ಲೋಕಸಭಾ ಚುನಾವಣೆ:ಬಳ್ಳಾರಿ ಕ್ಷೇತ್ರಶ್ರೀರಾಮುಲು v/s ತುಕರಾಂ ಫಿಕ್ಸ್
ಎನ್.ವೀರಭದ್ರಗೌಡ
ಬಳ್ಳಾರಿ, ಮಾ.22: ಈಗ 2024 ರ ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದ  ಕಣ ಸ್ಪಷ್ಟವಾಗಿದೆ. ಬಿಜೆಪಿಯ ಬಿ.ಶ್ರೀರಾಮುಲು ಮತ್ತು ಕಾಂಗ್ರೆಸ್ ನ ಇ.ತುಕರಾಂ ಅವರ ಮಧ್ಯೆ ಸಮಬಲದ ಪೈಪೋಟಿಯ ಸ್ಪರ್ಧೆ ಏರ್ಪಡಲಿದೆ.
ಈ ಮೊದಲಿನಿಂದಲೇ ಅಂದರೆ ಯಾವಾಗ ಗ್ರಾಮೀಣ ಕ್ಷೇತ್ರದಲ್ಲಿ ತಮಗೆ ಸೋಲಾಯ್ತು ಅಂದಿನಿಂದಲೇ ಲೋಕಸಭಾ ಚುನಾವಣೆಯ ಮೇಲೆ ಗುರಿ ಇಟ್ಟರು ಶ್ರೀರಾಮುಲು. ಯಾಕೆಂದರೆ ಕಳೆದ ಮೂವತ್ತು ವರ್ಷಗಳಿಂದ ರಾಜಕೀಯವನ್ನೇ     ಜೀವನವನ್ನಾಗಿರಿಸಿಕೊಂಡಿರುವ  ಅವರು. ಸೋತು ಸುಮ್ಮನೆ ಕೂರಲು ಆಗಲ್ಲ. ಅದಕ್ಕಾಗಿ  ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಿದ್ದರೂ, ತಕ್ಷಣ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್ ಗಟ್ಟಿ ಮಾಡಿಕೊಂಡು. ಚುನಾವಣೆ ಎದುರಿಸಲು ಸಿದ್ದರಾದರು. ಟಿಕೆಟ್ ಸಹ ಘೋಷಣೆಯಾಯ್ತು.
ಎದುರಾಳಿ ಯಾರೆಂದು ಕಾಯುತ್ತಿದ್ದ ಶ್ರೀರಾಮುಲುಗೆ ತುಕರಾಂ ನಿಶ್ಚಿತ ರಾದರು. ಸಚಿವ ನಾಂಗ್ರೇಂದ್ರ ಮತ್ತು ತುಕರಾಂ ಬಿಟ್ಟು ಬೇರೆಯವರು ಎದುರಾಳಿ ಅಭ್ಯರ್ಥಿಯಾಗಿದ್ದರೆ ಶ್ರೀರಾಮುಲು ಅವರ ಗೆಲುವಿನ ಬಗ್ಗೆ ಅನುಮಾನವೇ ಬೇಡ ಎಂಬಂತಿತ್ತು ಅವರ ಪಡೆ.
ಆದರೆ ಈಗ ಸಂಡೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾದಕರಾಗಿರುವ, ಮಾಜಿ ಸಚಿವ ಇ.ತುಕರಾಂ ಕಾಂಗ್ರೆಸ್ ಅಭ್ಯರ್ಥಿಯಾಗಲು ಮುಂದಾಗಿರುವುದು. ಶ್ರೀರಾಮುಲು ಅವರು ಗೆಲುವಿಗಾಗಿ ಶ್ರಮ ಪಡಬೇಕಾದ ಪರಿಸ್ಥಿತಿ ಉಂಟಾಗಬಹುದು.
@12bc = ತುಕರಾಂ ಹಿನ್ನಲೆ.
