ಹಿರಿಯೂರು ವಿದ್ಯಾರ್ಥಿಯಿಂದ ದೆಹಲಿಯಲ್ಲಿ ವಿಜ್ಞಾನ ವಸ್ತುಪ್ರದರ್ಶನ
ಸಂಜೆವಾಣಿ ವಾರ್ತೆ
ಹಿರಿಯೂರು: ಸೆ.18-ಹಿರಿಯೂರಿನ ಹೆಸರಾಂತ ವಾಗ್ದೇವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾದ ಕಾರ್ತಿಕ್ .ಎನ್. ಭಾರತ ದೇಶದ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಯಾದ ದೆಹಲಿಯಲ್ಲಿ, ನಡೆದಂತಹ ವಿಜ್ಞಾನ ವಸ್ತು ಪ್ರದರ್ಶನದಲ್ಲಿ, ಭಾಗ ವಹಿಸಿರುತ್ತಾನೆ. ಇದು ಹೆಮ್ಮೆಯ ವಿಚಾರ. ಇದರಲ್ಲಿ ಒಟ್ಟು 600 ವಿದ್ಯಾರ್ಥಿಗಳು ಭಾಗವಹಿಸಿರುವುದು  ವಿಶೇಷ. ಹಿರಿಯೂರಿನ ಶಾಲೆಗಳಲ್ಲಿ ವಾಗ್ದೇವಿ ವಿದ್ಯಾ ಸಂಸ್ಥೆಯ ಏಕೈಕ ವಿದ್ಯಾರ್ಥಿ ಕಾರ್ತಿಕ್ ಎನ್. ಮಾರ್ಗದರ್ಶಕರಾದಂತ ಶ್ರೀಮತಿ ಎಚ್ ವಿ ರುಕ್ಮಿಣಿ ಟೀಚರ್ ಇವರ ಮಾರ್ಗದರ್ಶನದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಈ ವಿದ್ಯಾರ್ಥಿಗೆ ದೆಹಲಿಗೆ ಕರೆದುಕೊಂಡು ಹೋಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ನೀಡಿರುತ್ತಾರೆ. ಹಾಗೂ  ವಾಗ್ದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ ವಿ ಅಮರೇಶ್ ರವರ ಮಾರ್ಗದರ್ಶನ ಪ್ರೋತ್ಸಾಹ  ಶಾಲೆಗೆ ಕೀರ್ತಿ ತರಲು ಕಾರಣಿ ಭೂತರಾಗಿರುತ್ತಾರೆ. ಇವರಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.