ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿಮೇಳ: ರೈತರೊಂದಿಗೆ ಸಭೆ
ಚಿತ್ರದುರ್ಗ,ಸೆ, 18; ಚಿತ್ರದುರ್ಗ ಜಿಲ್ಲೆಯ ಕೃಷಿಯ ಸಮಗ್ರ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚೆ, ಸಂವಾದ, ಹೋರಾಟ, ಅದಕ್ಕೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವಿದೆ ಎಂದು ಸೇರಿದ ಸ್ವಾಮಿಗಳು, ರೈತರು, ಕೃಷಿ ಚಿಂತಕರು ಆ ಪರವಾಗಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ ಅದಾಗಿತ್ತು. ಇತ್ತೀಚೆಗೆ ಬೆಳೆಗಳಿಗೆ ರಾಸಾಯನಿಕ ಬಳಸುವುದರಿಂದ ನಾವು ತಿನ್ನುವ ಆಹಾರ ಸಂಪೂರ್ಣ ವಿಷಮಯವಾಗಿದೆ. ಸಾಧ್ಯವಾದಷ್ಟು ಇದರಿಂದ ಹೊರ ಬಂದು ಸಾವಯವ ಕೃಷಿಗೆ ಹೊತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದೂ ಚರ್ಚಿಸಲಾಯಿತು.ಅಂತಹ ಸಭೆ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಬರುವ ಅಕ್ಟೋಬರ್ 5ರಿಂದ 13ರವರೆಗೆ ಶರಣ ಸಂಸ್ಕೃತಿ ಉತ್ಸವ ಹಾಗೂ ಬೃಹನ್ಮಠದ 24 ನೇ ಪೀಠಾಧಿಪತಿಗಳಾಗಿದ್ದ ಜಯದೇವ ಜಗದ್ಗುರುಗಳವರ 150ನೇ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸಲಹೆ ಸೂಚನೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ ಕೃಷಿಕರು ರೈತ ಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸೇರಿದ್ದ ಸ್ವಾಮಿಗಳ ಸಮ್ಮುಖದಲ್ಲಿ ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರದಲ್ಲಿ ಸೇರಿದ್ದ ಪೂರ್ವ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಅನೇಕರು ತಮ್ಮ ಅನುಭವಗಳನ್ನು ಆ ಮೂಲಕ ಹಂಚಿಕೊಂಡರು.ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರು ಶ್ರೀ ಮುರುಘಾಮಠ ಹಿಂದಿನಿಂದಲೂ ಜನಪರವಾಗಿಯೇ ಬಹುತೇಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಅದು ಜಯದೇವಸ್ವಾಮಿಗಳ ಕಾಲಕ್ಕೆ ಇನ್ನಷ್ಟು ಮತ್ತಷ್ಟು ಪ್ರಖರವಾಗಿ ನಡೆಯಿತು. ಅದನ್ನ ಬಳಿವಿಡಿದುಕೊಂಡು ಬಂದು ಈಗಲೂ ಆ ಕಾರ್ಯ ನಡೆದಿದೆ. ಶರಣ ಸಂಸ್ಕೃತಿ ಉತ್ಸವದ ಒಂದು ಪ್ರಮುಖ ಆಕರ್ಷಕಣೆ ಅಂದರೆ ಕೃಷಿಮೇಳ. ಅದು ಈ ಬಾರಿ ಜಯದೇವ ಜಗದ್ಗುರುಗಳ ಜಯಂತ್ಯುತ್ಸವದ ಅಂಗವಾಗಿ ವಿಶೇಷವಾಗಿ ನಡೆಯಬೇಕೆಂಬುದು ಶ್ರೀಮಠದ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಏನೇನು ಆಯೋಜನೆ ಮಾಡಬೇಕೆಂಬುದರ ಬಗ್ಗೆ ನಿಮ್ಮಿಂದ ಚರ್ಚೆ ನಡೆಯಲಿ ಎಂದು ನುಡಿದರು.ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ಆದರೆ ಈಗ ಆ ಸಂಬಂಧದ ಕೊಂಡಿ ಕಳಚುತ್ತಿದೆ. ಅದು ಹೇಗೆಂದರೆ ತಿನ್ನುವ ಆಹಾರ ಸಂಪೂರ್ಣವಾಗಿ ವಿಷಕಾರಿಯಾಗಿದೆ. ಅದನ್ನ ಗಮನದಲ್ಲಿಟ್ಟುಕೊಂಡು ನಾವು ಸಾವಯವ ಕೃಷಿ ಪದ್ಧತಿಯ ಮೂಲಕ ಹೋಗದೆ ಹೋದರೆ ಭವಿಷ್ಯದಲ್ಲಿ ನಮಗೆ ಉಳಿಗಾಲವಿಲ್ಲ. ಗರ್ಭದರಲ್ಲಿರುವ ಶಿಶುವಿನಿಂದ ಹಿಡಿದು ಈಗೀಗ ಕಾಯಿಲೆಗಳು ಬರುತ್ತಿವೆ. 5-10 ವರ್ಷದ ಮ್ಕಕಳಿಗೆ ಮಧುಮೇಹದಂತಹ ಕಾಯಿಲೆಗಳು ಬೆನ್ನತ್ತಿವೆ. ಸತ್ವಯುತ, ಸಾಂಪ್ರದಾಯಿಕ ಜೀವನ ಶೈಲಿ ಮಾಯವಾಗಿ, ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ನಾವು, ಅವಿಭ್ಕತ ಕುಟುಂಬ ಮಾಯವಾಗಿ ಸ್ವಾರ್ಥಪರ ಜೀವನ ಕ್ರಮದಿಂದ ಮಾನವೀಯತೆ, ಮನುಷ್ಯತ್ವ ಕಡಿಮೆಯಾಗುತ್ತಾ ದುರಾಸೆ ಹೆಚ್ಚಾಗಿದೆ. ಎಂಎನ್‌ಸಿಗಳಿAದ ಹಸಿರು ಕ್ರಾಂತಿ ನಲುಗಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ನಾವು ಕೃಷಿ ಮೇಳಗಳನ್ನು ಅರ್ಥಪೂರ್ಣವಾಗಿ ನಡೆಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟುಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷರಾದ ಈಚಘಟ್ಟದ ಸಿದ್ದವೀರಪ್ಪ ಅವರು ಸಲಹೆ ನೀಡಿದರು.