ಮಾರ್ಚ್ 28ರಂದು ಹೆಬ್ಬಸೂರಿನಲ್ಲಿ ಶಾರದಾ ಕೃಪಾ ಸಭಾಭವನ ಉದ್ಘಾಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.22- ಶೃಂಗೇರಿ ಶ್ರೀ ಶಾರದಾ ಪೀಠದಶಾಖೆ ಹೆಬ್ಬಸೂರಿನಲ್ಲಿ ನಿರ್ಮಿಸಿರುವ ಶಾರದಾ ಕೃಪಾ ಸಭಾಭವನವನ್ನು ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಮಾರ್ಚ್ 28 ರಂದು ವಿಜಯಯಾತ್ರೆಯ ಮೂಲಕ ಹೆಬ್ಬಸೂರು ಗ್ರಾಮಕ್ಕೆ ಆಗಮಿಸಿ ಎರಡು ದಿನಗಳ ಕಾಲ ಶಂಕರ ಮಠದಲ್ಲಿ ವಾಸ್ತವ್ಯವನ್ನು ಮಾಡಿ, ನೂತನವಾಗಿ ನಿರ್ಮಿಸಿರುವ ಶಾರದಾ ಕೃಪಾ ಸಭಾಭವನವನ್ನು ಉದ್ಘಾಟಿಸಲಿದ್ದಾರೆ.
ಇದರ ಅಂಗವಾಗಿ ಮಾರ್ಚ್23 ಶನಿವಾರದಿಂದ30 ರವರೆಗೆ ವಿವಿಧಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ವಾಸ್ತು ಹೋಮ, ಮಹಾ ಗಣಪತಿ ಹೋಮ,ಶತ ಚಂಡಿಕಾಯಾಗ, ಋಗ್ವೇದ ಸಂಹಿತಾಯಾಗ ಚತುರ್ವೇದ ಪಾರಾಯಣಗಳನ್ನು ನೆರವೇರಿಸಲಾಗುವುದು ಎಂದು ಶಾಖಾಮಠದ ಧರ್ಮಾಧಿಕಾರಿಗಳಾದ ಎಚ್‍ಎಸ್ ಶ್ರೀಧರ್ ಪ್ರಸಾದ್ ತಿಳಿಸಿದ್ದಾರೆ.
ಮಾರ್ಚ್ 23 ರಿಂದ ಪ್ರತಿನಿತ್ಯ ಋಗ್ವೇದ ಸಂಹಿತಾಯಾಗ ನಡೆಯಲಿದ್ದು 28ರ ಗುರುವಾರ ಸಂಜೆ 5:30ಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಭೂಷಿತ ಶ್ರೀ ಶ್ರೀ ವಿಧು ಶೇಖರ ಭಾರತೀ ಸನ್ನಿಧಾನಂಗಳವರು ಗ್ರಾಮಕ್ಕೆ ಆಗಮಿಸಲಿದ್ದುಅಂದು ನೂತನ ಸಭಾಭವನ ಉದ್ಘಾಟನೆ ಹಾಗೂ ಧೂಳಿ ಪಾದಪೂಜೆ, ಶ್ರೀ ಶೃಂಗೇರಿ ಜಗದ್ಗುರುಗಳಿಂದ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ, ಗುರುಪಾದಕ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
29ರ ಶುಕ್ರವಾರ ಬೆಳಿಗ್ಗೆ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶಾರದಾಂಬೆಯ ಪೂಜೆ, ಗುರುಪಾದಕ ಪೂಜೆ, ಭಿಕ್ಷವಂದನೆ, ಶತಚಂಡಿಕಾಯಾಗ ಪೂರ್ಣಹುತಿ ನಡೆಯಲಿದೆ. ಸಂಜೆ 5.30ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು ಆಡಳಿತ ಅಧಿಕಾರಿಗಳಾಗಿ ನಿವೃತ್ತರಾದ ಪದ್ಮಶ್ರೀ ಗುರು ಸೇವಾ ದೂರಿನಡಾ. ವಿ.ಆರ್.ಗೌರಿಶಂಕರ್ ಅವರಿಗೆ ಅಭಿನಂದನೆ ಹಾಗೂ ಈಗಿನ ಆಡಳಿತ ಅಧಿಕಾರಿ,
ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಪಿ.ಎ. ಮುರಳಿರವರನ್ನು ಸನ್ಮಾನಿಸಲಾಗುವುದು ಹಾಗೂ 30 ಶನಿವಾರ ಜಗದ್ಗುರುಗಳವರು ಮೈಸೂರಿಗೆ ವಿಜಯಯಾತ್ರೆ ಮುಂದು ವರೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.