ತಾಲೂಕಿನ ತುಂಬಾ ಬರಗಾಲದಲ್ಲೂ ಭರ್ಜರಿ ಬೆಟ್ಟಿಂಗ್: ಕಣ್ಮುಚ್ಚಿ ಕುಳಿತ ಅರಕ್ಷಕರು
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮಾ.೨೨- ಲಿಂಗಸೂಗೂರು ತಾಲೂಕಿನಲ್ಲಿ ಬರಗಾಲದಿಂದ ಬಾಡಿ-ಬಸವಳಿದು ಬೇಸತ್ತ ಜನ ಒಂದೆಡೆ, ಅಂತರ್ಜಲ ಕುಸಿದು ಜನ ಜಾನುವಾರುಗಳು ತತ್ತರಿಸುತ್ತಿರುವುದು ಮತ್ತೊಂದೆಡೆಯಾದರೆ ಇದ್ಯಾವುದನ್ನು ಲೆಕ್ಕಿಸದೆ ಜೂಜು ಕೋರರು ತಾಲೂಕಿನಾದ್ಯಂತ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಿಳಾ ಐಪಿಎಲ್ ಹಾಗೂ ಪಿಎಸ್‌ಎಲ್ ಬೆಟ್ಟಿಂಗ್ ಭರಾಟೆ ಮಿತಿ ಮೀರಿದೆ. ಬೇಸಿಗೆ ಬಿರು ಬಿಸಿಲಿನಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ, ಮದುವೆ ಶುಭ ಕಾರ್ಯಗಳ ಭರಾಟೆ ಒಂದಡೆಯಾದರೆ ಮದುವೆಗಿಂತ ಬೆಟ್ಟಿಂಗ್ ಜೂಜಾಟ ಅವ್ಯಾಹತವಾಗಿ ನಡೆದಿದೆ.
ಜೂಜು ದಂಧೆ ಹೇಗೆ ಜೂಜು ಕೋರರು ಬೆಟ್ಟಿಂಗ್ ಹಣ ಎಷ್ಟು ಎಂದು ತಾವು ಆಯ್ಕೆ ಮಾಡಿಕೊಂಡ ತಂಡದ ಪರವಾಗಿ ಮೊಬೈಲ್ ಮೂಲಕ ಮೆಸೇಜ ಮಾಡುವದರ ಮುಖಾಂತರ ಬೆಟ್ಟಿಂಗ್ ಕಟ್ಟುತ್ತಾರೆ. ನಂತರದಲ್ಲಿ ಬೆಟ್ಟಿಂಗ್ ಕಟ್ಟಿದವರು ಪ್ರತಿ ಓವರ್ನಲ್ಲಿ ಬ್ಯಾಲೇನ್ಸ ಆಗುವದನ್ನು ಎದಿರು ನೋಡುತ್ತಾರೆ.
ಮಹಿಳಾ ಐಪಿಎಲ್ ಹಾಗೂ ಪಿಎಸ್‌ಎಲ್ ಲೀಗ್ನಲ್ಲಿ ಹೆಚ್ಚು ಗೆಲ್ಲುವ ತಂಡಗಳಿಗೆ ತುಂಬಾ ಬೇಡಿಕೆ ಇರುವದರಿಂದ ಬೋನಸ್ ರೀತಿಯಲ್ಲಿ ಬೆಟ್ಟಿಂಗ್ ನೀಡುವವರಿಗೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚಿನ ಹಣದ ಆಸೆಯಿಂದ ಬಹುತೇಕರು ತಂಡವನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಯುವಕರಿಗೆ ಅಭಿಮಾನಿಗಳಿಗೆ ಬೋನಸ್ ಹಣ ಬರುತ್ತದೆ ಎಂದು ಬೆಟ್ಟಿಂಗ್ ನೀಡುವಂತೆ ಆಮಿಷ ಒಡ್ಡುತ್ತಾರೆ.
ಎಲ್ಲೆಲ್ಲಿ-ಎಷ್ಟೆಷ್ಟು ಅಂಗಡಿಗಳು, ಪ್ರಮುಖ ಬೀದಿಗಳು, ವೃತ್ತಗಳು, ಹೋಟೆಲ್ಗಳು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನೀಕ ಸ್ಥಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತಿ ಜೂಜು ಕೋರ ಪ್ರತಿ ದಿನಕ್ಕೆ ಕನಿಷ್ಠ ಸಾವಿರದಿಂದ ಲಕ್ಷದವರೆಗೆ ದಂಧೆ ನಡೆಸುತ್ತಿದ್ದಾನೆ ಎನ್ನಲಾಗುತ್ತಿದೆ. ಇದು ನಿತ್ಯದ ವ್ಯವಹಾರವೆಂಬಂತೆ ಯಾವುದೆ ಅಂಜಿಕೆ-ಅಳುಕಿಲ್ಲದೆ ನಡೆಯುತ್ತಿರುವುದು ನಾಗರೀಕ ಸಮಾಜವನ್ನು ನಿದ್ದೆಗೆಡಿಸಿದೆ. ಗೂಳೆ ವನವಾಸ: ಗೆದ್ದರೆ ಲಕ್ಷಾಧೀಶರು ಸೋತರೆ ಗಂಟು ಮೂಟೆಕಟ್ಟಿಕೊಂಡು ಮಹಾನಗರಗಳಿಗೆ ಹೋಗಿ ದುಡಿಯುವುದು ಸರ್ವೇಸಾಮನ್ಯವಾಗಿದೆ. ಕೆಲವರಂತು ಬೆಟ್ಟಿಂಗ ದಂಧೆಗೆ ಅನುಕೂಲವಾಗಲೆಂದೆ ಬೆಂಗಳೂರು, ಪುಣೆ, ಹೈದ್ರಾಬಾದನಂಥಹ ಸ್ಥಳಗಳಿಗೆ ಹೋಗಿ ದುಡಿದುಕೊಂಡು ಬರುತ್ತಿರುವುದು ನಡೆದಿದೆ. ಬಹುತೇಕ ದಂಧೆಯು ಮೊಬೈಲ್ ಮೂಲಕವೆ ನಡೆಯುತ್ತಿದ್ದು, ಮೋಬೈಲ್ ಟ್ಯಾಪ್ ಮಾಡಿಸಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ವೀಕ್ಷಿಸಿದಾಗ ಮಾತ್ರ ದಂಧೇಕೋರರು ಸಿಕ್ಕಿಬೀಳುತ್ತಾರೆ. ಅಂಥಹವರನ್ನು ಹಿಡಿದು ಕಾನೂನಿನ ಮೂಲಕ ಕ್ರಮ ಕೈಗೊಂಡರೆ ಬೆಟ್ಟಿಂಗ್ ದಂಧೆಯ ಮೂಲಕ ಕುಟುಂಬ ಬೀದಿ ಪಾಲಾಗುವದನ್ನು ತಪ್ಪಿಸಬಹುದಾಗಿದೆ.
