ಸೆ.೨೦-೨೧ ರಂದು ಎಸ್ ಎಸ್ ಐಎಂಎಸ್ ನಲ್ಲಿ ರಾಜ್ಯ ಅಧಿವೇಶನ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೮; ನಗರದ ಎಸ್ ಎಸ್  ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಸೆ.೨೦ ಹಾಗೂ ೨೧ ರಂದು ಬೆಳಗ್ಗೆ ೧೦ ಕ್ಕೆ ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ರಾಜ್ಯ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟನೆಯ ಅಧ್ಯಕ್ಷ ಡಾ.ಅಶ್ವಿನ್ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌
ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ಕರ್ನಾಟಕ ರಾಜ್ಯ ಶಾಖೆ ಇವರ ಸಹಯೋಗದಲ್ಲಿ ಚತುರ್ಥ ರಾಜ್ಯ ಮಟ್ಟದ ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ರಾಜ್ಯ ಅಧಿವೇಶನ  ಸೆಪ್ಟೆಂಬರ್ 20 ಮತ್ತು 21ರಂದು ಆಯೋಜಿಸಲಾಗಿದ್ದು ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ,ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ‌ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆಂದರು. ಈ ಎರಡು ದಿನಗಳ ಕಾರ್ಯಕ್ರಮವು ಸಂಘಟಕರು, ಅಕಾಡೆಮೀಷಿಯನ್‌ಗಳು, ವೈದ್ಯರು ಹಾಗೂ ವಿಜ್ಞಾನಿಗಳಿಗಾಗಿ ಅವರ ವಿಜ್ಞಾನಾತ್ಮಕ ಫಲಿತಾಂಶಗಳು, ಪೇಟೆಂಟ್‌ಗಳು ಹಾಗೂ ಉತ್ಪನ್ನಗಳನ್ನು ಪ್ರದರ್ಶಿಸಲು ಅಪೂರ್ವ ಅವಕಾಶವಿದೆ. ಕಾರ್ಯಕ್ರಮಕ್ಕೆ ಮೇಜರ್ ಜನರಲ್ ಅತುಲ್ ಕೊತ್ವಾಲ್ ಅವರು ಆಗಮಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಆಶಾ,ಡಾ.ವಿದ್ಯಾ ವಿ ಪಾಟೀಲ್,ಡಾ.ಎಸ್.ಸಿ ರಂಗನಾಥ್‌ ಉಪಸ್ಥಿತರಿದ್ದರು.