ಭಗವದ್ಗೀತೆಯೇ ಒಂದು ಜ್ಞಾನ ಗಂಗೆ -ಕಿಶನ್ ರಾವ್ ಕುಲಕರ್ಣಿ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.22: ಭಗವದ್ಗೀತೆಯನ್ನು ವಿಶಾಲವಾಗಿ ವಿಮರ್ಶೆಗೆ ಒಳಪಡಿಸ ಬಹುದಾದ ಬದುಕಿನ ಎಲ್ಲಾ ಆಯಾಮಗಳನ್ನು ಪರಿಚಯಿಸಬಹುದಾದ  ಸಂದೇಶ ಸಾರವಾಗಿದೆ ಎಂದು ಪುಸ್ತಕ ಆಯ್ಕೆ ಸಮಿತಿ ಸದಸ್ಯ ಹಾಗೂ ಉಪನ್ಯಾಸಕ ಕಿಶನ್ ರಾವ್ ಕುಲಕರ್ಣಿ ಹೇಳಿದರು.
ಹೊಸಪೇಟೆ ಯ ಮಲ್ಲಿಗೆ ಸಭಾಂಗಣದಲ್ಲಿ ಗುರುವಾರ ಸಂಜೆ ಮಂದಾರ ಪ್ರಕಾಶನ ಬೆಂಗಳೂರು ಹಾಗೂ ಹೊಸಪೇಟೆಯ ಆಸ್ತಿಕ ಬಂಧು ಸ್ನೇಹ ಬಳಗದ ಸಹಯೋಗದಲ್ಲಿ ಮಾಣಿಕ್ಯ ಪ್ರಭು ವಿರಚಿತ ಗೀತಾ ಜ್ಞಾನ ಗಂಗಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಭಗವದ್ಗೀತೆ ವಿಮರ್ಶೆಗೆ ಮುಕ್ತವಾಗಿಟ್ಟು ಸಣ್ಣ ಕೃತಿಯಲ್ಲಿ ಕಟ್ಟಿಹಾಕುವ ಮೂಲಕ ತಿಳಿಸುವ ಮಹತ್ವದ ಕಾರ್ಯಮಾಡಿದ್ದಾರೆ ಎಂದರು. ಇದು ಕೇವಲ ಒಂದು ಕೃತಿಯಾಗದೆ ಜ್ಣಾನದ ಗಂಗೆಯಾಗಿ ರೂಪಿಸಿದ್ದಾರೆ ಎಂದು ಓದು ಮಾಯವಾಗುತ್ತಿರುವಾಗ ಈ ಸಂದರ್ಭದಲ್ಲಿ ಓದಿನ ಹವ್ಯಾಸಕ್ಕೆ ಸಾಕ್ಷಿಯಾಗಿದೆ ಎಂದರು.
ಕಿರು ಹೊತ್ತಿಗೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಪ್ರೋ.ಯು.ರಾಘವೇಂದ್ರರಾವ್ ಮಾತನಾಡಿ ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಮಾನಸಿಕ ಹಾಗೂ ಧಾರ್ಮಿಕತೆಯ ಸಂಕೇತವಾಗದೆ, ಜಾಗತಿಕ ದೈಹಿಕ ಮಾನಸಿಕತೆಯನ್ನು ತಿಳಿಸುವ, ಅಜ್ಞಾನ ಹೊಡೆದೊಡಿಸುವ ಸಂದೇಶ ನೀಡಿದೆ. ಇಂತಹ ಕೃತಿಯನ್ನು ಸರಳವಾಗಿ ತಿಳಿಸುವ ಕಾರ್ಯ ಈ ಗೀತಾ ಜ್ಞಾನ ಗಂಗಾದಲ್ಲಿ ಮಾಣಿಕ್ಯಪ್ರಭು ಕಟ್ಟಿಕೊಟ್ಟಿದ್ದಾರೆ ಎಂದರು.
ಸಾನಿದ್ಯ ವಹಿಸಿದ್ದ ಸುಭೇದಾನಂದಜೀ ಮಹಾರಾಜ ಅಧ್ಯಕ್ಷರು ಗೀತಾಶ್ರಮ ಆರ್ಶಿವದಿಸಿದರು.
ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಾ.ಕೆ.ಹನುಮಂತರಾವ್, ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಎ.ಶೀನಂಭಟ್,  ಅದ್ಯಕ್ಷ ಕೆ.ದಿವಾಕರ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ವೈದ್ಯ ಪಾಲ್ಗೊಂಡಿದ್ದರು. ಇದೆ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
ಹೆಚ್.ಪಿ.ಕಲ್ಲಂಭಟ್ ಶಿಕ್ಷಕ ಬಸವರಾಜ ಕಾರ್ಯಕ್ರಮ ನಿರ್ವಹಿಸಿದ್ದರು.