ಬಾಕ್ಸ್
ಬೆಂಗಾವಲಾದರೆ ಪೊಲೀಸರು ? ಬೆಟ್ಟಿಂಗ್ ದಂಧೆ ಮಿತಿ ಮೀರಿದೆ. ಅದಕ್ಕೆ ಪೊಲೀಸ್ ಇಲಾಖೆಯೆ ನೇರ ಕಾರಣ ಎನ್ನಲಾಗುತ್ತಿದೆ. ದಂಧೆ ನಡೆಸುವವರು ರಾಜಕೀಯ ಒತ್ತಡದ ತಂತ್ರ ಬಳಸಿ, ಪೊಲೀಸರನ್ನೆ ತಮ್ಮ ದಂಧೆಗೆ ಬೆಂಬಲವಾಗಿಸಿಕೊಂಡು ದಂಧೆ ನಡೆಸುತ್ತಿದ್ದಾರೆನ್ನಲಾಗಿದೆ. ಯಾವ ಪೊಲೀಸರು ದಂಧೆಗೆ ಸಹಕರಿಸುವದಿಲ್ಲವೊ ಅವರ ಮೇಲೆ ರಾಜಿಕೀಯ ಒತ್ತಡ ತಂದು ವರ್ಗಾಯಿಸುವುದು, ಇಲ್ಲವೆ ಅಂಥಹ ಪೊಲೀಸರ ವಿರುದ್ಧ ಸಾರ್ವಜನಿಕರಿಂದ ಇಲ್ಲ ಸಲ್ಲದ ದೂರು ನೀಡುವುದು ಇಲ್ಲವೆ ಅವರನ್ನು ಕರ್ತವ್ಯ ಲೋಪದಡಿ ಹಿಂಸಿಸುವುದು ಸೇರಿದಂತೆ ಪ್ರತಿತಂತ್ರಗಳನ್ನು ರೂಪಿಸುತ್ತಿರುವ ದಂಧೆ ಕೋರರು ಇಲಖೆಯನ್ನೆ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು.
ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಬೆಟ್ಟಿಂಗ ದಂಧೆ ಅವ್ಯಾಹತವಾಗಿದ್ದು, ಅದೊಂದು ವ್ಯವಹಾರವಾಗಿಬಿಟ್ಟಿದೆ. ಇದರಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ವಿದ್ಯಾರ್ಥಿಗಳು ಸೇರಿದಂತೆ ಯುವಕರಿಗೆ ಆಮಿಷವೊಡ್ಡಿ ಬದುಕು ಹಾಳಾಗುತ್ತಿದೆ ಸಂಬಂಧಿಸಿದವರು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮಕೈಗೊಂಡು ಬೆಟ್ಟಿಂಗ ದಂಧೆಗೆ ಕಡಿವಾಣ ಹಾಕಬೇಕು.
-ಯಲ್ಲಪ್ಪ ಅಬ್ದುಲ್ಲಾ ಕಾಲನಿ ಹಟ್ಟಿ
‘ಕ್ರಿಕೇಟ್ ಬೆಟ್ಟಿಂಗ್ ದಂಧೆ ಅಕ್ಷಮ್ಯ ಅಪರಾಧ, ದಂಧೆ ನಡೆಸುತ್ತಿರುವವರು, ಆಮಿಷವೊಡ್ಡಿ ದಾರಿ ತಪ್ಪಿಸುವವರನ್ನು ಗುರುತಿಸಿ ನಿರ್ದಾಕ್ಷೀಣ್ಯ ಕ್ರಮಕೈಗೊಳ್ಳಲಾಗುವುದು, ಅಂಥಹವರಿಗೆ ಯಾವುದೆ ವಿನಾಯ್ತಿ ನೀಡದೆ ಮಟ್ಟ ಹಾಕಲಾಗುವುದು, ಇದಕ್ಕೆ ಸಾರ್ವಜನೀಕರ ಸಹಕಾರವು ಅಗತ್ಯ.’
-ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ರಾಯಚೂರು.