ಎಂ.ಕಾಂ.ಪದವೀಧರರಾದ ತುಕರಾಂ ಅವರು ವಿ.ಎಸ್.ಲಾಡ್ ಗಣಿ ಕಂಪನಿಯ ಉದ್ಯೋಗಿ. ಲಾಡ್ ಮನೆತನದ ನಂಬುಗೆಯ ಬಂಟ.
ಸಂಡೂರು ಕ್ಷೇತ್ರ ಎಸ್ಟಿಗೆ ಮೀಸಲಾದ್ದರಿಂದ ಅಂದು ಶಾಸಕರಾಗಿದ್ದ ಸಂತೋಷ್ ಲಾಡ್, ತನ್ನ ಉತ್ತರಾಧಿಕಾರಿಯಾಗಿ ತುಕರಾಂ  ಅವರನ್ನು 2008 ರಲ್ಲಿ ಶಾಸಕರನ್ನಾಗಿಸುವಲ್ಲಿ ಯಶಸ್ವಿಯಾದರು.
ನಂತರ ನಿರಂತರವಾಗಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲೇ ಸಚಿವರಾಗಿದ್ದರು. ಕ್ಷೇತ್ತದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು. ಈವರಗೆ ನೇರವಾಗಿ ಭ್ರಷ್ಟಾಚಾರದ ಆರೋಪಕ್ಕೂ ಗುರಿಯಾಗದವರು. ಕಾಂಟ್ರವರ್ಸಿಗಳಿಂದ ದೂರ ಒರಲು ಬಯಸುವ ವ್ಯಕ್ತಿ.
ಕಾಂಗ್ರೆಸ್ ಬಲ:
ಕ್ಷೇತ್ರದಲ್ಲಿ 8 ಶಾಸಕರ ಪೈಕಿ ಆರು ಜನ ಕಾಂಗ್ರೆಸ್ ಶಾಸಕರು ಮತ್ತು ಜೆಡಿಎಸ್, ಬಿಜೆಪಿಯಿಂದ ತಲಾ ಒಬ್ಬರು ಶಾಸಕರಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಕಾಂಗ್ರೆಸ್ ಶಕ್ತಿಯುತವಾಗಿ ಕಾಣುತ್ತಿರುವುದು ಮತ್ತು ತಮ್ಮ ರಾಜಕೀಯ ಗುರು ಸಂತೋಷ್ ಲಾಡ್ ಮಾರ್ಗದರ್ಶನ, ಪಂಚ ಗ್ಯಾರೆಂಟಿಗಳ ಫಲ ತುಕರಾಂ ಅವರಿಗೆ ಗೆಲುವಿನ ಆತ್ಮವಿಶ್ವಾಸ ಮೂಡಿಸಲಿದೆ ಎನ್ನಬಹುದು. 
ಮೋದಿ ಮೇನಿಯಾ:
ಕಳೆದ ಎರೆಡು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯ ನಾಮ ಬಲ ಮತ್ತು ಹಿಂದುತ್ವ, ರಾಷ್ಟ್ರೀಯ ಭದ್ರತೆ ವಿಷಯಗಳೇ ಮುಖ್ಯವಾಗಿ ಬಿಜೆಪಿಗೆ ಜನ ಶಕ್ತಿ ತುಂಬುತ್ತಿರುವುದು.  ಮತ್ತು ವಾಲ್ಮೀಕಿ ಸಮುದಾಯದಲ್ಲಿ ತನ್ನಂತ ನಾಯಕನಿಗೆ ಸೋಲು ಕಂಡಿದ್ದರ ಬಗ್ಗೆ ಸಮುದಾಯದ ಅನುಕಂಪ ಇದೆ. ಬಳ್ಳಾರಿ ಕ್ಷೇತ್ರದ ಜನತೆ ತನ್ನ ಕೈ ಬಿಡಲಾರದೆಂಬ ನಂಬಿಕೆ  ಶ್ರೀರಾಮುಲು ಅವರಲ್ಲೂ ಗೆಲುವಿನ ವಿಶ್ವಾಸಕ್ಕೆ ಇಂಬು ನೀಡಿದೆ ಎನ್ನಬಹುದು.