ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಬೇಕು-ಬೋಸರಾಜ್
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೨೨- ಪಟ್ಟಣದ ಭಾರತ ಜೋಡೊ ಭವನದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ್ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾ.ಅಧ್ಯಕ್ಷರಾದ ಬಿ.ಕೆ.ಅಮರೇಶಪ್ಪ ಹಾಗೂ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಬ್ದುಲ್ ಗಾಫೂರ್ ಸಾಬ್ ರವರನ್ನು ಸನ್ಮಾನಿಸಿ ಮಾತನಾಡಿ, ರಾಜ್ಯದ ಜನರಿಗಾಗಿ ರಾಜ್ಯಸರಕಾರವು ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಗ್ಯಾರಂಟಿ ಯೋಜನೆಗಳು ತಾಲೂಕಿನ ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯನ್ನು ರೂಪಿಸಿದ್ದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಪದಾಧಿಕಾರಿಗಳು ತಾಲೂಕಿನ ಪ್ರತಿಯೊಬ್ಬ ಫಲಾನುಭವಿಗೂ ಕೂಡ ತಲುಪಿಸುವುದಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸದಸ್ಯರಾದ ನಾಗೇಶ್ ಕಬ್ಬೇರ್, ಯಲ್ಲಯ್ಯನಾಯಕ, ರವಿ ಪುಟ್ಟ, ಮನೋಜ್ ಗೌಡ, ಕನಕಪ್ಪ ಯಾದವ್, ಹುಸೇನ್ ಬಾಷ, ವೀರನಗೌಡ, ಹಸನ್ ಬಾಷ,ಮಹಾಬಳೆಶಗೌಡ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಹಂಪಯ್ಯನಾಯಕ, ಮುಖಂಡರಾದ ರಾಜಾ ವಸಂತ ನಾಯಕ, ಶರಣಯ್ಯನಾಯಕ ಗುಡದಿನ್ನಿ, ಶಾಂತಪ್ಪ, ಬಾಲಸ್ವಾಮಿ ಕೊಡ್ಲಿ, ಸೈಯಾದ್ ಖಾಲಿದ್ ಖಾದ್ರಿ, ಸಂದಾನಿನಾಯಕ, ಮಹಾತೇಶಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.