ನೀರಿನ ಅರವಟಿಗೆ ಪ್ರಾರಂಭ
ಸಿರವಾರ,ಮಾ.೨೨-
ಪಟ್ಟಣದ ರಾಯಚೂರ- ಲಿಂಗಸ್ಗೂರು ರಸ್ತೆಯ ಶಿವಮಾತ ಚಿತ್ರ ಮಂದಿರದ ಎದುಗಡೆ ಸ್ನೇಹಿತರು ಸೇರಿ ಶುದ್ದ ಕುಡಿಯುವ ನೀರಿನ ಅರವಟಿಗೆಯನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕರಿಗೆ ನೇರವಾಗಿದ್ದಾರೆ. ಮಲ್ಲಪ್ಪ ಸಾಹುಕಾರ ಅರಕೇರಿ, ಪ.ಪಂ ಸದಸ್ಯ ಹಾಜಿಚೌದ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಭುಸ್ವಾಮಿ ವಿಶ್ವಕರ್ಮ(ಹೀರಾ), ರಾಚಪ್ಪ, ನಾಗಪ್ಪ, ಗಂಗಾಧರ ವಿಶ್ವಕರ್ಮ, ನರಸಪ್ಪ ಟೈಲರ್, ಬಸವರಾಜ (ನಕ್ಕುಂದಿ) ಇನ್ನಿತರರು ಇದರು.