ತಹಸೀಲ್ದಾರ್ ಸುರೇಶ ಅಂಕಲಗಿ ಅಧಿಕಾರ ಸ್ವೀಕಾರ
ಅರಕೇರಾ.ಮಾ.೨೨- ನೂತನ ತಾಲೂಕು ಕೇಂದ್ರ ಅರಕೇರಾಕ್ಕೆ ಸುರೇಶ ಅಂಕಲಗಿಯವರು ಇಂದು ಗುರುವಾರ ತಹಸೀಲ್ದಾರರಾಗಿ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಅರಕೇರಾ ತಹಶೀಲ್ದಾರರಾಗಿ ಯಲ್ಲಪ್ಪ ಸುಬೇದಾರ ಕಾರ್ಯನಿರ್ವಹಿಸಿ ಜುಲೈ ತಿಂಗಳಲ್ಲಿ ಅಪ್ಜಲಪೂರು ತಾಲ್ಲೂಕಿಗೆ ವರ್ಗಾವಣೆಗೊಂಡ ಹಿನ್ನೆಯಲ್ಲೆ ತೆರವಾದ ಸ್ಥಾನಕ್ಕೆ ನೂತನ ತಹಶೀಲ್ದಾರ ಸುರೇಶ ಅಂಕಲಗಿಯವರು ಲೋಕಸಭಾ ಚುನಾವಣೆಯ ನಿಮಿತ್ಯ ಅಧಿಕಾರ ಸ್ವೀಕರಿಸಿದರು.
ಸುರೇಶ ಅಂಕಲಗಿಯವರು ಯಾದಗಿರಿ, ವಡಿಗೇರಾದಲ್ಲಿ ಕಾರ್ಯನಿರ್ವಹಿಸಿದ್ದು, ಅರಕೇರಾ ತಾಲ್ಲೂಕಿಗೆ ವರ್ಗಾವಣೆಯಾಗಿ ಬಂದು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ತಹಸೀಲ್ದಾರರಿಗೆ ಕಂದಾಯ ಇಲಾಖೆ ವತಿಯಿಂದ ಸನ್ಮಾನಿಸಿ ಭಾರಮಾಡಿಕೊಂಡರು.
ಸಂದರ್ಭದಲ್ಲಿ ಉಪ ತಹಶೀಲ್ದಾರರಾದ ಮನೋಹರ ನಾಯಕ, ಕಂದಾಯ ನೀರಿಕ್ಷಕರಾದ ಉಮಶಂಕರ, ಗ್ರಾಮ ಲೆಕ್ಕಾಧಿಕಾರಿಗಳಾದ ಬಸವರಾಜಹೂನುರು, ಅರುಣಾ ಮಮತಾ, ಕೆಂಚಬಸ್ಸಪ್ಪ, ಸತೀಶ, ಕನಕಪ್ಪ, ಶರಣಯ್ಯಸ್ವಾಮಿ, ವೆಂಕಟೇಶ, ಕರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.