ಗ್ರಾಮಸ್ತರಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ: ಮನವಿ
ಶಿರಹಟ್ಟಿ,ಮಾ22: ಸ್ವಾತಂತ್ರ ಯೋಧರ ನಾಡು ಎಂದೇ ಪ್ರಸಿದ್ಧಿ ಪಡೆದ ತಾಲೂಕಿನ ಕೋಗನೂರು ಗ್ರಾಮಸ್ಥರಿಂದ ಈ ಬಾರಿ ನಡೆಯುವ ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದು, ಶಿರಹಟ್ಟಿ ತಹಶೀಲ್ದಾರರ ಮುಖಾಂತರ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೊಗನೂರು ಗ್ರಾಮಸ್ಥರು ನಮಗೆ ಯಾವುದೇ ರೀತಿಯ ನ್ಯಾಯ ಸಿಕ್ಕಿಲ್ಲ, ಈ ಬಾರಿ ನಾವೆಲ್ಲರೂ ಮತ ಹಾಕಲ್ಲ ಇದಕ್ಕೆ ಪೂರಕವಾಗಿ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುವ ಕುರಿತು ತಹಶೀಲ್ದಾರ್ ಅನೀ¯ ಬಡಿಗೇರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅನೇಕ ಮೂಲಭೂತ ಸೌಕರ್ಯಗಳಿಂದ ನಮ್ಮ ಗ್ರಾಮ ವಂಚಿತವಾಗಿದೆ ಎಂದು ಬೇಸರದಿಂದ ಕೊಗನೂರು ಗ್ರಾಮಸ್ಥರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುವ ಕುರಿತು ಮನವಿ ಪತ್ರವನ್ನು ಶಿರಹಟ್ಟಿ ತಹಸೀಲ್ದಾರ್ ಅನಿಲ್ ಬಡಿಗೇರ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಊರಿನ ಯುವ ಮುಖಂಡರಾದ ರಾಖೇಶ ಬೂದಿಹಾಳ. ರಮೇಶ ಕೂರಗುಂದ. ಮುತ್ತು ತಳವಾರ, ಕೊಟ್ರೇಶ ಪಾಣಿಗಟ್ಟಿ, ಪುಟ್ಟರಾಜ ಬಸಾಪುರ, ಪರತಗೌಡ ಬಸಾಪುರ ಉಪಸ್ಥಿತರಿದ್ದರು.