ಸೆ.೨೦ಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಪ್ರಶಸ್ತಿ ಪ್ರದಾನ- ಪ್ರತಿಭಾಪುರಸ್ಕಾರ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೧೮; ದಾವಣಗೆರೆ ‌ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ‌ ಒಕ್ಕೂಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ‌  ಸಹಯೋಗದಲ್ಲಿ‌ ಸೆ.೨೦ ರಂದು‌ ಬೆಳಗ್ಗೆ ೧೧ ಕ್ಕೆ ನಗರದ ಕುವೆಂಪು ‌ಕನ್ನಡ ಭವನದಲ್ಲಿ‌ ಇದೇ ಪ್ರಥಮ‌ಬಾರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ‌ಸೇವಾ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಮಂಜುನಾಥ್ ಅಗಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ‌ ಪರಿಷತ್ ಸದಸ್ಯರಾದ ಡಿ.ಟಿ ಶ್ರೀನಿವಾಸ್,ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ,ಜಿ.ಪಂ ಸಿಇಒ ಸುರೇಶ್ ಇಟ್ನಾಳ್,ಡಿಡಿಪಿಐ. ಕೊಟ್ರೇಶ್,ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ.ಒಕ್ಕೂಟದ ಅಧ್ಯಕ್ಷರಾಗಿ ಎಂ.ಎಸ್ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆಂದರು.ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಸೇವೆ ಪರಿಗಣಿಸಿಲ್ಲ.ಪ್ರತಿಬಾರಿ ಎಸ್ ಎಸ್ ಎಲ್ ಸಿ‌  ಹಾಗೂ‌ಪಿಯುಸಿಯಲ್ಲಿ ಖಾಸಗಿ‌ ಶಾಲಾ ವಿದ್ಯಾರ್ಥಿಗಳು ಉತ್ತಮ‌ಫಲಿತಾಂಶ ನೀಡುತ್ತಾರೆ ಆದರೆ ಶಿಕ್ಷಕರಿಗೆ ಪ್ರಶಸ್ತಿ ನೀಡುವಲ್ಲಿ‌ ಸರ್ಕಾರ ಕಡೆಗಣಿಸಿದೆ ಎಂದು‌ ಬೇಸರ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ನೂರು ಶಿಕ್ಷಕರಿಗೆ ಹಾಗೂ ೨೪ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಬಿ.ಅನಸೂಯ,ಜೆ.ಮೈನುದ್ದೀನ್ ಹೆಚ್.ಜೆ,ಸಹಾನ ರವಿ,ಸಿ.ಶ್ರೀರಾಮಮೂರ್ತಿ,ಸಯ್ಯದ್ ಮುನ್ ಫುಶ್,ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.