೫ ಗ್ಯಾರೆಂಟಿ ಯೋಜನೆಯ ತಿಳಿಸಿ ಮತ ಕೇಳಿ-ಎನ್.ಎಸ್.ಬೋಸರಾಜು
ಸಿರವಾರ.ಮಾ೨೨- ವಿಧಾನಸಭೆ ಚುನಾವಣೆಯಲ್ಲಿ ಆಶ್ವಾಸನೆ ನೀಡಿದಂತೆ ೫ ಗ್ಯಾರೇಂಟಿಗಳನ್ನು ಜಾರಿಗೆ ತಂದು ತಿಂಗಳಿಗೆ ೬೦ ಸಾವಿರ ಕೊ. ಅನುದಾನ ಜನರಿಗೆ ತಲುಪಿತಿವೆ, ಕುಟುಂಬಕ್ಕೆ ೫-೬ ಸಾವಿರ ರೂ ಖಾತೆಗೆ ನೇರವಾಗುತ್ತಿದೆ ಜಮಾವಣೆ ಆಗುತ್ತಿವೆ, ಇಂತಹವುಗಳನ್ನು ಮತದಾರರಿಗೆ ತಿಳಿಸಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೇಳಿ ಅದಿಕ ಮತಗಳ ಅಂತರದಿಂದ ಗೆಲಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಕಾಂಗ್ರೇಸ್ ಯುವ ಮುಖಂಡರಾದ ಬ್ರಿಜೇಶ ಪಾಟೀಲ್ ಅವರ ನಿವಾಸದಲ್ಲಿ ಕಾರ್ಯಕರ್ತರ ಸಭೆ, ೫ ಗ್ಯಾರೆಂಟಿ ಯೋಜನೆ ಸಮಿತಿಯ ತಾಲೂಕ ಅದ್ಯಕ್ಷ, ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಕ್ಕೂ ನಮ್ಮ ೫ ಗ್ಯಾರೆಂಟಿಗಳು ತಲುಪಿವೆ ಎಂದು ಹೆಮ್ಮೆಯಿಂದ ಹೇಳುತ್ತೆವೆ. ತಿಂಗಳಿಗೆ ೬೦ ಸಾವಿರ ಕೊ. ಖರ್ಚಾಗುತ್ತಿವೆ, ಪ್ರತಿ ಕುಟುಂಬಕ್ಕೆ ಮಾಸಿಕ ೫-೬ ಸಾವಿರ ನೇರವಾಗುತ್ತಿವೆ. ಕಾಂಗ್ರೇಸ್ ಪಕ್ಷ ಸರ್ವ ಜಾತಿ, ಧರ್ಮ ನಡುವೆ ಜಗಳ ಹಚ್ಚುವುದಿಲ, ಎಲ್ಲಾರ ಅಭಿವೃದ್ದಿ ನಮ್ಮ ಉದೇಶ, ಪಕ್ಷದ ಸಾಧನೆ ತಿಳಿಸಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವಂತೆ ತಿಳಿಸಿ, ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಮಾನ್ವಿ ಶಾಸಕರಾದ ಜಿ.ಹಂಪಯ್ಯ ನಾಯಕ ಮಾತನಾಡಿ ಹಂತ ಹಂತವಾಗಿ ಕಾರ್ಯಕರ್ತರಿಗೆ, ಮುಖಂಡಿಗೆ ಹುದ್ದೆ, ಅದಿಕಾರ ಸಿಗುತ್ತದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ೨೫ ಜನ ಬಿಜೆಪಿ ಸಂಸದರು ಗೆದ್ದಿದಾರೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಬರಬೇಕಾದ ಜಿಎಸ್ ಟಿ ತರುವಲಿ ವಿಫಲರಾಗಿದ್ದಾರೆ. ಬಿಜೆಪಿಯವರಂತೆ ನಾವು ಸೈನಿಕರ ಸಾವು, ಧರ್ಮದ ವಿಚಾರದಲ್ಲಿ ಮತ ಕೇಳುವುದಿಲ, ವಿಧಾನ ಸಭಾ ಚುನಾವಣೆಯಲ್ಲಿ ನೀಡಿದ ಬರವಸೆಗಳು ಎಲ್ಲಾ ಜಾತಿ ದರ್ಮದವರು ಪ್ರಯೋಜನೆ ಪಡೆಯುತ್ತಿದ್ದಾರೆ. ಇಂತವುಗಳನ್ನು ಜನತೆಗೆ ತಿಳಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಎಂದರು.
