗಳಿಗೆ ಮನವೊಲಿಸಿ ಒಂದು ಮಾಡಿ ಕಳುಹಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ಕೂಡ ಕಾನೂನಿನ ಅರಿವು ಪಡೆದುಕೊಂಡು ನೆರವಿಗಾಗಿ ಧಾವಿಸಬೇಕು. ಆರೋಗ್ಯಯುತ ಸಮಾಜದ ನಿರ್ಮಾಣಕ್ಕಾಗಿ ಕೈಜೋಡಿಸಬೇಕೆಂದು ತಿಳಿಸಿದರು.
ಕರ್ನಾಟಕ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರಾದ ಕೇಶವರಾವ ಶ್ರೀಮಾಳೆ ಮಾತನಾಡಿ ಕಾನೂನಿನಲ್ಲಿ ಮಹಿಳೆಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ತಪ್ಪಿತಸ್ಥ ಪುರುಷರನ್ನು ಸ್ಥಳದಲ್ಲೇ ಬಂಧಿಸಿ, ಅವರಲ್ಲಿರುವ ಮೊಬೈಲ್ ಆಭರಣ ವಶಕ್ಕೆ ಪಡೆಯಬಹುದು. ಆದರೆ ಮಹಿಳೆಗೆ ಆ ರೀತಿ ಮಾಡಲು ಬರುವುದಿಲ್ಲ. ಮಹಿಳೆಯರ ಹಿತದೃಷ್ಟಿಯಿಂದ ಬಾಲ್ಯವಿವಾಹ ತಡೆ, ವರದಕ್ಷಿಣೆ ನಿಷೇಧ ಕಾಯಿದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಗ ರಚನೆ, ಲೈಂಗಿಕ ಕಿರುಕುಳ ನಿಷೇಧ ಕಾಯಿದೆಗಳಂತಹ ಹಲವು ಕಾಯಿದೆಗಳನ್ನು ಜಾರಿಗೆ ತರಲಾಗಿದೆ. ಅವುಗಳ ಕುರಿತು ಮಹಿಳೆಯರು ಅರಿವು ಪಡೆದುಕೊಳ್ಳಬೇಕೆಂದರು.
ಹಿರಿಯ ವಕೀಲರಾದ ಬಿ.ಎಸ್.ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ದಯವಿಟ್ಟು ಮೊಬೈಲ್‍ಗೆ ಅಂಟಿಕೊಳ್ಳಬಾರದು. ಕಾನೂನು ಅರ್ಥಮಾಡಿಕೊಂಡು ತಾವು ಸುರಕ್ಷಿತವಾಗಿರುವುದರ ಜೊತೆಗೆ ಅಕ್ಕಪಕ್ಕದ ಮನೆಯವರೂ ನೆಮ್ಮದಿಯಿಂದ ಇರುವಂತೆ ಸಹಾಯಹಸ್ತ ಚಾಚಬೇಕು. ಸೂಕ್ತ ಕಾನೂನಿನ ಅರಿವು ಇದ್ದಾಗ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸರ್ವಸಮಾನರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನ್ಯಾಯವಂತರಿಗೆ ರಕ್ಷೆಯಾಗಬೇಕೆಂದು ಕಾನೂನು ಹೇಳುತ್ತದೆ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗೆ ವಹಿಸಿದ್ದರು. ವೇದಿಕೆ ಮೇಲೆ ಕಾಲೇಜಿನ ಉಪಪ್ರಾಚಾರ್ಯ ಪೆÇ್ರ. ಅನಿಲಕುಮಾರ ಚಿಕ್ಕಮಣೂರ, ಐಕ್ಯೂಎಸಿ ಸಂಯೋಜಕ ಡಾ.ರಾಜಮೋಹನ ಪರದೇಶಿ ಉಪಸ್ಥಿತರಿದ್ದರು. ಸಮಾಜಶಾಸ್ತ್ರದ ಮುಖ್ಯಸ್ಥ ಪರಮೇಶ್ವರ ಸ್ವಾಗತಿಸಿದರು. ಪೆÇ್ರ. ಲಕ್ಷಿ??ೀ ಕುಂಬಾರ ನಿರೂಪಿಸಿದರು. ಪೆÇ್ರ. ಜ್ಯೋತಿ ಎಸ್.ಕರ್ಪೂರ ವಂದಿಸಿದರು. ಇದೇ ವೇಳೆ ಕಲಾ ವಿಭಾಗದ ಸಂಯೋಜಕ ಡಾ.ಶಶಿಧರ ಪಾಟೀಲ, ರಾಜ್ಯಶಾಸ್ತ್ರ ವಿಭಾಗದ ದಿಲೀಪ ಮಾಲೆ, ಕನ್ನಡ ವಿಭಾಗದ ಸಂಗೀತಾ ಮಾನಾ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.