ಪೂರ್ವಭಾವಿ ಸಿದ್ಧತಾ ಸಭೆ
ಲಕ್ಷ್ಮೇಶ್ವರ,ಮಾ.22:ಪ್ರಸಕ್ತ 2023 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇದೇ ಮಾರ್ಚ್ 25 ರಿಂದ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತಿಯ ಸಾಮಥ್ರ್ಯ ಸೌಧದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಪರೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಪೂರ್ವಭಾವಿ ಸಿದ್ಧತಾ ಸಭೆ ಗುರುವಾರಜರುಗಿತು.
ಸಭೆಯಲ್ಲಿ ಶಿಕ್ಷಣ ಸಂಯೋಜಕ ಉಮೇಶ್ ಹುಚ್ಚಯ್ಯನ ಮಠ ಅವರು ಸಮಗ್ರ ಮಾಹಿತಿ ನೀಡಿ ತಾಲೂಕಿನಲ್ಲಿ ಒಟ್ಟು 14 ಸರ್ಕಾರಿ ಎಂಟು ಅನುದಾನಿತ ಮತ್ತು 11 ಅನುದಾನ ರಹಿತ ಶಾಲೆಗಳಿದ್ದು ಒಟ್ಟು ಲಕ್ಷ್ಮೇಶ್ವರ ತಾಲೂಕಿನಲ್ಲಿ 33 ಶಾಲೆಗಳಿವೆ ಎಂದು ಮತ್ತು ಒಟ್ಟು 1698 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದ ಅವರು ಪರೀಕ್ಷಾ ಕಾರ್ಯಕ್ಕಾಗಿ ಒಟ್ಟು 166 ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದರು ತಾಲೂಕಿನಲ್ಲಿ ಲಕ್ಷ್ಮೇಶ್ವರದಲ್ಲಿ ಮೂರು ಪರೀಕ್ಷಾ ಕೇಂದ್ರಗಳು ಬಡ್ನಿಯಲ್ಲಿ ಒಂದು ಶಿಗ್ಲಿ ಗ್ರಾಮದಲ್ಲಿ ಒಂದು ಬಾಲೆಹೊಸೂರಿನಲ್ಲಿ ಒಂದು ಒಟ್ಟು ಆರು ಪರೀಕ್ಷಾ ಕೇಂದ್ರಗಳಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ್ ವಿ ಸ್ವಾಮಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ ಕೃಷ್ಣಪ್ಪ ಅವರು ಎಲ್ಲಾ ಅಧಿಕಾರಿಗಳಿಗೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವತೆಯಿಂದ ಕಾರ್ಯನಿರ್ವಹಿಸಬೇಕು ನಕಲು ಮುಕ್ತ ಪರೀಕ್ಷೆ ಮಾಡಿ ಕಳೆದ ವರ್ಷದಂತೆಯೇ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಈ ಬಾರಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡುವಂತೆ ಪ್ರಯತ್ನಿಸಬೇಕು ಎಂದು ಹೇಳಿದರು ಪೆÇಲೀಸ ಇಲಾಖೆಗೆ ಕೆ.ಎಸ್.ಆರ್.ಟಿ.ಗೆ ಕೆಎಸ್‍ಆರ್ಟಿಸಿಗೆ ಆರೋಗ್ಯ ಇಲಾಖೆಗೆ ಉಭಯ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದರು ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ತಾಪಸಕರ ಅವರು ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಹೆಚ್ಚಳಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಈಶ್ವರ್ ಮೆಡ್ಲೇರಿ ಉಮೇಶ ನೇಕಾರ ಉಮೇಶ್ ಹುಚ್ಚಯ್ಯನ ಮಠ ಇದ್ದರು.