ಈ ಸಂದರ್ಭದಲ್ಲಿ ಶರಣಯ್ಯ ನಾಯಕ, ಕೆ.ಶಾಂತಪ್ಪ, ನಗರ ಸಭೆ ಮಾಜಿ ಉಪಾಧ್ಯಕ್ಷ ಜಯಣ್ಣ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್ ಅತ್ತನೂರು, ಗ್ಯಾರೆಂಟಿ ಯೋಜನೆಯ ಸಮಿತಿ ತಾಲೂಕ ಅದ್ಯಕ್ಷ ಬ್ರೀಜೇಶ ಪಾಟೀಲ್, ತಾ.ಪಂ ಮಾಜಿ ಅದ್ಯಕ್ಷ ದಾನನಗೌಡ,ಚಂದ್ರುಕಳಸ, ನಿರ್ಮಲಾ ಬೆಣ್ಣೆ, ರೇಣುಕಾ, ರಮೇಶದರ್ಶನಕರ್, ಎಂ.ಶ್ರೀನಿವಾಸ, ಶಿವಶರಣಸಾಹುಕಾರ ಅರಕೇರಿ, ನಾಗರಾಜ ಚಿನ್ನಾನ್, ಪ.ಪಂ ಸದಸ್ಯರಾದ ವೈ ಭೂಪನಗೌಡ, ಸೂರಿ ದುರುಗಣನಾಯಕ, ಹಾಜಿಚೌದ್ರಿ, ಮಾರ್ಕಪ್ಪ, ಹಸೇನ ಅಲಿಸಾಬ, ಮೌಲಾಸಾಬ ವರ್ಚಸ್, ಚನ್ನಪ್ಪ ಗಡ್ಲ, ರಂಗನಾಥ ಭೋವಿ, ಪ.ಪಂ ಮಾಜಿ ಉಪಾಧ್ಯಕ್ಷ ಚನ್ನಬಸವ ಗಡ್ಲ, ಬಸವರಾಜ ಗಡ್ಲ, ಚನ್ನಪ್ಪ ನಾಗೋಲಿ, ನಾಮ ನಿರ್ದೇಶನ ಸದಸ್ಯ ರಂಗನಾಥ ನಾಯಕ, ವಿಎಸ್‌ಎಸ್‌ಎನ್ ಅದ್ಯಕ್ಷ ದೇವಪುತ್ರಪ್ಪ, ಬಸವರಾಜ ದಳಪತಿ, ಹಾಜಿಮಲ್ಲಂಗ, ನಾಗಪ್ಪ ಗುಡದಿನ್ನಿ, ನಾಗಪ್ಪ ಪತ್ತಾರ, ಹೆಚ್.ಕೆ.ಅಮರೇಶ, ಕಲ್ಲೂರು ಬಸವರಾಜ ನಾಯಕ, ಜಿ.ವಿರೇಶ, ಲಂಕೇಶ ಮರಾಟ, ಅಬ್ರಾಹಂ ಹೊನ್ನಟಗಿ, ವಿರೇಶ ಗಡ್ಲ, ಹನುಮಂತ ಬಡ, ಜಯಪ್ಪ, ಎಲ್.ಕೆ.ಮರಿಯಣ, ಭೀರಪ್ಪ ಬಲ್ಲಟಗಿ, ಶಾಂತಪ್ಪ ಸೇರಿದಂತೆ ಇನ್ನಿತರರು ಇದ್ದರು.