ಗ್ರಾಮೀಣ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ: ಅರಳಿ
ಬೀದರ:ಮಾ.22:ಗ್ರಾಮೀಣ ಪ್ರದೇಶದ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ನಿಮ್ಮಿಂದಲೇ ಮತದಾನ ಪ್ರಮಾಣ ಹೆಚ್ಚಳಕ್ಕೆ ನಾಂದಿಯಾಗಬೇಕು ಎಂದು ರಾಜ್ಯಮಟ್ಟದ ಚುನಾವಣಾ ತರಬೇತುದಾರಾರು ಹಾಗೂ ಬೀದರ್ ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಗಳಾದ ಗೌತಮ ಅರಳಿ
ಹೇಳಿದರು.
ಅವರು ಬುಧವಾರ ಅಷ್ಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿವಸ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಂವಿಧಾನದ ಅಡಿ ಚುನಾವಣಾ ಪದ್ದತಿ ಅಳವಡಿಸಿಕೊಂಡಿದ್ದು ನಮ್ಮೆಲರ ಸೌಭಾಗ್ಯ. ಆದರಿಂದಲೇ ನಮಗೆ ಮತದಾನ ಮಾಡಲು ಅವಕಾಶ ದೊರಕಿದೆ ಇದರ ಸದುಪಯೋಗ ನಾವು ಪಡೆಯಲು ಮತದಾನ ಮಾಡಬೇಕು ಎಂದರು.
ನರೇಗಾ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಬಿರಾದರ್ ಮಾತನಾಡಿ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಸ್ಪಕ್ಷಪಾತದಿಂದ ಚುನಾವಣೆ ನಡೆಸಲು ಜಿಲ್ಲಾಡಳಿತ ಈಗಾಗಲೇ ತಯ್ಯಾರಿ ಮಾಡಿಕೊಂಡಿದೆ ಹಾಗೂ ಸ್ವೀಪ್ ಸಮಿತಿ ಸಹ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಲೋಕ ಸಭಾ ಮತದಾನ ಮಾಡುವುದನ್ನು ಯಾರು ಮರೆಬಾರದು. ಎಲ್ಲ ಸೇರಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೊಣ ಎಂದರು
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ರೇಣುಕಾ ರಾಹುಲ್, ತಾಂತ್ರಿಕ ಸಂಯೋಜಕರು ವಿಷ್ಣು ಕುಲಕರ್ಣಿ, ತಾಂತ್ರಿಕ ಸಹಾಯಕರು ಸೂರ್ಯಕಾಂತ ಕೊಡಿಗೆ, ಕಾಯಕ ಮಿತ್ರ ಗೀತಾ ದೇವೇಂದ್ರ,ಐ ಇ ಸಿ ಸಂಯೋಜಕರು ಸತ್ಯ ಜೀತ ನೀಡೋದಿಕರ, ಹಾಗೂ ನರೇಗಾ ಕೂಲಿ ಕಾರ್ಮಿಕರು ಇದ್ದರು.