ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕುಕ್ಕರ್ ಗಳ ವಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.22: ನಗರದ ವಡ್ಡರ ಬಂಡೆ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 5.5 ಲಕ್ಷ. ಮೌಲ್ಯದ ಕುಕ್ಕರ್, ಪ್ಯಾನ್, ಗ್ಯಾಸ್ ಸ್ಟೋ ಮೊದಲಾದ ಗೃಹ ಉಪಯೋಗಿ ವಸ್ತುಗಳನ್ನು ಬ್ರೂಸ್  ಪೇಟೆ ಪೊಲೀಸರು  ಸೀಜ್ ಮಾಡಿದ್ದಾರೆ.
ವಡ್ಡರ ಬಂಡೆಯ ಗೋದಾಮಿನಲ್ಲಿ 300 ಕುಕ್ಕರ್, 150 ಗ್ಯಾಸ್ ಒಲೆ , 66 ಸಿಲಿಂಗ್ ಪ್ಯಾನ್‌ ಗಳನ್ನು ಉತ್ತರ ಪ್ರದೇಶ ಮೂಲದ ವ್ಯಾಪಾರಿಗಳು ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದರು.
ಅವರು ಅವನ್ನು ತೆಗೆದುಕೊಂಡು ಹಳ್ಳಿಗಳಿಗೆ ತೆರಳಿ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಕಾನೂನು ರೀತಿಯಲ್ಲಿ ಅನಧಿಕೃತವಾಗಿ ಇವುಗಳ ಸಂಗ್ರಹ ವಾಗಿತ್ತು. ಇವನ್ನು ಚುನಾವಣೆಯಲ್ಲಿ ಹಂಚಲು ಸಂಗ್ರಹ ಮಾಡಿತ್ತು ಎಂದು
ಒಂದು ಟಾಟಾ ಏಸ್ ವಾಹನ ಸಮೇತ ಜಪ್ತಿ ಮಾಡಿದ್ದಾರೆ ಬ್ರೂಸ್ ಪೇಟೆ ಪೊಲೀಸರು.
ಕಳೆದ ವಿಧಾನಸಭಾ ಚುನಾವಣೆಯ ಮುನ್ನ ತಮ್ಮ ಹುಟ್ಟು ಹಬ್ಬದ ಹಿನ್ನಲೆಯಲ್ಲಿ  ಕ್ಷೇತ್ರದ ಮತದಾರರ ಕುಟುಂಬಗಳಿಗೆ ಕುಕ್ಕರ್ ಹಂಚುವ ಮೂಲಕ ಜನಪ್ರಿಯರಾದರು ನಗರ ಶಾಸಕ ನಾರಾ ಭರತ್ ರೆಡ್ಡಿ. ಅದಕ್ಕಾಗಿ ಅದೇರೀತಿ ಮಾಡಲು  ಇವುಗಳ ಸಂಗ್ರಹ ಆಗಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ.
ಈ ರೀತಿ ಖರೀದಿಯ ಬಿಲ್ ಇಲ್ಲದೇ ಸಂಗ್ರಹಿಸುವ  ಅನಧಿಕೃತ ವಸ್ತುಗಳನ್ನು ಪತ್ತೆಹಚ್ಚುವುದಾದರೆ ಪೊಲೀಸರು ದಿನ ನಿತ್ಯ ಹೈದ್ರಾಬಾದ್, ಬೆಂಗಳೂರಿನಿಂದ ಬರುವ ಖಾಸಗಿ ವಸ್ತುಗಳ ಪರಿಶೀಲನೆ ಮಾಡಿದರೆ  ಒಳಿತು.