ಮಾ.22ಕ್ಕೆ ಜೆಎಸ್‍ಎಸ್ ಪದವೀಧರರ ದಿನಾಚರಣೆ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.22:- ಜೆಎಸ್‍ಎಸ್ ವೈದ್ಯಕೀಯ ಮಹಾ ವಿದ್ಯಾಲಯದ ಪದವೀಧರರ ದಿನಾಚರಣೆ ಇದೇ ಮಾ. 23 ರ ಸಂಜೆ ನಾಲ್ಕಕ್ಕೆ ಜೆಎಸ್‍ಎಸ್ ವೈದ್ಯಕೀಯ ಸಂಸ್ಥೆಗಳ ಕ್ಯಾಂಪಸ್‍ನಲ್ಲಿ ನಡೆಯುತ್ತಿದೆ. ಈ ವೇಳೆ 204 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಹಾಗೂ ಎಂಟು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು 12 ಚಿನ್ನದ ಪದಕ ಹಾಗೂ 12 ನಗದು ಬಹುಮಾನ ಸ್ವೀಕರಿಸಲಿದ್ದಾರೆ ಎಂದು ಪ್ರಾಚಾರ್ಯರಾದ ಡಾ.ಎಚ್. ಬಸವನಗೌಡಪ್ಪ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜೆಎಸ್‍ಎಸ್ ಮಹ ವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದಶಿ ಡಾ.ಸಿ.ಜಿ. ಬೆಟ್‍ಸೂರ್‍ಮಠ ಅಧ್ಯಕ್ಷತೆ ವಹಿಸುವರು, ಡಾ.ಬಿ. ಸುರೇಶ್ ಮತ್ತು ಡಾ. ಸುರೀಂದರ್ ಸಿಂಗ್ ವೇದಿಕೆಯಲ್ಲಿರುವರು.
ಪದ್ಮಶ್ರೀ ಪುರಸ್ಕೃತ ಹಾಗೂ ಮುಂಬಯಿಯ ಲೀಲಾವತಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಹಿರಿ ಸಮಾಲೋಚಕ ಡಾ. ಶಶಾಂಕ್ ಆರ್. ಜೋಶಿ ಅವರು ಮುಖ್ಯ ಅತಿಥಿಳಾಗಿರುವರು. ಇನ್ನು, ಕೋಲ್ಕತಾ ಮೂಲದ ಡಾ. ಸುಬ್ರದೀಪ್ ಧಾರ್ ಆರು ಚಿನ್ನದ ಪದಕ, ನಗರದ ಡಾ. ರೋಹಿತ್ ಆರ್. ನಾಯರ್ ಮೂರು ಚಿನ್ನದ ಪದಕ, ನಗರದವರೇ ಆದ ಡಾ.ಎಸ್.ಎಂ. ತೇಜಾಶ್ರೀ ಎರಡು ಚಿನ್ನದ ಪದಕ ಪಡೆದು ಮೊದಲ ಪಟ್ಟಿಯಲ್ಲಿದ್ದಾರೆಂದರು.