ಎಸ್ ಬಿಐ ನಿಂದ ಆರ್ಥಿಕ ಸಾಕ್ಷರತೆ ಶಿಬಿರ
ಸೇಡಂ, ಮಾ,22: ತಾಲೂಕಿನ ಕೊಂಕನಹಳ್ಳಿ ಗ್ರಾಮದಲ್ಲಿರುವ ಶರಣಬಸವೇಶ್ವರ ದೇವಸ್ಥಾನದಲ್ಲಿಂದು ಎಸ್ ಬಿ ಐ ಆರ್ಥಿಕ ಸಾಕ್ಷರತೆ ಶಿಬಿರ ಮತ್ತು ಲೈಫ್ ಇನ್ಶುರೆನ್ಸ್ ಹಾಗೂ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಗ್ರಾಮದ ಸುತ್ತಮುತ್ತಲಿನ ಜನರಿಗೆ ಎಸ್‍ಬಿಐ ಆರ್ಥಿಕ ಸಾಕ್ಷರತಾ ಶಿಬಿರಗಳ ಮೂಲಕ ಅಪಘಾತ ಇನ್ಸೂರೆನ್ಸ್ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆಯಲ್ಲಿ ಸ್ವರ್ಣ ಜಯಂತಿ ಪ್ರಮುಖರಾದ ಭಗವಂತರಾವ್ ಪಾಟೀಲ್ ಹೆಲ್ತ್ ಇನ್ಸ್ಪೆಕ್ಟರ್ ಡಾ. ಜೈ ಭಾರತಿ ಬಸವರಾಜ್ ಆರ್ ಆರ್ ಕಟ್ಟಿಮನಿ, ಈ ಐ ಅ ಸೇಡಂ ಮತ್ತು ಶರಣಪ್ಪ ಹಂಗನಹಳ್ಳಿ, ಸೇರಿದಂತೆ ಹಲವರು ಇದ್ದರು.