ವಿದ್ಯಾರ್ಥಿಗಳಿಗೆ ಬಣ್ಣ ಎರಚಬೇಡಿ
ನವಲಗುಂದ,ಮಾ.22: : ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹೋಳಿ ಹಬ್ಬದೊಂದಿಗೆ ಮಾರ್ಚ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಪ್ರಾರಂಭವಾಗುತ್ತಿವೆ. ಹುಣ್ಣಿಮೆಯ ದಿನ ಸೋಮವಾರ ದಿನ ಪರೀಕ್ಷೆಗೆ ತೆರಳುವ ಮಕ್ಕಳಿಗೆ ಬಣ್ಣ ಎರಚುವುದು ಸೇರಿದಂತೆ ಯಾವುದೇ ರೀತಿಯ ಒತ್ತಾಯ ಮಾಡಬಾರದು ಎಂದು ಶಾಸಕ ಎನ್ ಎಚ್ ಕೋನರಡ್ಡಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
“ಎಲ್ಲ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಬೇಕು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಪರೀಕ್ಷಾ ದಿನದಂದು ಆಯಾ ಕೇಂದ್ರಗಳಲ್ಲಿ ಪೆÇಲೀಸ್ ಇಲಾಖೆಯಿಂದ ಭದ್ರತೆ ನೀಡಲಿದೆ.
ಮಹದಾಯಿ ಹೋರಾಟಗಾರರ ಬಂಧನ ಖಂಡನೆ.
ಮಹದಾಯಿ ಹೋರಾಟಗಾರ ಖುತುಬುದ್ದೀನ ಖಾಜಿಯವರನ್ನು ಹುಬ್ಬಳ್ಳಿ ರೈಲ್ವೆ ಪೆÇಲೀಸರು ಬಂಧಿಸಿದ್ದನ್ನು ಶಾಸಕ ಕೋನರಡ್ಡಿಯವರು ತೀವ್ರವಾಗಿ ಖಂಡಿಸಿದ್ದಾರೆ ತಕ್ಷಣವೇ ಅ ರೈತನನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.