ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಲು ಕರೆ
ಚನ್ನಮ್ಮನ ಕಿತ್ತೂರು,ಮಾ.22: ಹಿಂದುಗಳ ಪವಿತ್ರ ಹಬ್ಬ ಹೋಳಿ ಮತ್ತು ಮುಸ್ಲಿಂರ ಪ್ರಮುಖ ಹಬ್ಬವಾದ ರಂಜಾನ್ ಹಬ್ಬವನ್ನು ಅತ್ಯಂತ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕೆಂದು ಎಂದು ಸಿಪಿಐ ಎಂ. ಎಂ. ದಪ್ಪಿನ ಹೇಳಿದರು.
ಸ್ಥಳೀಯ ಪೆÇಲೀಸ್ ಠಾಣೆ ಆವರಣದಲ್ಲಿ ಹೋಳಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಶಾಂತಿ ಪಾಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಿತ್ತೂರ ಪಟ್ಟಣ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದು ಹಿಂದೂ ಮತ್ತು ಮುಸ್ಲಿಂರು ಜೊತೆಗೂಡಿ ಶಾಂತತೆಯಿಂದ ಹಬ್ಬಗಳನ್ನು ಆಚರಿಸಬೇಕು. ಅಹಿತಕರ ಘಟಣೆಗಳಿಗೆ ಆಸ್ಪದ ನೀಡಬಾರದು ಹಾಗೇನಾದರೂ ಕಂಡುಬಂದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಿದರೆ ಅಂತವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಈ ಭಾರಿ ಲೋಕಸಾಭಾ ಚುನಾವಣೆ ಇರುವುದರಿಂದ ಎಲ್ಲ ಕಡೆಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇದ್ದು ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದರು ಎಂದರು.
ಈ ವೇಳೆ ಪಿಎಸ್‍ಐ ಪ್ರವೀಣ ಗಂಗೋಳ ಮಾತನಾಡಿ ಈ ಬಾರಿ ದೇಶದಾದ್ಯಂತ ಲೋಕಸಾಭಾ ಚುನಾವಣೆ ಮತ್ತು ಎಸ್‍ಎಸ್‍ಎಲ್ಸಿ ಪರೀಕ್ಷೆ ಏಕಕಾಲಕ್ಕೆ ಆರಂಭವಾಗಿದೆ. ಕೆಮಿಕಲ್ ಯುಕ್ತ ಬಣ್ಣಗಳನ್ನು ಬಳಸಬಾರದು. ಮತ್ತು ಒತ್ತಾಯಪೂರ್ವಕವಾಗಿ ಬಣ್ಣವನ್ನು ಯಾರಿಗೂ ಹಚ್ಚಬಾರದು.
ಒಟ್ಟಾರೆಯಾಗಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೆÇೀಲಿಸರೊಂದಿಗೆ ಸಹಕರಿಸಿ ಹೋಳಿ ಹಬ್ಬವನ್ನು ಆಚರಿಸಬೇಕು. ಈ ಬಾರಿ ಎಸ್‍ಎಸ್‍ಎಲ್ಸಿ ಪರೀಕ್ಷೆ ಇರುವುದರಿಂದು ಡಿಜೆ (ಧ್ವನಿವರ್ಧಕ) ಬಳಸಲು ಅನುಮತಿನೀಡಲಾಗುವುದಿಲ್ಲ. ಯಾವುದೇ ಸಮಸ್ಯೆಯಾದರೆ ತಕ್ಷಣ ಪೆÇಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದ ಅವರು ಯಾರಾದರೂ ಕಾನೂನು ಮೀರಿ ಅಹಿತಕರ ಘಟನಗಳನ್ನು ಮಾಡಲು ಮುಂದಾದರೆ ಅಂತವರನ್ನು ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುದು ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ಮಾತನಾಡಿ ಎಸ್‍ಎಸ್‍ಎಲ್ ಸಿ. ಪರೀಕ್ಷೆ ಆರಂಭವಾಗುವುದರಿಂದ ವಿದ್ಯಾರ್ಥಿ ಓದಿಗೆ ತೊಂದರೆಯಾಗದಂತೆ ಹಲಗೆ ಬಾರಿಸಬಾರದು. ಪೆÇೀಷಕರು ತಮ್ಮ-ತಮ್ಮ ಮಕ್ಕಳಿಗೆ ಹೇಳಬೇಕು. ಹೋಳಿ ಕಾಮಣ್ಣನ ದಹನ ಮಾಡುವಾಗ ಮತ್ತು ಬಣ್ಣ ಆಚರಣೆ ದಿನದಂದು ಕೆಲವರು ಬೈಕಗಳ ಸೈಲನ್ಸರ್ ತೆಗೆದು ಗಾಡಿ ಜೋರಾಗಿ ಓಡಿಸುತ್ತಾರೆ ಅಂತವರನ್ನು ಪೆÇೀಲಿಸ್ ಇಲಾಖೆ ನಿಗಾವಹಿಸಿ ಅವರ ಬೈಕ ಮತ್ತು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದರು.
ಈ ವೇಳೆ ದಿನೇಶ ವಳಸಂಗ, ಶಿವಾನಂದ ಹಿರೇಮಠ, ಮಾತನಾಡಿದರು
ಸೋಮಶೇಖರ ಮುತ್ತೇನ್ನವರ, ಸಂಜು ಲೋಕಾಪೂರ, ಮುಸ್ತಾಕ ಸುತಗಟ್ಟಿ, ಯಲ್ಲಪ್ಪ ಮಣ್ಣವಡ್ಡರ, ಆನಂದ ಚಕಡಿ, ಶಿವಪ್ಪ ಉಡಕೇರಿ ಸೇರಿದಂತೆ ಸಾರ್ವಜನಿಕರಿದ್ದರು.