ಸ್ವಚ್ಛತೆ ಇಲ್ಲದ ಕೊಟ್ಟೂರು ಬಸ್ ನಿಲ್ದಾಣದ ಶೌಚಾಲಯ
* ಮೂತ್ರ ವಿಸರ್ಜನೆ ಜಾಗದಲ್ಲಿ ತಡೆಗೋಡೆ ಹಾಳು, ವಿಸರ್ಜನೆ ವೇಳೆ ಮುಜುಗರ.
* ತಈ ಬಗ್ಗೆ  ನಿರ್ಲಕ್ಷ್ಯ ಅಧಿಕಾರಿಗಳಿಗೆ ಜನರಿಂದ ಇಡೀ ಶಾಪ.
ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.22: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಪುರುಷರು ಮುಜುಗರದಿಂದ ಮೂತ್ರ ವಿಸರ್ಜನೆ ಮಾಡುತ್ತ,ಸಂಬಂಧ ಪಟ್ಟ ಅಧಿಕಾರಿಗಳಿಗೆ ಇಡೀ ಶಾಪ ಹಾಕುವ ದೃಶ್ಯ ನಿತ್ಯ ಇಲ್ಲಿ ಸರ್ವೇಸಾಮಾನ್ಯವಾಗಿದೆ.
ಮೂತ್ರ ವಿಸರ್ಜನೆ ಮಾಡುವಲ್ಲಿ, ತಡೆಗೋಡೆಗಳು ಹಾಳಾಗಿ ಬಹುದಿನಗಳೇ ಕಳೆದಿವೆ, ಇಲ್ಲಿನ ವಾಸನೆಗೆ ಜನರು ಬೇಸತ್ತು ಹೋಗಿದ್ದಾರೆ ಆದರೆ ಸಂಬಂಧ ಪಟ್ಟ ಅಧಿಕಾರಿಗಳು  ಈ ಬಗ್ಗೆ ಗಮನ ಹರಿಸದೆ
ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಡೆಗೋಡೆಗಳು ಹಾಳಾಗಿರುವ ಹಿನ್ನೆಲೆ ಮೂತ್ರ ವಿಸರ್ಜನೆ ಮಾಡುವಾಗ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುವಂತವರ ಮೂತ್ರಗಳು ಸಿಡಿಯುತ್ತವೆ ಎಂಬ ಕಾರಣಕ್ಕೆ ಹಾಗೂ ಮುಜುಗರದಿಂದ ಕೆಲವರು ಬಹು ಸಮಯದವರೆಗೆ ಕಾದು ಪಕ್ಕದಲ್ಲಿ ಯಾರು ಇಲ್ಲದಿದ್ದ ವೇಳೆ ಮಾತ್ರ ವಿಸರ್ಜನೆ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ, ಪ್ರಯಾಣದ ವೇಳೆ ಅವಸರದಲ್ಲಿ ಪ್ರಯಾಣಿಕರು ಶೌಚಾಲಯಕ್ಕೆ ತೆರಳಿ ಮೂತ್ರ ವಿಸರ್ಜನೆಗೆ ಮುಂದಾದರೆ,ಮೂತ್ರ ಪಕ್ಕದವರಿಗೆ ಸಿಡಿದವು ಎಂಬ ಭಯದಿಂದ ಮೈ ಬಿಗಿ ಇಡಿದು ವಿಸರ್ಜನೆಗೆ ಮುಂದಾಗುವರು, ಈ ಸಂಬಂಧ ಕೆಲವರು ಏರುಪೇರಾದುದ್ದು ಇಲ್ಲಿ ಉಂಟು, ಇದೇ ಸಿಟ್ಟಿನಲ್ಲಿ ಪ್ರಯಾಣಿಕರು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ವಾಚಾ ಮಾಚವಾಗಿ ಚಾಡಿಸಿದ್ದು ನಿದರ್ಶನ ವಿದೆ.
ಶೀಘ್ರ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಕೊಟ್ಟೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಾಳಾಗಿರುವ ತಡೆ ಗೋಡೆಗಳನ್ನು ನಿರ್ಮಿಸಬೇಕು ಇಲ್ಲವಾದರೆ ಮುಂದೆ ನಡೆಯುವ ಘಟನೆಗಳಿಗೆ ತಾವು ಹೊಣೆಗಾರರಾಗಬೇಕಾಗುತ್ತೆ ಎಂದು ಸಾರ್ವಜನಿಕರು ಆಗ್ರಹಿಸಿದರು.
ಕೊಟ್ಟೂರು ತಾಲೂಕು ಕೇಂದ್ರ ಮತ್ತು ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರ ಇಲ್ಲಿನ ಬಸ್ ನಿಲ್ದಾಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ನಿತ್ಯ ಪ್ರಯಾಣಿಕರು ಆಗಮಿಸುವರು.ಇಲ್ಲಿನ ಶೌಚಾಲಯವನ್ನು ಸುವ್ಯವಸ್ಥಿತವಾಗಿ ಕಾಪಾಡಿಕೊಳ್ಳಲು ಆಗದಿರುವುದು ನಾಚಿಕೆ ಗೇಡು.ಶೀಘ್ರ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಪ್ರಜ್ಞಾವಂತ ನಾಗರಿಕರು,ಕೊಟ್ಟೂರು.