ಪತ್ರಿಕಾ ಭವನದಲ್ಲಿ ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನಾಚರಣೆಪಕ್ಷಿ ಸಂಕುಲ ರಕ್ಷಣೆ ನಮ್ಮೆಲ್ಲರ ಹೊಣೆ ದತ್ತಾತ್ರೆಯ ಕಾರ್ನಾಡ್
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮಾ.೨೧- ಪಕ್ಷಿ ಸಂಕುಲ ರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ನಾವೆಲ್ಲರೂ ಬದ್ದರಾಗೊಣ ಎಂದು ಲಿಂಗಸುಗೂರು ತಾಲ್ಲೂಕಿನ ಉಪ ವಿಭಾಗದ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕ ಘಟಕ ಲಿಂಗಸುಗೂರು ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಹಾಗೂ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಪತ್ರಿಕೆ ಗಳು ಇಲ್ಲದೇ ಜೀವನೆ ಇಲ್ಲ ಎಂಬಂತೆ ಜೀವನದಲ್ಲಿ ಹಾಸುಹೊಕ್ಕಾಗಿವೆ. ಪತ್ರಿಕಾ ಮಾಧ್ಯಮ ವಿಶಾಲವಾಗಿದೆ ಅದರ ಶಕ್ತಿ ಕೂಡ ಅಗಾದವಾಗಿದೆ ಎಂದು ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ್ ಹೇಳಿದರು.
ಕಡು ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಅರವಟ್ಟಿಗೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಪತ್ರಕರ್ತರ ಸಾಮಾಜಿಕ ಕಾರ್ಯಗಳಿಗೆ ಎಂದಿಗೂ ನಾವಿರುತ್ತೇವೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ಕರಡಕಲ್ ಮಾತನಾಡಿ, ಪತ್ರಿಕಾ ರಂಗ ಮತ್ತುಕಾನೂನು ನೀರು ಮತ್ತು ಮೀನು ಇದ್ದಂತೆ, ಸಮಾಜದ ಪ್ರತಿಯೊಬ್ಬರ ತಪ್ಪುಗಳನ್ನು ಎತ್ತಿ ತೋರಿಸುವುದೇ ಮಾಧ್ಯಮ. ಆ ತಪ್ಪುಗಳನ್ನು ತಿದ್ದಿ ನಡೆಯೋವುದೆ ಮಾನವೀಯತೆ ಗುಣವಾಗಿದೆ.
ಕೇವಲ ತಪುಗಳನ್ನು ಮಾತ್ರ ಎತ್ತಿತೊರಿಸದೇ ಸಾಧನೆ ಮತ್ತು ಸಮೃದ್ಧಿಯನ್ನು ಪ್ರತಿಬಿಂಬಿಸುವ ಕಾರ್ಯ ಪತ್ರಿಕಾ ರಂಗದ ಕೆಲಸವಾಗಿದೆ. ಇಂತಹ ಮಾಧ್ಯಮ ಜೊತೆಗೆ ನಾವೆಲ್ಲರೂ ಸಾತ್ ನೀಡಬೇಕು ಎಂದರು.
ವನಸಿರಿ ಫೌಂಡೆಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ, ಪಕ್ಷಿ ಸಂಕುಲ ಆಧುನಿಕತೆಯಿಂದಾಗಿನಾಶವಾಗುತ್ತದೆ. ಇಂತಹ ಸಮಯದಲ್ಲಿ ಪಕ್ಷಿ ಸಂಕುಲಕ್ಕೆ ನೀರಿನ ಅರವಟ್ಟಿಗೆ ಮಾಡುತ್ತಿರುವ ಕಾರ್ಯ ಮೆಚ್ಚುವಂತಹ ಹಾಗೂ ಮಾದರಿಯಾಗುವಂತಹ ಕೆಲಸ ಮಾಡುತ್ತಿದೆ ಎಂದರು.
ಪತ್ರಕರ್ತರ ಸಂಘದ ತಾಲ್ಲೂಕ ಅಧ್ಯಕ್ಷ ಗುರುರಾಜ ಗೌಡೂರು ಮಾತನಾಡಿ. ಮಾಧ್ಯಮ ಮಿತ್ರರರ ಕೈಯಲ್ಲಿರುವ ಪೆನ್ನು ಖಡ್ಗವಾಗಿದೆ ಅದರೆ ಅದರಿಂದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದೆಂದು ತಿಳಿಸಿದರು.
ಸಮಾರಂಭದಲ್ಲಿ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶಿವರಾಜ ಕೆಂಭಾವಿಯವರಿಗೆ ಸನ್ಮಾನಿಸಲಾಯಿತು
ಈ ವೇಳೆ ಪತ್ರಕರ್ತರ ಸಂಘದ ತಾಲ್ಲೂಕ ಸಂಘದ ಅಧ್ಯೆಕ್ಷರಾದ ಗುರುರಾಜ ಗೌಡುರು ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ, ಪತ್ರಕರ್ತರಾದ ಬಿ.ಎ. ನಂದಿಕೋಲಮಠ, ಖಾಜಾಹುಸೇನ್, ಘನಮಠದಯ್ಯ. ಬಲಭೀಮರಾವ್ ಕುಲಕರ್ಣಿ, ನಾಗರಾಜ ಮಸ್ಕಿ, ರವಿಕುಮಾರ ಕಬ್ಬೇರ ದುರಗಪ್ಪ ಹೂಸಮನಿ ರವಿಕುಮಾರ ಸೂರ್ಯವಂಶಿ ಬಸವರಾಜ ಕಟ್ಟಿಮನಿ ಗೌತಮಕುಮಾರ ಸಾದತ ಅಲಿ ಬಾಬಿ ರವಿಕುಮಾರ ಹೊಸಮನಿ ಶ್ರೀಕಾಂತ ಯಲ್ಲಪ್ಪ ವಂದಲಿ ರಾಘವೇಂದ್ರ ಭಜಂತ್ರಿ ಪಂಪಾಪತಿ ಸೇರಿ ಲಿಂಗಸುಗೂರು. ಹಟ್ಟಿ, ಮುದಗಲ್ ಪಟ್ಟಣದ ಪತ್ರಕರ್ತರು ಇದ್ದರು.