85ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲೇ ಮತ ಚಲಾಯಿಸಲು ಅವಕಾಶ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.22 :- ಪ್ರಜಾಪ್ರಭುತ್ವದ ಸಂವಿಧಾನಿಕ  ಹಕ್ಕಾಗಿರುವ  ಮತದಾನದಿಂದ ಯಾವುದೇ ಮತದಾರರು  ವಂಚಿತರಾಗಬಾರದೆನ್ನುವ ನಿಟ್ಟಿನಲ್ಲಿ  ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ 85ವರ್ಷಕ್ಕೂ ಮೇಲ್ಪಟ್ಟ  ವಯಸ್ಸಿನವರಿಗೆ ಮತಗಟ್ಟೆಗೆ  ಬಂದು ಮತದಾನ ಮಾಡಲು ನಿಶಕ್ತರಾಗಿರುವವರನ್ನು  ಮತಗಟ್ಟೆಯ ಬಿಎಲ್ ಓ ಗಳು  ಗುರುತಿಸಿ ನಮೂನೆ 12ಡಿ  ಪತ್ರದ ಮೂಲಕ ಮನೆಯಲ್ಲೇ ಮತ ಚಲಾವಣೆ ಮಾಡುವ ಅವಕಾಶವಿದ್ದು ಈ ವಿನೂತನ ಕಾರ್ಯಕ್ರಮಕ್ಕೆ  ಗುರುವಾರ ಸಂಜೆ ಕೂಡ್ಲಿಗಿ 96ವಿಧಾನಸಭಾ ಕ್ಷೇತ್ರದ  ಸಹಾಯಕ ಚುನಾವಣಾಧಿಕಾರಿ ಡಾ ಎಚ್ ಎನ್ ರಘು ಹಾಗೂ ಕೂಡ್ಲಿಗಿ ತಹಸೀಲ್ದಾರ್ ರಾಜು ಪಿರಂಗಿ  ಪಟ್ಟಣದ 103ವರ್ಷದ ಬಂಡೆಮ್ಮ ಅವರಿಗೆ ನಮೂನೆ 12ಡಿ  ಪತ್ರ ವಿತರಣೆ ಮಾಡಿ ಚಾಲನೆ ನೀಡಿ  ತಪ್ಪದೆ ಮತದಾನ ಮಾಡುವಂತೆ ತಿಳಿಸಿದರು.
ಮೇ 7ರಂದು ನಡೆಯುವ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಪಿಡಬ್ಲ್ಯುಡಿ ಮತದಾರರು ಮನೆಯಲ್ಲೇ ಮತ ಹಾಕುವ ಅವಕಾಶವಿದೆ ನಮೂನೆ 12ಡಿ ಪತ್ರವನ್ನು ಪಡೆದುಕೊಂಡು ಮನೆಯಲ್ಲಿರುವ ವಯಸ್ಸಾದ  ನಿಶಕ್ತ ಮತದಾರರು ಇದರ ಉಪಯೋಗ ಪಡೆದು ತಪ್ಪದೆ ಮತ ಚಲಾಯಿಸುವಂತೆ  ಸಹಾಯಕ ಚುನಾವಣಾಧಿಕಾರಿ  ಡಾ.ಎಚ್.ಎನ್.ರಘು ಜನರಲ್ಲಿ ಮತದಾನದ  ಮಹತ್ವ ಕುರಿತು ಜಾಗೃತಿ ಮೂಡಿಸಿದರು
ಕೂಡ್ಲಿಗಿ ಪಟ್ಟಣದಲ್ಲಿ 103 ವರ್ಷ ವಯಸ್ಸಿನ ಬಂಡೆಮ್ಮ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ್ದ ಸಹಾಯಕ ಚುನಾವಣಾಧಿಕಾರಿ ಡಾ.ಎಚ್.ಎನ್.ರಘು, ತಹಸೀಲ್ದಾರ್ ರಾಜು ಪಿರಂಗಿ ಅವರು ಲೋಕಸಭೆ ಚುನಾವಣೆಗೆ ಮನೆಯಲ್ಲೇ ಮತ ಹಾಕಲು ನಮೂನೆ-12 ಡಿ ಪತ್ರವನ್ನು ನೀಡಿದರು.
ತಹಸೀಲ್ದಾರ್ ರಾಜು ಪಿರಂಗಿ ಮಾತನಾಡಿ, ಲೋಕಸಭೆ ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮತದಾನದಿಂದ ಯಾವೊಬ್ಬ ಮತದಾರರು  ವಂಚಿತರಾಗಬಾರದು ಎಂದು ತಿಳಿಸಿದರು. ಈ ಪ್ರತಿಯೊಬ್ಬರೂ ಮತ ಹಾಕುವುದರಿಂದ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದರು ಈ ಸಂದರ್ಭದಲ್ಲಿ  ಬಿಎಲ್ ಒಗಳು ಸೇರಿ ಇತರರಿದ್ದರು.
One attachment • Scanned by Gmail