ಮಾ.25ರಿಂದ ಸಿಇಟಿ ತರಬೇತಿ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.22:- ತಾಂಡವಪುರದಲ್ಲಿನ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯದ ವತಿಯಿಂದ ಇದೇ ಮಾ. 25 ರಿಂದ ಏ. ಎಂಟರವರೆಗೆ 12 ದಿನಗಳ ಸಿಇಟಿ ಉಚಿತ ತರಬೇತಿ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಬುದ್ಧಿಮತ್ತೆ ಮತ್ತು ತಂತ್ರಾಂಶ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮೊಹಮ್ಮದ್ ಸಲಾಮತ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ತರಬೇತಿ ವೇಳೆ ಮೈಸೂರು, ಚಾಮರಾಜನಗರ, ನಂಜನಗೂಡು, ಟಿ. ನರಸೀಪುರ, ಎಚ್.ಡಿ. ಕೋಟೆ, ಗುಂಡ್ಲುಪೇಟೆ, ಮಳವಳ್ಳಿ, ಸರಗೂರು, ಕೆ.ಆರ್. ನಗರ, ಕೆ.ಆರ್. ಪೇಟೆ ಮತ್ತು ಹುಣಸೂರಿನಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ, ಅಲ್ಲದೆ, ಮಧ್ಯಾಹ್ನದ ಊಟದ ವ್ಯವಸ್ಥೆ ಸಹಾ ಇರಲಿದ್ದು, ನಗರದ ಪ್ರತಿಷ್ಠಿತ ಪಿಯು ಕಾಲೇಜುಗಳ ಪರಿಣಿತ ಹಾಗೂ ಅನುಭವಿ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ದೂ. 99808 32371 ನ್ನು ಸಂಪರ್ಕಿಸಬಹದಾಗಿದೆ ಎಂದು ತಿಳಿಸಿದರು.ಪ್ರದೀಪ್ ಹಾಜರಿದ್ದರು.